28 ವಯಸ್ಸಿಗೆ ಬಾಧಿಸುವ ನೂರೆಂಟು ಸಮಸ್ಯೆಗಳು
Team Udayavani, Jan 21, 2020, 5:19 AM IST
ಒತ್ತಡದ ಬದುಕಿನ ಶೈಲಿಯಿಂದ ಕೆಲವು ನೋವುಗಳು ಮಹಿಳೆಯರನ್ನೇ ಹೆಚ್ಚಾಗಿ ಕಾಡುವುದಿದೆ. ಅದೂ ವಯಸ್ಸು 28 ದಾಟಿದರೆ ಸಾಕು, ಒಂದಲ್ಲ ಒಂದು ರೀತಿಯ ನೋವು.ನೋವು ನಿವಾರಕ ಔಷಧಗಳು ತಾತ್ಕಾಲಿಕ ಪರಿಹಾರ ಒದಗಿಸುತ್ತವೆ.ಶಾಶ್ವತ ಪರಿಹಾರಕ್ಕಾಗಿ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದು ಬಹು ಮುಖ್ಯ.
ವ ಯಸ್ಸು ಇಪ್ಪತ್ತೆಂಟಾಯಿತು.ಮನೆ,ಮಕ್ಕಳು ಹೀಗೆ ಸಂಸಾರದ ಜವಾಬ್ದಾರಿಯನ್ನು ಹೊರುವ ಜತೆಗೆ, ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸ ಲೇಬೇಕಾದ ಸಮಯ. ಕೆಲಸಕ್ಕೆ ಹೋಗುವ ಮಹಿಳೆಯರಾದರೆ ತಾಪತ್ರಯ ಒಂದೆರಡಲ್ಲ. ಮಕ್ಕಳನ್ನು ಶಾಲೆಗೆ ಕಳುಹಿ ಸುವುದರಿಂದ ಹಿಡಿದು, ಮನೆಗೆಲ ಸವನ್ನೂ ಜತೆಗೆ ಮಾಡಿ ಮುಗಿಸಿಕೊಳ್ಳುವಷ್ಟರಲ್ಲಿ ಅರ್ಧ ಜೀವ ಹೋದಂತಾಗುತ್ತದೆ. ದುರಂತದ ವಿಷಯವೆಂದರೆ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಉಂಟಾ ಗುವುದು ಇದೇ ವಯಸ್ಸಿನಲ್ಲಿ. ಒಂದುಚೂರು ಬಿಡುವಿಲ್ಲದೆ ದುಡಿಯ ಬೇಕಾದ ಅನಿವಾರ್ಯದ ನಡುವೆ ಬದುಕು ಹೈರಾಣಾಗುವುದೂ ಈಗಲೇ. ಇಂತಹ ವೇಳೆಯಲ್ಲಿ ಬಾಧಿಸುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಬೆಳಗ್ಗೆ ಮನೆಗೆಲಸ, ಹಗಲು ಹೊತ್ತಿನಲ್ಲಿ ಕಚೇರಿ ಕೆಲಸ, ಮತ್ತೆ ರಾತ್ರಿ ಹೊತ್ತಿನಲ್ಲಿ ಮನೆಗೆಲಸ. ಹೀಗೆ ವಿಶ್ರಾಂತಿಯೇ ಇಲ್ಲದೆ ದುಡಿಯುವುದರಿಂದ ಬೆನ್ನು ನೋವು, ಸೊಂಟ ನೋವಿನಂತಹ ತೊಂದರೆಗಳು ಸಾಮಾನ್ಯ. ಫೀಲ್ಡ್ ವರ್ಕ್, ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವವರಿಗೆ ತಲೆನೋವು ನಿತ್ಯದ ಗೋಳಾಗುತ್ತದೆ. ಈ ನೋವುಗಳುಬದುಕನ್ನೇ ಹಿಂಡಿ ಹಿಪ್ಪೆ ಮಾಡುವುದಿದೆ. ಅತ್ತ ಕೆಲಸ ಮಾಡಲೂ ಆಗದೆ, ಇತ್ತ ವಿಶ್ರಾಂತಿ ಪಡೆಯಲೂ ಸಾಧ್ಯವಾಗದೆ ಗೋಳಿನ ನಡುವೆ ಬದುಕಬೇಕಾದ ಸ್ಥಿತಿ ಆಕೆಯದ್ದು.
