ಶತಮಾನ ಪೂರೈಸಿದ ಶಾಲೆಗಳಲ್ಲಿ ಹತ್ತಿಪ್ಪತ್ತು ಮಕ್ಕಳು!
Team Udayavani, Jan 21, 2020, 5:06 PM IST
ಕೋಲಾರ: ಜಿಲ್ಲೆಯಲ್ಲಿ ಮೊದಲ ಸರ್ಕಾರಿ ಶಾಲೆ ಆರಂಭವಾಗಿ 151 ವರ್ಷ ಕಳೆದಿದೆ. ಆರಂಭದಲ್ಲಿ ಮಕ್ಕಳಿಗೆ ಸರ್ಕಾರಿ ಶಾಲೆಯ ಶಿಕ್ಷಣ ಕೈಗೆಟುಕದ ಕುಸುಮವಾಗಿದ್ದರೆ, ಈಗ ಬಹುತೇಕ ಸರ್ಕಾರಿ ಶಾಲೆ ಗಳಿಗೆ ಮಕ್ಕಳೇ ಎಟುಕದಂತಾಗಿರುವುದು ವಿಶೇಷ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಶತಮಾನ ಪೂರೈಸಿದ ನಾಲ್ಕೈದು ಶಾಲೆಗಳಿದ್ದು, ನಗರ ಮಟ್ಟದಲ್ಲಿ ಮಕ್ಕಳ ಸಂಖ್ಯೆ ಕೈಬೆರಳೆಣಿಕೆಯಷ್ಟಿದ್ದರೆ, ಗ್ರಾಮೀಣ ಭಾಗದಲ್ಲಿ ಇಂದಿಗೂ ಸ್ಥಳೀಯರ ನಂಬಿಕೆ ಉಳಿಸಿ ಕೊಂಡಿರುವ ಕಾರಣ ಮಕ್ಕಳ ಸಂಖ್ಯೆ ನೂರರ ಸಂಖ್ಯೆ ಯಲ್ಲಿರುವುದು ಸಮಾಧಾನಕರ ಸಂಗತಿ.
653 ಶಾಲೆಗಳಿಗೆ 50 ವರ್ಷಗಳು: ಸಾರ್ವಜನಿಕ ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಮೊದಲಿಗೆ 1869ರಲ್ಲಿ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭವಾಯಿತು. ಇದಾದ ನಂತರ 1872ರಲ್ಲಿ ಬಂಗಾರಪೇಟೆ ತಾಲೂಕಿನ ಐತಾಂಡ್ಲಹಳ್ಳಿ, ನಂತರ ಜಿಲ್ಲಾ ಕೇಂದ್ರ ಕೋಲಾರದಲ್ಲಿ 1893ರಲ್ಲಿ ಓಲ್ಡ್ ಮಿಡ್ಲ್ ಸ್ಕೂಲ್, ಜೂನಿಯರ್ ಕಾಲೇಜುಗಳು ಆರಂಭವಾಗಿ 127 ವರ್ಷ ಪೂರ್ಣಗೊಳಿಸಿವೆ. ಜಿಲ್ಲೆಯಲ್ಲಿ ಪ್ರಸ್ತುತ 1924 ಸರ್ಕಾರಿ ಹಾಗೂ 101 ಅನುದಾನಿತ ಶಾಲೆಗಳಿದ್ದು, ಒಟ್ಟು 2025 ಶಾಲೆಗಳ ಪೈಕಿ ಬಹುತೇಕ ಸರ್ಕಾರಿ ಶಾಲೆಗಳು 25 ವರ್ಷಗಳ ಹಿಂದೆಯೇ ಆರಂಭವಾಗಿವೆ. 50 ವರ್ಷಗಳ ಹಿಂದಿ ನಿಂದ 151 ವರ್ಷಗಳವರೆಗೂ 653 ಸರ್ಕಾರಿ ಶಾಲೆಗಳಿವೆ.
