ಇನ್ನು ICICI ಬ್ಯಾಂಕಿನ ATMನಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಬೇಕಾಗಿಲ್ಲ; ಇಲ್ಲಿದೆ ಮಾಹಿತಿ
Team Udayavani, Jan 21, 2020, 6:39 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಮುಂಬಯಿ: ಡೆಬಿಟ್ ಕಾರ್ಡ್ ರಹಿತ ಎಟಿಎಂ ವ್ಯವಹಾರಕ್ಕೆ ಐ.ಸಿ.ಐ.ಸಿ.ಐ. ಬ್ಯಾಂಕ್ ಸಜ್ಜಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ‘ಯೋನೋ’ ಸೇವೆಗಳ ಬಳಿಕ ಇದೀಗ ಐ.ಸಿ.ಐ.ಸಿ.ಐ. ಬ್ಯಾಂಕ್ ‘ಐ ಮೊಬೈಲ್’ ಆ್ಯಪ್ ಮೂಲಕ ಗ್ರಾಹಕರಿಗೆ ತನ್ನ ಎಟಿಎಂಗಳಿಂದ ಕಾರ್ಡ್ ರಹಿತ ನಗದು ಪಡೆದುಕೊಳ್ಳುವ ಸೌಲಭ್ಯವನ್ನು ನೀಡುತ್ತಿದೆ. ದೇಶಾದ್ಯಂತ ಇರುವ ಐ.ಸಿ.ಐ.ಸಿ.ಐ. ಬ್ಯಾಂಕಿನ ಸುಮಾರು 15,000 ಎಟಿಎಂ ಕೇಂದ್ರಗಳಿಂದ ಇನ್ನುಮುಂದೆ ಗ್ರಾಹಕರು ಡೆಬಿಟ್ ಕಾರ್ಡ್ ಇಲ್ಲದೇ ನಗದನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
ಡೆಬಿಟ್ ಕಾರ್ಡ್ ರಹಿತ ಈ ನಗದು ಪಡೆದುಕೊಳ್ಳುವಿಕೆ ಸೇವೆಯು ಗ್ರಾಹಕರ ಗುರುತಿನ ಪತ್ತೆಗಾಗಿ ಡೆಬಿಟ್ ಕಾರ್ಡ್ ಅವಲಂಬಿಸುವ ವಿಧಾನಕ್ಕಿಂತ ಹೊರತಾಗಿರುತ್ತದೆ. ಇಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಎಟಿಎಂ ಬಳಕೆದಾರರಲ್ಲಿ ಆ್ಯಂಡ್ರಾಯ್ಡ್ ಅಥವಾ ಐ.ಒ.ಎಸ್. ಹ್ಯಾಂಡ್ ಸೆಟ್ ಗಳಿರುವುದು ಅಗತ್ಯವಾಗಿರುತ್ತದೆ.
ಈ ಸೌಲಭ್ಯದ ಮೂಲಕ ಯಾವುದೇ ಬ್ಯಾಂಕಿನ ಗ್ರಾಹಕರು ತಮ್ಮಲ್ಲಿರುವ ಡೆಬಿಟ್ ಕಾರ್ಡ್ ಗಳನ್ನು ಬಳಸದೆಯೇ ದಿನಕ್ಕೆ ಗರಿಷ್ಠ 20 ಸಾವಿರ ರೂಪಾಯಿಗಳನ್ನು ದೇಶಾದ್ಯಂತ ಇರುವ ಐಸಿಐಸಿಐ ಬ್ಯಾಂಕಿನ 15 ಸಾವಿರ ಎಟಿಎಂಗಳಿಂದ ಪಡೆದುಕೊಳ್ಳಬಹುದಾಗಿರುತ್ತದೆ.
ಹಾಗಾದರೆ ಡೆಬಿಟ್ ಕಾರ್ಡ್ ರಹಿತವಾಗಿ ಐ.ಸಿ.ಐ.ಸಿ.ಐ. ಬ್ಯಾಂಕಿನ ಎಟಿಎಂಗಳಿಂದ ಹಣ ಪಡೆದುಕೊಳ್ಳುವುದು ಹೇಗೆ?
– ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ‘ಐ ಮೊಬೈಲ್ ಆ್ಯಪ್’ನ್ನು ಡೌನ್ಲೋಡ್ ಮಾಡಿಕೊಳ್ಳಿ.