ನೋವು ನಿವಾರಕ
ಮಾತ್ರೆ ತೆಗೆದುಕೊಳ್ಳದಿರಿ
ವೈದ್ಯರ ಸಲಹೆ ಇಲ್ಲದೆ, ಮೆಡಿಕಲ್ ಶಾಪ್‌ಗ್ಳಿಂದ ನೋವು ನಿವಾರಕ ಮಾತ್ರೆಗಳನ್ನು ಖರೀದಿಸಿ ಸೇವಿಸುವುದು ತೀರಾ ಅಪಾಯಕಾರಿ. ಕೆಲವರು ನಿರಂತರವಾಗಿ ಇಂತಹ ಮಾತ್ರೆ ಗಳನ್ನು ಸೇವಿಸುತ್ತಿರುವುದು ಕಿಡ್ನಿ ವೈಫಲ್ಯ ದಂತಹ ತೀವ್ರ ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳದಿರು ವುದೇ ಉತ್ತಮ ಎನ್ನುತ್ತಾರೆ ವೈದ್ಯರು.
ಮನೆಯಲ್ಲೇ
ಪ್ರಯೋಗ ಬೇಡ
ಯಾವುದೇ ಕಾಯಿಲೆಗಳಿದ್ದರೂ ಅದಕ್ಕೆ ಮನೆಯಲ್ಲೇ ಚಿಕಿತ್ಸೆ ಮಾಡಿಕೊಳ್ಳುವುದಕ್ಕಿಂತ ವೈದ್ಯರ ಸಲಹೆ ಪಡೆದೇ ಮುಂದುವರಿಯುವುದು ಉತ್ತಮ. ಅಮೃತಾಂಜನ ಹಚ್ಚುವುದು, ನೋವು ನಿವಾರಕ ಮುಲಾಮುಗಳನ್ನು ಹಚ್ಚುವುದರಿಂದ ಒಂದು ಕ್ಷಣದ ಇಲ್ಲವೇ ಒಂದು ದಿನದ ನಿರಾಳತೆ ಪಡೆಯಬಹುದಷ್ಟೆ. ಆದರೆ ಜೀವನದಲ್ಲೇ ಮತ್ತೆಂದೂ ಇಂತಹ ಕಾಯಿಲೆಗಳು ಕಾಡದಂತೆ ಆಗಬೇಕಾದರೆ ದೇಸೀ ಚಿಕಿತ್ಸೆಗಳ ಮೊರೆ ಹೋಗಬೇಕು ಎನ್ನುತ್ತಾರೆ ತಜ್ಞರು.
