ದೇಶದ ಅತಿದೊಡ್ಡ ಮೇಳಕ್ಕೆ ಸಾಕ್ಷಿಯಾಗಲಿದೆ ಐಐಎಚ್‌ಆರ್‌

Team Udayavani, Jan 21, 2020, 3:08 AM IST

deshada

ಬೆಂಗಳೂರು: ದೇಶದ ಅತಿದೊಡ್ಡ ತೋಟಗಾರಿಕೆ ಮೇಳಕ್ಕೆ ಇಲ್ಲಿನ ಹೆಸರಘಟ್ಟ ಈ ಬಾರಿ ಸಾಕ್ಷಿಯಾಗಲಿದ್ದು, ಕೇಂದ್ರದ ಮಹತ್ವಾಕಾಂಕ್ಷಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅಗ್ಗದ ಬೆಲೆಯಲ್ಲಿ ಹೈಟೆಕ್‌ ಬೇಸಾಯ ತಂತ್ರಜ್ಞಾನಗಳನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಈ ಮೇಳದಲ್ಲಿ ಪರಿಚಯಿಸುತ್ತಿದೆ.

ಸಾಮಾನ್ಯವಾಗಿ ಇಲ್ಲಿ ನಡೆಯುವ ರಾಷ್ಟ್ರೀಯ ತೋಟಗಾರಿಕೆ ಮೇಳಗಳಲ್ಲಿ ದೇಶದ 20-22 ರಾಜ್ಯಗಳಿಂದ ಸುಮಾರು 20ರಿಂದ 30 ಸಾವಿರ ರೈತರು ಭಾಗವಹಿಸುತ್ತಿದ್ದರು. ಆದರೆ, ಈ ಸಲ ಜಮ್ಮು-ಕಾಶ್ಮೀರ ಸೇರಿದಂತೆ ದೇಶದ 30 ರಾಜ್ಯಗಳಿಂದ ದುಪ್ಪಟ್ಟು ಅಂದರೆ 50 ಸಾವಿರಕ್ಕೂ ಅಧಿಕ ರೈತರು ಭೇಟಿ ನೀಡುವ ನಿರೀಕ್ಷೆ ಇದೆ. ಹಾಗಾಗಿ, ಇದು ದೇಶದ ಅತಿದೊಡ್ಡ ಹಾಗೂ ಹೈಟೆಕ್‌ ಮೇಳವೂ ಆಗಲಿದೆ.

ಕಳೆದ ಬಾರಿ 55 ಬೆಳೆಗಳ 289 ತಳಿಗಳನ್ನು ಪ್ರದರ್ಶಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಪಟ್ಟಿಗೆ ಇನ್ನೂ 15-20 ತಳಿಗಳು ಸೇರ್ಪಡೆಯಾಗಲಿವೆ. ಈ ಬಾರಿಯ ಮೇಳದ ಶೀರ್ಷಿಕೆ “ಕೃಷಿಯನ್ನು ಉದ್ದಿಮೆಯನ್ನಾಗಿಸಲು ತೋಟಗಾರಿಕೆ’ ಆಗಿದೆ. ಇದಕ್ಕೆ ಪೂರಕವಾಗಿ ಕೃಷಿಯನ್ನು ಉದ್ಯಮವನ್ನಾಗಿ ಮಾಡಿಕೊಂಡ 425ಕ್ಕೂ ಅಧಿಕ ಕಂಪೆನಿಗಳು ಐಐಎಚ್‌ಆರ್‌ನಿಂದಲೇ 850ಕ್ಕೂ ಅಧಿಕ ತಂತ್ರಜ್ಞಾನಗಳಿಗೆ ಪರವಾನಗಿ ಪಡೆದಿವೆ. ಅವುಗಳ ಉತ್ಪನ್ನಗಳ ಪ್ರದರ್ಶನವೂ ಇಲ್ಲಿ ಇರಲಿದೆ.

ಅಲ್ಲದೆ, ಸಮಗ್ರ ಕೃಷಿ ಪದ್ಧತಿ, ಸೊಪ್ಪು ಸೇರಿದಂತೆ 22ಕ್ಕೂ ಅಧಿಕ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಹೆಚ್ಚು ಇಳುವರಿ ಪಡೆಯುವಂತಹ ಹತ್ತಾರು ತಂತ್ರಜ್ಞಾನಗಳು ಮೇಳದಲ್ಲಿ ಅನಾವರಣಗೊಳ್ಳಲಿವೆ. ಇದೆಲ್ಲದರಿಂದಾಗಿ ಹೆಸರೇ ಸೂಚಿಸುವಂತೆ ಇದೊಂದು ಸಾರ್ಥಕ ರಾಷ್ಟ್ರೀಯ ತೋಟಗಾರಿಕೆ ಮೇಳ ಆಗಲಿದೆ ಎಂದು ಐಐಎಚ್‌ಆರ್‌ ಪ್ರಧಾನ ವಿಜ್ಞಾನಿ (ತರಕಾರಿ ಬೆಳೆಗಳ ವಿಭಾಗ) ಹಾಗೂ ಆಯೋಜನಾ ಸಮಿತಿ ಕಾರ್ಯದರ್ಶಿ ಡಾ.ಎಂ.ವಿ. ಧನಂಜಯ್‌ “ಉದಯವಾಣಿ’ಗೆ ತಿಳಿಸಿದರು.