– ‘ಐ ಮೊಬೈಲ್’ ಆ್ಯಪ್ ಗೆ ಲಾಗಿನ್ ಆಗಿ ಮತ್ತು ಅಲ್ಲಿ ‘ಸರ್ವಿಸಸ್’ ಹಾಗೂ ‘ಕ್ಯಾಶ್ ವಿದ್ರಾವಲ್ ಅಟ್ ಐ.ಸಿ.ಐ.ಸಿ.ಐ. ಬ್ಯಾಂಕ್ ಎಟಿಎಂ’ ಆಯ್ಕೆಗಳಿಗೆ ಕ್ಲಿಕ್ ಮಾಡಿ.
– ನೀವು ತೆಗೆಯಬಯಸುವ ಮೊತ್ತವನ್ನು ನಮೂದಿಸಿ ಹಾಗೂ ನಿಮ್ಮ ಅಕೌಂಟ್ ನಂಬರನ್ನು ಆಯ್ಕೆ ಮಾಡಿ. 4 ಸಂಖ್ಯೆಗಳ ತಾತ್ಕಾಲಿಕ ಪಿನ್ ನಂಬರನ್ನು ನೀಡಿ.
– ತಕ್ಷಣವೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ರೆಫೆರೆನ್ಸ್ ಒಟಿಪಿ ಬರುತ್ತದೆ.
– ಇದೀಗ ಹತ್ತಿರದಲ್ಲಿರುವ ಐ.ಸಿ.ಐ.ಸಿ.ಐ. ಬ್ಯಾಂಕಿನ ಎಟಿಎಂಗೆ ಹೋಗಿ ಅಲ್ಲಿ ‘ಕಾರ್ಡ್ ಲೆಸ್ ಕ್ಯಾಶ್ ವಿದ್ರಾವಲ್’. ಬಳಿಕ ‘ಎಂಟರ್ ಮೊಬೈಲ್ ನಂಬರ್’ ಆಯ್ಕೆಗೆ ಕ್ಲಿಕ್ ಮಾಡಿ ಬಳಿಕ ‘ರೆಫೆರೆನ್ಸ್ ಒಟಿಪಿ ನಂಬರ್’ ಆಯ್ಕೆಮಾಡಿಕೊಳ್ಳಿ. ಇದೀಗ ನಿಮಗೆ ಈ ಮೊದಲೇ ಬಂದಿದ್ದ ತಾತ್ಕಾಲಿಕ ಪಿನ್ ನಂಬರನ್ನು ಇಲ್ಲಿ ದಾಖಲಿಸಿ ನೀವು ತೆಗೆಯಬಯಸುವ ಮೊತ್ತವನ್ನು ಅಲ್ಲಿ ನಮೂದಿಸಿ.
ನೀವು ನಮೂದಿಸಿದ ಹಿಂಪಡೆಯುವ ಮೊತ್ತ ಮತ್ತು ಒಟಿಪಿ ಸಂಖ್ಯೆ ಮುಂದಿನ ದಿನದ ಮಧ್ಯರಾತ್ರಿವರೆಗೆ ಚಾಲ್ತಿಯಲ್ಲಿರುತ್ತದೆ. ಹಾಗಾಗಿ ಯಾವುದೇ ಐಸಿಐಸಿಐ ಬ್ಯಾಂಕಿನ ಎಟಿಎಂ ಬಳಿಯೇ ಇದ್ದು ನೀವು ಈ ಮೇಲ್ಕಾಣಿಸಿದ ವಿಧಾನಗಳನ್ನು ಮಾಡುತ್ತಾ ಕುಳಿತುಕೊಳ್ಳಬೇಕಾಗಿರುವುದಿಲ್ಲ. ಆದರೆ ಈ ಸೇವೆಗಳ ಲಭ್ಯತೆ ನಿಮ್ಮ ಪ್ರದೇಶದಲ್ಲಿ ಸಿಗುವ ಇಂಟರ್ನೆಟ್ ವೇಗ ಹಾಗೂ ನೆಟ್ವರ್ಕ್ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ.
ಈ ಡೆಬಿಟ್ ಕಾರ್ಡ್ ರಹಿತ ಎಟಿಎಂ ಹಣ ತೆಗೆಯುವ ಸೌಲಭ್ಯವನ್ನು ಭಾರತದಲ್ಲಿ ಮೊದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ‘ಯೋನೋ’ ಸೇವೆಗಳ ಮೂಲಕ ಪರಿಚಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.