ಮಕ್ಕಳ ಕೊರತೆ: ಶತಮಾನ ತುಂಬಿದ ಸರ್ಕಾರಿ ಶಾಲೆಗಳ ಪೈಕಿ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಸದ್ಯ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣ ಹಳೇ ಮಾಧ್ಯಮಿಕ ಶಾಲೆ ಉತ್ತಮ ಉದಾ ಹರಣೆಯಾಗಿದೆ. 30 ವರ್ಷಗಳ ಹಿಂದೆ ಸಾವಿರ ಸಂಖ್ಯೆ ಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳ ಸಂಖ್ಯೆ ಈಗ ಇಪ್ಪತ್ತರ ಆಸುಪಾಸಿಗೆ ಬಂದಿದೆ. ನಗರ ಪ್ರದೇಶಗಳಲ್ಲಿ ಅತಿ ಹೆಚ್ಚಾಗಿರುವ ಖಾಸಗಿ ಆಂಗ್ಲಮಾಧ್ಯಮ ಶಾಲೆ ಗಳಿಗೆ ಸರ್ಕಾರಿ ಶಾಲೆ ಮಕ್ಕಳು ಆಸಕ್ತಿ ತೋರಿಸು ತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದೇ ಪರಿಸ್ಥಿತಿ ಬಹುತೇಕ ತಾಲೂಕು ಕೇಂದ್ರ ಗಳ ಶತಮಾನ ತುಂಬಿದ ಶಾಲೆಗಳ ಪರಿಸ್ಥಿತಿಯೂ ಆಗಿದೆ.
ನಂಬಿಕೆ ಉಳಿಸಿಕೊಂಡ ಗ್ರಾಮೀಣ ಶಾಲೆಗಳು: ಕೋಲಾರ ತಾಲೂಕಿನ ವೇಮಗಲ್‌ನಲ್ಲಿರುವ ಸರ್ಕಾರಿ ಶಾಲೆ 1915ರಲ್ಲಿ ಆರಂಭವಾಗಿ ಸದ್ಯ 105 ವರ್ಷಗಳನ್ನು ಪೂರೈಸಿದೆ. ಮಾಜಿ ಸಭಾಪತಿ ವಿ.ಆರ್. ಸುದರ್ಶನ್‌ರ ತಂದೆ ರಾಮಶೆಟ್ಟಿ ಆರಂಭಿಕವಾಗಿ ಉಚಿತವಾಗಿ ಜಾಗ ನೀಡಿ ಆರಂಭಿಸಿದ ಸರ್ಕಾರಿ ಶಾಲೆ ಇದು. ಇಂದಿಗೂ ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳನ್ನು ಹೊಂದಿ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಪ್ರಸ್ತುತ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಟ್ಟು, ಆಂಗ್ಲಮಾಧ್ಯಮ ಶಿಕ್ಷಣವೂ ಆರಂಭವಾಗಿದೆ. ದಾನಿಗಳ ನೆರವಿನಿಂದ ಕಂಪ್ಯೂಟರ್ ಮತ್ತಿತರ ಸೌಲಭ್ಯಗಳನ್ನು ಪಡೆದುಕೊಂಡ ವೇಮಗಲ್ ಶಾಲೆ ಶತಮಾನ ತುಂಬಿದ ಶಾಲೆಗಳ ಪೈಕಿ ಮಾದರಿಯಾಗಿದೆ.