ಇನ್ನು ಕೃಷಿಯನ್ನು ಲಾಭದಾಯಕಗೊಳಿಸುವುದು ಹಾಗೂ ತಂತ್ರಜ್ಞಾನಗಳ ಬಳಕೆ ಮೂಲಕ ಯುವಕರನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಸಂರಕ್ಷಿತ ಬೇಸಾಯ ಪದ್ಧತಿಗೆ ನಾಲ್ಕು ದಿನಗಳ ಮೇಳದಲ್ಲಿ ಆದ್ಯತೆ ನೀಡಲಾಗಿದೆ. ಸಂರಕ್ಷಿತ ಬೇಸಾಯ ಪದ್ಧತಿಗಳಾದ ಹಸಿರುಮನೆ (ಪಾಲಿಹೌಸ್‌) ಹಾಗೂ ನೆರಳು ಪರದೆ (ಶೇಡ್‌ನೆಟ್‌)ಯನ್ನು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಕಡಿಮೆ ಬೆಲೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ನಾಲ್ಕು ದಿನಗಳ ಮೇಳದಲ್ಲಿ ಮಾಹಿತಿ ನೀಡಲಾಗುವುದು. ಈ ವಿಧಾನಗಳಲ್ಲಿ ಎಲ್ಲ ವರ್ಗದ ರೈತರು ದೇಶದ ನಾನಾ ಭಾಗಗಳಲ್ಲಿ ಬೆಳೆಯಬಹುದಾಗಿದೆ. ಇದಕ್ಕಾಗಿ ಹಲವು ಶಿಷ್ಟಾಚಾರ, ವಿಶೇಷ ತಳಿಗಳು, ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ಹೇಳಿದರು.

ಇಸ್ರೇಲ್‌ ಮಾದರಿ 14 ಸಾವಿರ; ಐಐಎಚ್‌ಆರ್‌ ಮಾದರಿ 800 ರೂ.!: “ಹಸಿರು ಮನೆ ಮತ್ತು ನೆರಳು ಪರದೆಯು ಈಗಲೂ ಸಾಮಾನ್ಯ ರೈತರಿಗೆ ಕೈಗೆಟುಕದ ವಿಧಾನಗಳಾಗಿದ್ದು, ಸೀಮಿತ ವರ್ಗ ಅನುಸರಿಸುವ ಕ್ರಮವಾಗಿದೆ. ಉದಾಹರಣೆಗೆ ಇಸ್ರೇಲ್‌ ಮಾದರಿಯ ಪಾಲಿಹೌಸ್‌ ಚದರ ಮೀಟರ್‌ಗೆ 14 ಸಾವಿರ ರೂ. ಆಗುತ್ತದೆ. ಹಾಗಾಗಿ, ಸಣ್ಣ ರೈತರಿಗೆ ಇದು ಎಟಕುವುದೇ ಇಲ್ಲ. ಐಐಎಚ್‌ಆರ್‌ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗ ಳಿಂದ ಈ ಎರಡೂ ಪದ್ಧತಿಗಳು ಕ್ರಮವಾಗಿ 300-350 ಹಾಗೂ 800 ರೂ. ಆಗುತ್ತದೆ. ಅಷ್ಟೇ ಅಲ್ಲ, ಆಯಾ ಪ್ರದೇಶಕ್ಕೆ ತಕ್ಕಂತೆ ಅನುಸರಿಸುವ ವಿಧಾನಗಳೂ ಇವೆ ಎಂದರು.

ನೆರಳು ಪರದೆಯಲ್ಲಿ ಕ್ಯಾಪ್ಸಿಕಂ, ಸೌತೆಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ಅನಂತಪುರ ಸೇರಿದಂತೆ 50 ಕಡೆಗಳಲ್ಲಿ ಪ್ರಾಯೋಗಿಕವಾಗಿ ಈ ಅಗ್ಗದ ಪಾಲಿಹೌಸ್‌ಗಳ ಪ್ರಯೋಗ ಮಾಡಲಾಗಿದೆ. ಅಲ್ಲೆಲ್ಲಾ ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ, ಅಧಿಕ ಇಳುವರಿ ಜತೆಗೆ ಗುಣಮಟ್ಟದ ಬೆಳೆ ಬಂದಿದೆ. ಇದು ರೈತರ ಆದಾಯ ದ್ವಿಗುಣಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಎಂದು ಪಿಎಂಇ ಘಟಕ (ಆದ್ಯತೆ, ನಿರ್ವಹಣೆ, ಮೌಲ್ಯಮಾಪನ)ದ ನೋಡಲ್‌ ಅಧಿಕಾರಿ ಡಾ.ಟಿ.ಎಸ್‌. ಅಘೋರ ತಿಳಿಸಿದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

1-horoscope

Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ

MUDA CASE: ಸಿಎಂ ಆಪ್ತ, ಸಂಸದ ಇ.ಡಿ. ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Eshwara Khandre: ಪಶ್ಚಿಮಘಟ್ಟ ನದಿ ನೀರು ಪೂರೈಕೆ ನಗರಗಳಿಗೆ ಸೆಸ್‌

Eshwara Khandre: ಪಶ್ಚಿಮಘಟ್ಟ ನದಿ ನೀರು ಪೂರೈಕೆ ನಗರಗಳಿಗೆ ಸೆಸ್‌

UBI: ಸಿಬಿಐಗೆ ವಾಲ್ಮೀಕಿ ನಿಗಮ ಕೇಸ್‌: ಹೈಕೋರ್ಟ್‌ ನಕಾರ

UBI: ಸಿಬಿಐಗೆ ವಾಲ್ಮೀಕಿ ನಿಗಮ ಕೇಸ್‌: ಹೈಕೋರ್ಟ್‌ ನಕಾರ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.