ವಿವಿಧ ಆಸನ ಪ್ರದರ್ಶಿಸಿ ಗಮನ ಸೆಳೆದ ಯೋಗಪಟುಗಳು
Team Udayavani, Jan 22, 2020, 3:00 AM IST
ಮೈಸೂರು: ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ವಿವಿಧ ಆಸನ ಪ್ರದರ್ಶಿಸಿ ಗಮನ ಸೆಳೆದರು.
ಎಸ್‌ಜಿಎಸ್ ಅಂತಾರಾಷ್ಟ್ರೀಯ ಯೋಗ ಫೌಂಡೇಷನ್ ಮತ್ತು ಸಂಶೋಧನೆ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯೋಗಾಸನ ಕ್ರೀಡಾ ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಂದ್ಯಾವಳಿಯಲ್ಲಿ 28 ರಾಜ್ಯಗಳಿಂದ 1400ಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
ಬೆಳಗ್ಗೆಯಿಂದ ಸಂಜೆವರೆಗೆ ಎಂಟು ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. 1400 ಮಂದಿಯ ಪೈಕಿ ಸಾವಿರ ಮಕ್ಕಳೇ ಭಾಗವಹಿಸಿ ಪಂದ್ಯಾವಳಿಯಲ್ಲಿ ಉತ್ಸಾಹ ಹೆಚ್ಚಿಸಿದರು. ಸಣ್ಣ ಮಕ್ಕಳು ಕಷ್ಟಕರ ಆಸನಗಳನ್ನು ಪ್ರದರ್ಶಿಸಿದರು.
ಅಂತಾರಾಷ್ಟ್ರೀಯ ಯೋಗ ಹಾಗೂ ಯೋಗ ದಸರಾ ಬಳಿಕ ಮೈಸೂರಿನಲ್ಲಿ ನಡೆದ ಯೋಗದ ಮಹತ್ವ ಸಾರುವ ಬೃಹತ್ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯದ ಯೋಗಸಕ್ತರು ಭಾಗವಹಿಸಿ ಸಣ್ಣ ಮಕ್ಕಳಿಂದ ಹಿರಿಯ ವಯಸ್ಸಿನವರು ವಯಸ್ಸಿಮ ಬೇಧವಿಲ್ಲದ ಯೊಗ ಪ್ರದರ್ಶಿಸಿದರು.
8-10 ವರ್ಷದ ಬಾಲಕ, ಬಾಲಕಿ, 10ರಿದ 12 ವರ್ಷದ ಬಾಲಕ, ಬಾಲಕಿ, 12-15 ವರ್ಷದ ಬಾಲಕ, ಬಾಲಕಿ, 15-20 ವರ್ಷದ ಯುವ-ಯುವತಿ, 20-30 ವರ್ಷದ ಮಹಿಳಾ ಮತ್ತು ಪುರುಷ, 30-40, 40-50, 50-60 ಹಾಗೂ 60 ವರ್ಷಕ್ಕೂ ಮೇಲ್ಪಟವರಿಗೆ ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ ಪಂದ್ಯಾವಳಿ ನಡೆಯಿತು. ಅಥ್ಲೆಟಿಕ್ ಯೋಗಾಸನ, ಆರ್ಟ್ ಸ್ಟಿಕ್ ಸೋಲೊ ಯೋಗಾಸನ, ಸಮೂಹ ಆರ್ಟ್‌ಸ್ಟಿಕ್ ಯೋಗಾಸನ, ರಿದಮಿrಕ್ ಯೋಗಾಸನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನದಂದು ಮೈಸೂರಿಗೆ ಮೋದಿ ಅವರನ್ನು ಕರೆಸಬೇಕೆಂದು ಹಲವು ವರ್ಷಗಳ ಬೇಡಿಕೆ ಇದೆ. ಈ ಬಾರಿ ಮೋದಿ ಅವರನ್ನು ಕರೆತರಲೇಬೇಕೆಂದು ನಿರ್ಧಾರಿಸಿದ್ದೇವೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಸಲಹೆಗಾರರಾದ ಎಂ.ಲಕ್ಷ್ಮೀನಾರಾಯಣ ರಾಷ್ಟ್ರೀಯ ಯೋಗಾಸನ ಕ್ರೀಡಾ ಪಂದ್ಯಾವಳಿಗೆ ಚಾಲನೆ ನೀಡಿದರು. ಶಾಸಕ ಎಸ್.ರಾಮದಾಸ್ ಅಧ್ಯಕ್ಷತೆವಹಿಸಿದ್ದರು. ಕೇಂದ್ರದ ಸರಕಾರದ ಇಂಡಿಯನ್ ಯೋಗ ಆಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಡಾ.ಜೈ ದೀಪ್ ಆರ್ಯ, ಯೋಗನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಇತರರಿದ್ದರು.
ಒಲಂಪಿಕ್ ಕ್ರೀಡೆಯಾಗಲಿ: ರಾಷ್ಟ್ರೀಯ ಯೋಗಾಸನ ಕ್ರೀಡಾ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ಆಯುಷ್ ಇಲಾಖೆಯ ಯೋಗ ಪ್ರಮಾಣ ಪತ್ರ ಮಂಡಳಿಯ ಸಿಇಒ, ದೆಹಲಿ ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ ನಿರ್ದೇಶಕ ಡಾ.ಈಶ್ವರ್ ವಿ.ಬಸವರಡ್ಡಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಯೋಗ ಅಂತಾರಾಷ್ಟ್ರೀಯ ಮಾನ್ಯತೆ ಪಡೆದುಕೊಂಡಿದೆ.
ವಿಶ್ವವ್ಯಾಪಿಯಾಗಿ ಯೋಗವನ್ನು ಅಳವಡಿಸಿಕೊಂಡು ಯೋಗದ ಹಬ್ಬ ಆಚರಿಸುತ್ತಿದ್ದಾರೆ. ಪ್ರಸ್ತುತ ಯೋಗ ವಿಶ್ವಮಟ್ಟದಲ್ಲಿ ತನ್ನದೆ ಆದ ಸ್ಥಾನ ಹೊಂದಿದೆ. ಹಾಗಾಗಿ ಯೋಗ ಕ್ರೀಡೆಯಾಗಿ ಘೋಷಣೆಯಾಗಬೇಕಿದೆ. ಒಲಂಪಿಕ್‌ನಲ್ಲಿ ಯೋಗವು ಸೇರ್ಪಡೆಯಾಗಬೇಕಿದೆ. ಮುಂದಿನ 2028ರ ಒಲಂಪಿಕ್‌ನಲ್ಲಿ ಯೋಗಸಾನವು ಸ್ಪರ್ಧೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
Hunsur: ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.