ಮಾಗಡಿ ತಾಲೂಕಿನಲ್ಲಿ ಶೇ. ನೂರರಷ್ಟು ಯಶಸ್ವಿ
Team Udayavani, Jan 20, 2020, 6:20 PM IST
ಮಾಗಡಿ: ತಾಲೂಕಿನಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಶೇ.100 ರಷ್ಟು ಯಶಸ್ವಿಗೊಳಿಸಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದರು.
ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 13,300 ಇದ್ದು, ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಹಮ್ಮಿಕೊಂಡಿದ್ದೇವೆ. ಮಾಗಡಿ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 92 ಕಡೆ ಲಸಿಕಾ ಕೇಂದ್ರ ತೆರೆಯಲಾಗಿದೆ. ಮಕ್ಕಳ ಬೆಳವಣಿಗೆ ಕುಂಠಿತ ತಡೆ ಹಾಗೂ ಅಂಗವಿಕಲತೆ ತಡೆಗಾಗಿ ಕಡ್ಡಾಯವಾಗಿ 5ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು. ಈ ಎರಡು ಹನಿ ಲಸಿಕೆ ಹಾಕಿಸುವುದರಿಂದ ಜೀವನ ಪೂರ್ತಿ ಪೋಲಿಯೋ ಮುಕ್ತರಾಗಿ ಜೀವಿಸಬಹುದು. ಈ ಮೂಲಕ ಎಲ್ಲರೂ ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಿ ಎಂದರು.
ಸೋಮವಾರ ಮತ್ತು ಮಂಗಳವಾರವೂ ಸಹ ನಮ್ಮ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಮನೆ ಮನೆಗೆ ತೆರಳಿ ಪೋಲಿಯೋ ಹನಿ ವಂಚಿತ ಮಕ್ಕಳಿಗೆ ಲಸಿಕೆ ಹಾಕುವುದಾಗಿ ವಿವರಿಸಿದರು. ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ರೋಟರಿ ಮಾಗಡಿ ಸೆಂಟ್ರಲ್ ಸಹಕಾರ ನೀಡಿದ್ದಾಗಿ ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಸಿದ್ದಲಿಂಗಯ್ಯ ತಿಳಿಸಿದರು.
ಆರೋಗ್ಯಾಧಿಕಾರಿ ಡಾ.ರಾಜೇಶ್, ಪುರಸಭಾ ಸದಸ್ಯ ಎಚ್. ಜೆ.ಪುರುಶೋತ್ತಮ್, ಎಂ.ಎನ್.ಮಂಜುನಾಥ್, ಹಿರಿಯಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ರಂಗನಾಥ್, ವಕೀಲ ಡಿ.ಎಚ್. ಮಲ್ಲಿಕಾರ್ಜುನಯ್ಯ, ಆರೋಗ್ಯ ಸಹಾಯಕರಾದ ತುಕಾ ರಾಮ್, ಅಣ್ಣೇಗೌಡ, ಲೋಕೇಶ್‌ಗೌಡ, ಮಂಜುಳಾ, ರೊಟರಿ ಮಾಗಡಿ ಸೆಂಟ್ರಲ್ ಕಾರ್ಯದರ್ಶಿ ಶಂಕರ್, ಪದಾಧಿಕಾರಿಗಳಾದ ಡಾ. ಮಂಜುನಾಥ್ ಬೆಟಗೇರಿ, ಸತೀಶ್ ಪ್ರಸಾದ್, ಕುಮಾರ್, ಲೋಕೇಶ್, ಶಾರದ, ಗಣೇಶ್, ಮೋಹನ್, ದಕ್ಷಿಣಮೂರ್ತಿ, ವೇಣಗೋಪಾಲ್, ನಾಗೇಶ್,ವೆಂಕಟೇಶ್, ಯೋಗೇಶ್, ಲತಾ, ರಂಗನಾಥ್,ಸೌಮ್ಯ, ನೇಹಾ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.