ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ದ ಮಕ್ಕಳ ಕರಕುಶಲ ಮೇಳ
ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶೇಷ ಪ್ರಯತ್ನ
Team Udayavani, Jan 21, 2020, 5:42 AM IST
ಬಿದ್ಕಲ್‌ಕಟ್ಟೆ: ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ಶಾಲಾ ವಿಭಾಗದ 6-7ನೇ ತರಗತಿಯ ವಿದ್ಯಾರ್ಥಿಗಳ ಮೀನಾ ಕ್ಲಬ್ ಸಹಯೋಗದಲ್ಲಿ ಜ.19 ರಂದು ನಡೆದ ಕರಕುಶಲ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಇದರಲ್ಲಿ ನೂರೈವತ್ತಕ್ಕೂ ಹೆಚ್ಚು ವಿವಿಧ ವಿನ್ಯಾಸದ ಕಲಾಕೃತಿಗಳು ಪ್ರದರ್ಶಿತಗೊಂಡಿದ್ದವು.
ವಿದ್ಯಾರ್ಥಿಗಳ ಸೃಷ್ಟಿ
ಶಾಲೆ ವೇಳಾಪಟ್ಟಿಯಲ್ಲಿ ಸಾಮಾಜಿಕ ಉಪಯುಕ್ತ ಉತ್ಪಾದನೆ ಕಾರ್ಯ (ಸಾ.ಉ.ಉ.ಕಾ.)ಕ್ಕೆ ವಾರದಲ್ಲಿ ಒಂದು ಅವಧಿ ನಿಗದಿಯಾಗಿದ್ದು, ಪ್ರತಿ ವಿದ್ಯಾರ್ಥಿ ಶಿಕ್ಷಕರ ಮಾರ್ಗದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಲಾತ್ಮಕ ಉಪಯುಕ್ತ ವೀಡಿಯೋಗಳನ್ನು ವೀಕ್ಷಿಸಿ ಅನಂತರ ಸ್ವಂತ ಕಲಾಕೃತಿಗಳನ್ನು ರೂಪಿಸಿದ್ದಾರೆ.
ನೈಜ ವಸ್ತುಗಳನ್ನು ಮೀರಿಸುವ ಪ್ರತಿಕೃತಿ
ನಿರುಪಯುಕ್ತ ವಸ್ತು ಗಳನ್ನೇ ಬಳಸಿಕೊಂಡು ವೈವಿಧ್ಯಮಯ ಆಟಿಕೆಗಳು, ಆಕೃತಿಗಳು, ಹೂಗುತ್ಛ, ಪೆನ್ ಸ್ಟಾಂಡ್, ಆಲಂಕಾರಿಕ ವಸ್ತುಗಳನ್ನು ರಚಿಸಿದ್ದಾರೆ. 6 ತಂಡಗಳಲ್ಲಿ 150ಕ್ಕೂ ಹೆಚ್ಚು ಮಾದರಿಗಳನ್ನು ರಚಿಸಲಾಗಿದ್ದು, ಅವುಗಳ ಮೌಲ್ಯಕ್ಕೆ ತಕ್ಕಂತೆ ಅಂಕಗಳನ್ನು ನೀಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗಿದೆ.
ಈ ಸಂದರ್ಭದಲ್ಲಿ ದೆ„ಹಿಕ ಶಿಕ್ಷಣ ಶಿಕ್ಷಕರಾದ ಉದಯಕುಮಾರ್ ಶೆಟ್ಟಿ, ಸಹಶಿಕ್ಷಕರಾದ ಪುಷ್ಪಾ, ಸತೀಶ್ ಶೆಟ್ಟಿಗಾರ್, ರಮಣಿ, ಚಿತ್ರಾಕುಮಾರಿ, ಶಂಕರ ದೇವಾಡಿಗ, ಪುರುಷೋತ್ತಮ, ಅತಿಥಿ ಶಿಕ್ಷಕಿಯರಾದ ನಂದಿನಿ, ನಾಗರತ್ನ, ಭಾರತಿ, ಅವಕಾಶ ಫೌಂಡೇಶನ್ ಶಿಕ್ಷಕಿ ಪವಿತ್ರಾ, ಪೂರ್ವ ಪ್ರಾಥಮಿಕ ಶಿಕ್ಷಕಿಯರಾದ ದೀಪಿಕಾ, ಸೌಮ್ಯಾ ಉಪಸ್ಥಿತರಿದ್ದರು.
ಸಂಪೂರ್ಣ ಯಶಸ್ವಿ
ಮಕ್ಕಳಲ್ಲಿ ಏಕಾಗ್ರತೆ, ಕೌಶಲ ವೃದ್ಧಿಸುವುದಕ್ಕೆ ಇಂತಹ ವಿಭಿನ್ನ ಕಾರ್ಯ ಚಟುವಟಿಕೆಗಳು ಸಹಕಾರಿ. ಪ್ರತೀ ವರ್ಷ ಮಕ್ಕಳಿಗೆ ಈ ಅಪೂರ್ವ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಪ್ರದರ್ಶನ ಸಂಪೂರ್ಣ ಯಶಸ್ವಿಯಾಗಿದೆ.
-ನಾಗರತ್ನ. ಮುಖ್ಯೋಪಾಧ್ಯಾಯಿನಿ, ಕರ್ನಾಟಕ ಪಬ್ಲಿಕ್ ಸ್ಕೂಲ್
ಇತರರಿಗೆ ಪ್ರೇರಣೆ
ಮಕ್ಕಳ ಮನಸ್ಸು
ಮತ್ತು ಭಾವನೆಗಳಿಗೆ ಪೂರಕವಾಗಿ ವೇದಿಕೆ ಕಲ್ಪಿಸುವ ನಿಟ್ಟಿನಿಂದ ಸಂಸ್ಥೆ ನಿರಂತರವಾಗಿ ಪಠ್ಯೇತರ ಚಟುವಟಿಕೆಗೂ ಸಮಾನ ಅವಕಾಶ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಳ್ಳುವುದರಿಂದ ಇತರರಿಗೂ ಪ್ರೇರಣೆಯಾಗುತ್ತದೆ.
-ಸತೀಶ್ ಶೆಟ್ಟಿಗಾರ ಜಪ್ತಿ, ಸಹಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.