ಮೂರೇ ಶಾಲೆಗೆ ಅನುದಾನ!: ಜಿಲ್ಲೆಯಲ್ಲಿ ಐವತ್ತಕ್ಕೂ ಹೆಚ್ಚು ಶತಮಾನ ತುಂಬಿದ ಶಾಲೆಗಳಿದ್ದರೂ, ಸರ್ಕಾರ ಕೇವಲ ಮೂರೇ ಶಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ. ಕೋಲಾರ ತಾಲೂಕಿನ ವೇಮಗಲ್ ಹಿರಿಯ ಪ್ರಾಥಮಿಕ ಶಾಲೆ, ಕೋಲಾರದ ಪದವಿ ಪೂರ್ವ ಕಾಲೇಜು ಹಾಗೂ ಬಂಗಾರಪೇಟೆ ಹಿರಿಯ ಪ್ರಾಥಮಿಕ ಶಾಲೆಗಳ ದುರಸ್ತಿಗೆ ತಲಾ 2.50 ಲಕ್ಷ ರೂ. ಅನ್ನು ಬಿಡುಗಡೆ ಮಾಡಿದೆ. ಉಳಿದ ನೂರು ತುಂಬಿದ ಶಾಲೆಗಳು ದುರಸ್ತಿಗಾಗಿ ಕಾದು ಕುಳಿತಿದೆ. ಖಾಸಗಿ ಶಾಲೆಗಳಲ್ಲಿ ವ್ಯಾಸಂಗ: ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿಯವರೆಗೂ 2.26 ಲಕ್ಷ ಮಂದಿ ಓದುತ್ತಿದ್ದರೆ, 2025 ಸರ್ಕಾರಿ ಮತ್ತು ಅನುದಾನಿತ
ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಒಟ್ಟು 1.08 ಲಕ್ಷ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಸಂಖ್ಯೆ 2025 ಇದ್ದರೂ ಮಕ್ಕಳ ಸಂಖ್ಯೆ 1.08 ಲಕ್ಷ ಇದ್ದರೆ, ಖಾಸಗಿ ಶಾಲೆಗಳು ಐದು ನೂರು ಆಸುಪಾಸಿನಲ್ಲಿವೆ. ಮಕ್ಕಳ ಸಂಖ್ಯೆ 1 ಲಕ್ಷಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಇದು ಪೋಷಕರು ಹಾಗೂ ಮಕ್ಕಳು ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳನ್ನು ಎಷ್ಟರ ಮಟ್ಟಿಗೆ ಅವಲಂಬಿ ಸಿದ್ದಾರೆನ್ನುವುದಕ್ಕೆ ಸಾಕ್ಷಿಯಾಗಿದೆ.
ಶಿಥಲಗೊಂಡ ಕೊಠಡಿ : ಕೋಲಾರ ಜಿಲ್ಲೆಯಲ್ಲಿ 230 ಸಂಖ್ಯೆಯ ಕೊಠಡಿಗಳು ಶಿಥಿಲಗೊಂಡಿವೆ ಎಂದು ವರದಿ ತಯಾರಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ 222 ಹಾಗೂ ಪ್ರೌಢಶಾಲಾ ಹಂತದಲ್ಲಿ 8 ಶಾಲಾ ಕೊಠಡಿಗಳು ಶಿಥಿಲಗೊಂಡಿರುವ ಶಾಲೆಗಳಾಗಿವೆ. ಸುಮಾರು 294ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶುದ್ಧ ಕುಡಿಯುವನೀರಿನ ಫಿಲ್ಟರ್‌ಗಳನ್ನು ಅಳವಡಿಸಲು ಪ್ರಸ್ತಾಪನೆ ಕಳುಹಿಸಲಾಗಿದೆ.
ಶಿಕ್ಷಕರ ಕೊರತೆ : ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆ ಗಳಲ್ಲಿ ಒಟ್ಟು 6917 ಮಂದಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 6205 ಮತ್ತು ಅನುದಾನಿತ ಶಾಲೆಗಳಲ್ಲಿ 712 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇನ್ನೂರಕ್ಕೂ ಹೆಚ್ಚು ಮಂದಿ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳ ಶಿಕ್ಷಕರ ಕೊರತೆ ಎದುರಾಗಿದೆ. ಇದನ್ನು ಸ್ಥಳೀಯವಾಗಿಯೇ ತುಂಬಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯಕ್ರಮ ತೆಗೆದುಕೊಂಡಿದೆ.
