ಖಾಸಗಿ ಜಿಮ್‌ಗಳಿಗೆ ಪೈಪೋಟಿ ನೀಡುತ್ತಿರುವ ಸರಕಾರಿ ಜಿಮ್‌

ನಿತ್ಯವೂ ಬರುವವರ ಸಂಖ್ಯೆ ಹೆಚ್ಚಳ; ಶುಲ್ಕವೂ ಕಡಿಮೆ

Team Udayavani, Jan 22, 2020, 7:00 AM IST

chi-19

3000 ಚದರಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣ
02 ಕೋ.ರೂ. ವೆಚ್ಚದ ಹವಾ ನಿಯಂತ್ರಿತ ಸ. ಜಿಮ್‌

ಉಡುಪಿ: ಸರಕಾರಿ ಸೇವೆಗಳೆಂದರೆ ಋಣಾತ್ಮಕ ಭಾವನೆ ಮೂಡುವ ಈ ಕಾಲಘಟ್ಟದಲ್ಲಿ ನಗರದಲ್ಲಿರುವ ಸುಸಜ್ಜಿತ ಹವಾನಿಯಂತ್ರಿತ ಸರಕಾರಿ ಜಿಮ್‌ನಲ್ಲಿ ದೇಹ ದಂಡಿಸಲು ಜನರು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಖಾಸಗಿ ಜಿಮ್‌ಗಳ ಕಾರುಬಾರಿನ ನಡುವೆ ನಗರದ ಅಜ್ಜರಕಾಡಿನಲ್ಲಿ ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆ ವತಿಯಿಂದ ನಿರ್ಮಿಸಲಾದ ಎಸಿ ಜಿಮ್‌ನಲ್ಲಿ ನಿತ್ಯ ನೂರಾರು ಜನ ಬರುತ್ತಿದ್ದಾರೆ. ಪ್ರಮೋದ್‌ ಮಧ್ವರಾಜ್‌ ಕ್ರೀಡಾ ಸಚಿವರಾಗಿದ್ದ ಸಂದರ್ಭ ಈ ಜಿಮ್‌ ಸರಕಾರದಿಂದ ಮಂಜೂರಾಗಿತ್ತು.

2 ಕೋ.ರೂ.ಯಲ್ಲಿ ನಿರ್ಮಾಣ
ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು 3 ಸಾವಿರ ಚ.ಅಡಿ ವಿಸ್ತೀರ್ಣದ ಕಟ್ಟಡದಲ್ಲಿ 2.ಕೋ.ರೂ. ವೆಚ್ಚದಲ್ಲಿ ಜಿಮ್‌ ನಿರ್ಮಿಸಲಾಗಿದೆ. ಸುಮಾರು 1.50 ಕೋ.ರೂ. ವೆಚ್ಚದ ಉಪಕರಣಗಳನ್ನು ಅಳವಡಿಸಲಾಗಿದೆ. 50 ಲ.ರೂ. ವೆಚ್ಚದಲ್ಲಿ ಎಸಿ, ಫ್ಲೋರಿಂಗ್‌, ಗ್ಲಾಸ್‌ ವರ್ಕ್‌, ಸ್ನಾನಗೃಹ, ಲೈಟಿಂಗ್‌, ಇಂಟೀರಿಯರ್‌ ಕೆಲಸಗಳಿಗೆ ವ್ಯಯಿಸಲಾಗಿದೆ.

ಕಡಿಮೆ ಶುಲ್ಕ
ಪ್ರಸ್ತುತ ಜಿಮ್‌ನಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಇದು ಮಲ್ಟಿ ಜಿಮ್‌ ಆಗಿರುವುದರಿಂದ 10ರಿಂದ 15 ಹೆಣ್ಮಕ್ಕಳು ಜಿಮ್‌ ಸದಸ್ಯತ್ವ ಹೊಂದಿದ್ದಾರೆ. ತರಬೇತಿ ಅವಧಿಯಲ್ಲಿ ಮೊಬೈಲ್‌ ಫೋನ್‌ ಬಳಕೆ ಮಾಡುವಂತಿಲ್ಲ. ಬೆಳಗ್ಗೆ 5ರಿಂದ 9ರ ತನಕ, ಸಂಜೆ 4ರಿಂದ 8ರ ವರೆಗೆ ಜಿಮ್‌ನಲ್ಲಿ ವ್ಯಾಯಾಮ ಮಾಡಬಹುದು. ಜಿಮ್‌ನಲ್ಲಿ ಸದಸ್ಯರಿಗೆ ಮಾಸಿಕ 1 ಸಾವಿರ ರೂ. ಶುಲ್ಕ ವಿಧಿಸಲಾಗಿದೆ. ಜಿಮ್‌ ಸೂಟ್‌ ಹಾಗೂ ಶೂ ಧರಿಸುವುದು ಕಡ್ಡಾಯವಾಗಿದೆ.

ಪೂರ್ಣಕಾಲಿಕ ತರಬೇತುದಾರ
ದೇಹ ದಂಡನೆಗೆ ಬೇಕಾಗುವ ಉಪಕರಣಗಳಿವೆ. ಉದ್ಯೋಗಕ್ಕೆ ತೆರಳುವವರು ಬೆಳಗ್ಗೆ, ರಾತ್ರಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಜೆ ಹೊತ್ತಿನಲ್ಲಿ ಬರುವೆ. ವ್ಯಾಯಾಮಗಳ ಕುರಿತು ಸಲಹೆ ನೀಡುವ ಪೂರ್ಣಕಾಲಿಕ ತರಬೇತುದಾರರು ಇದ್ದಾರೆ. ಪ್ರತಿ ತಿಂಗಳು ಜಿಮ್‌ ನಿರ್ವಹಣೆಗೆ ಸುಮಾರು 70 ಸಾವಿರ ರೂ. ವ್ಯಯಿಸಲಾಗುತ್ತದೆ.