ನಿತ್ಯದ ಕೆಲಸವೇ ಕಾರಣ
ವಿಶ್ರಾಂತಿ ಇಲ್ಲದೆ ದುಡಿಯುವುದು, ದೇಹಕ್ಕೆ ವ್ಯಾಯಾಮ ಇಲ್ಲದಿರುವುದು, ನಡಿಗೆಗೆ ಪ್ರಾಶಸ್ತ್ಯ ಕೊಡದಿರುವುದು… ಇವೇ ಮುಂತಾದ ಕಾರಣಗಳಿಂದಾಗಿ ಸೊಂಟ ನೋವು, ಬೆನ್ನು ನೋವುಗಳು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಮಯವನ್ನು ದ್ವಿಚಕ್ರ ವಾಹನ ಚಾಲನೆಯಲ್ಲೇ ಕಳೆಯುವುದರಿಂದ ಬೆನ್ನು ನೋವು ಬಾಧಿಸುವುದರ ಜತೆಗೆ ಕುತ್ತಿಗೆ ನೋವು ಕೂಡ ಕಾಡುತ್ತದೆ. ಇನ್ನು ಕಂಪ್ಯೂಟರ್ ಮುಂದೆ ಕುಳಿತೇ ಕೆಲಸ ಮಾಡುವುದರಿಂದ ಸೊಂಟನೋವು, ಬೆನ್ನು ನೋವು ಎರಡೂ ಹಿಂಸೆ ಅನುಭವಿಸಬೇಕಾಗಿ ಬರುತ್ತದೆ. ನಿರಂತರ ಕಂಪ್ಯೂಟರ್ ವೀಕ್ಷಣೆ, ಬಿಸಿಲಿನಲ್ಲಿ ಓಡಾಟ ತಲೆನೋವಿಗೆ ಕಾರಣ. ಹೀಗೆ ದಿನನಿತ್ಯದ ಯಾಂತ್ರಿಕ ಜೀವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ.
ಸಾಂಪ್ರದಾಯಿಕ ಚಿಕಿತ್ಸೆ ಉತ್ತಮ
ದಿನನಿತ್ಯ ಕಾಡುವ ಇಂಥ ರೋಗಗಳಿಗೆ ಅಲೋ ಪಥಿ ಔಷಧಗಳು ಪರಿಣಾಮಕಾರಿಯಾಗುವುದಿಲ್ಲ. ಒಂದೆರಡು ದಿನದ ಮಟ್ಟಿಗೆ ನೋವು ನಿವಾರಕ ಔಷಧ ವಾಗಿ ಅವನ್ನು ಸೇವಿಸಬಹುದೇ ವಿನಾ ದಿನಂಪ್ರತಿ ಈ ಮಾತ್ರೆ, ಔಷಧಗಳನ್ನು ತೆಗೆದುಕೊಂಡರೆ ಒಂದು ಸಮಸ್ಯೆಯನ್ನು ನಿವಾರಿಸಲು ಹೋಗಿ ಮತ್ತೂಂದು ಕಾಯಿಲೆಯ ದಾಸರಾಗಬೇಕಾಗಬಹುದು. ಅದಕ್ಕಾಗಿ ದೀರ್ಘಕಾಲ ಕಾಡುವ ಯಾವುದೇ ರೋಗಗಳಿಗೆ ಸಾಂಪ್ರದಾಯಿಕ ಮತ್ತು ದೇಸೀ ಚಿಕಿತ್ಸಾ ಪದ್ಧತಿಯೇ ಅತ್ಯುತ್ತಮ ಪರಿಹಾರ ವಿಧಾನ. ಮುಖ್ಯವಾಗಿ ನ್ಯಾಚುರೋಪಥಿ, ಆಯುರ್ವೇದಿಕ್, ಅಕ್ಯುಪ್ರಶರ್, ರೇಖೀ, ಯೋಗ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆ ಇಂತಹ ಕಾಯಿಲೆಗಳಿಗೆ ಅತ್ಯುತ್ತಮ ಔಷಧಗಳಾಗಿವೆ. ಇವು ಪರಿಣಾಮ ಬೀರುವುದು ನಿಧಾನವಾದರೂ ಸಂಯಮದಿಂದ ಕಾದರೆ ಸಂಪೂರ್ಣ ರೋಗವಾಸಿಯಾಗುವುದು ಸಾಧ್ಯವಿದೆ. ಇಂತಹ ಚಿಕಿತ್ಸಾ ಪದ್ಧತಿಗಳಲ್ಲಿ ಪ್ರಮುಖವಾಗಿ ವೈದ್ಯರು ಹೇಳಿದ ಪಥ್ಯಗಳನ್ನು ಚಾಚೂತಪ್ಪದೆ ಪಾಲಿಸಬೇಕು.
- ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ
KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ
BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!
Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ
Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.