ಪ್ರತಿ ವರ್ಷವೂ ಮಕ್ಕಳ ಸಂಖ್ಯೆ ಗಣನೀಯ ಕುಸಿತ : ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ನೂರರಿಂದ ಸಾವಿರ ಸಂಖ್ಯೆಯಲ್ಲಿ ಕುಂಠಿತವಾಗುತ್ತಿದೆ. ಐದಾರು ವರ್ಷಗಳ ಹಿಂದಷ್ಟೇ 1.50 ಲಕ್ಷ ಮಂದಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಸದ್ಯಕ್ಕೆ ಈ ಸಂಖ್ಯೆ 1.08ಕ್ಕೆ ಕುಸಿದಿರುವುದೇ ಸಾಕ್ಷಿಯಾಗಿದೆ. ಪೋಷಕರು ಹಾಗೂ ಮಕ್ಕಳಲ್ಲಿ ನಂಬಿಕೆ ಹುಟ್ಟಿಸಿ ಮಕ್ಕಳ ಸಂಖ್ಯೆಯ ಹೆಚ್ಚಿಸದ ಹೊರತು, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೋಟ್ಯಂತರ ರೂಪಾಯಿ ವ್ಯಯಿಸುವುದು ವ್ಯರ್ಥವೆನಿಸುತ್ತದೆ.
ಮೈದಾನ, ಶೌಚಾಲಯ ಕೊರತೆ : ಕೋಲಾರ ಜಿಲ್ಲೆಯ ಒಟ್ಟು ಶಾಲೆಗಳ ಪೈಕಿ 272 ಪ್ರಾಥಮಿಕ ಹಾಗೂ 40 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 312 ಶಾಲೆಗಳಲ್ಲಿ ಶೌಚಾಲಯ ಗಳಿಲ್ಲ. 576 ಪ್ರಾಥಮಿಕ ಹಾಗೂ 48 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 624 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. 251 ಪ್ರಾಥಮಿಕ ಹಾಗೂ 38 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 289 ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲವಾಗಿದೆ.
ಮೈದಾನ, ಶೌಚಾಲಯ ಕೊರತೆ : ಕೋಲಾರ ಜಿಲ್ಲೆಯ ಒಟ್ಟು ಶಾಲೆಗಳ ಪೈಕಿ 272 ಪ್ರಾಥಮಿಕ ಹಾಗೂ 40 ಪ್ರೌಢಶಾಲೆಗಳು ಸೇರಿ ದಂತೆ ಒಟ್ಟು 312 ಶಾಲೆಗಳಲ್ಲಿ ಶೌಚಾಲಯ ಗಳಿಲ್ಲ. 576 ಪ್ರಾಥಮಿಕ ಹಾಗೂ 48 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 624 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. 251 ಪ್ರಾಥಮಿಕ ಹಾಗೂ 38 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 289 ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲವಾಗಿದೆ.
ಶತಮಾನ ತುಂಬಿದ ಐತಿಹಾಸಿಕ ಸರ್ಕಾರಿ ಶಾಲೆಗಳನ್ನು ಕಟ್ಟಡ ವಿನ್ಯಾಸ ಬದಲಾಯಿಸದೆ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಸಲುವಾಗಿ ಸರ್ಕಾರದ ಅನುದಾನದ ಜೊತೆಗೆ ರೋಟರಿ ಮತ್ತಿತರ ಸಂಘ ಸಂಸ್ಥೆಗಳ ನೆರವು ಕೋರಲಾಗಿದೆ. ಸ್ಥಳೀಯವಾಗಿ ಸಿಗುವ ನೆರವಿನಿಂದ ಐತಿಹಾಸಿಕ ಶಾಲೆಗಳನ್ನು ಉಳಿಸಿ ಬೆಳೆಸಲು ಯೋಜಿಸಲಾಗಿದೆ. – ಕೆ.ರತ್ನಯ್ಯ, ಡಿಡಿಪಿಐ, ಕೋಲಾರ
–ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.