ತರಬೇತುದಾರರ ವಿಶೇಷತೆ
ತರಬೇತುದಾರ ಉಮೇಶ್‌ ಮಟ್ಟು ಅವರು ಈಗಾಗಲೇ ದೇಹದಾಡ್ಯì ಸ್ಪರ್ಧೆಯಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಪದಕ ಪಡೆದುಕೊಂಡಿದ್ದಾರೆ. ಪಾರ್ಶ್ವವಾಯು ಪೀಡಿತರನ್ನು ವ್ಯಾಯಾಮದ ಮೂಲಕ ಗುಣಪಡಿಸಿದ ಅನುಭವ ಅವರಿಗಿದೆ. ಈ ಕುರಿತು ವೈದ್ಯರು ಅವರಿಗೆ ಪ್ರಮಾಣ ಪತ್ರವನ್ನೂ ನೀಡಿ ಗೌರವಿಸಿದ್ದಾರೆ. ದೇಹದ ಹೆಚ್ಚುವರಿ ತೂಕ ಇಳಿಸಲು ಅಗತ್ಯವಿರುವ ವ್ಯಾಯಾಮವನ್ನು ಅವರು ಬಹಳ ಕಟ್ಟುನಿಟ್ಟಾಗಿ ಹೇಳಿಕೊಡುತ್ತಾರೆ.

16ಕ್ಕೂ ಹೆಚ್ಚಿನ ವ್ಯಾಯಾಮ ಸಲಕರಣೆ
ಸರಕಾರಿ ಜಿಮ್‌ ಆದರೂ ಇಲ್ಲಿ ಸಿಗುವ ಸೌಲಭ್ಯಗಳು ಮಾತ್ರ ಖಾಸಗಿ ಜಿಮ್‌ಗಳಿಗೆ ಸ್ಪರ್ಧೆ ನೀಡುತ್ತಿವೆ. ಆಯ್ದ ಜಿಮ್‌ ಪರಿಕರಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಕ್ರಾಸ್‌ ಟ್ರೈನರ್‌ 3, ಡಿಜಿಟಲ್‌ ಜಾಗರ್ಸ್‌ 4 ಸೇರಿದಂತೆ 16ಕ್ಕೂ ಹೆಚ್ಚಿನ ವಿವಿಧ ವ್ಯಾಯಾಮ ಮಾಡುವ ಸಲಕರಣೆಗಳಿವೆ.

ದಿನದಿಂದ ದಿನಕ್ಕೆ ಸಂಖ್ಯೆ ಅಧಿಕ
ರಾಜ್ಯದ ಅತ್ಯುತ್ತಮ ಜಿಮ್‌ಗಳಲ್ಲಿ ಅಜ್ಜರಕಾಡು ಹವಾನಿಯಂತ್ರಿತ ಜಿಮ್‌ ಸಹ ಒಂದು. ಮಾಸಿಕ ವಿದ್ಯುತ್‌ ಬಿಲ್‌, ತರಬೇತುದಾರರ ವೇತನ, ವೆಚ್ಚಗಳನ್ನು ಕಳೆದ ಬಳಿಕ ಮಾಸಿಕ ಸುಮಾರು 10 ಸಾವಿರ ರೂ. ಉಳಿತಾಯವಾಗುತ್ತಿದೆ. ಹೊಸ ಜಿಮ್‌ ಪ್ರಾರಂಭವಾದ ಅನಂತರ ಜಿಮ್‌ಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ.
-ಡಾ| ರೋಶನ್‌ ಕುಮಾರ್‌, ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ.

ಉತ್ತಮ ಫ‌ಲಿತಾಂಶ
ಹವಾನಿಯಂತ್ರಿತ ಜಿಮ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅವರ ಅಗತ್ಯಕ್ಕೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಜಿಮ್‌ನಲ್ಲಿ ಕಡ್ಡಾಯವಾಗಿ ದೇಹ ದಂಡಿಸುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದಾಗಿ ಜಿಮ್‌ಗೆ ಬರುವವರಿಗೆ ಉತ್ತಮ ಫ‌ಲಿತಾಂಶ ದೊರಕುತ್ತದೆ.
-ಉಮೇಶ್‌ ಮಟ್ಟು, ಜಿಮ್‌ ತರಬೇತುದಾರ.

ಕಡಿಮೆ ದರ-ಉತ್ತಮ ಸೇವೆ
ಕಳೆದ 8 ತಿಂಗಳಿನಿಂದ ಈ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸರಕಾರಿ ಜಿಮ್‌ ಎಂದರೆ ದೂರ ಉಳಿಯುವವರು ಒಮ್ಮೆ ಈ ಜಿಮ್‌ಗೆ ಭೇಟಿ ನೀಡಬೇಕು. ಕಡಿಮೆ ದರದಲ್ಲಿ ಉತ್ತಮ ಸೇವೆ ಸಿಗುತ್ತಿದೆ.
-ಚಿತ್ರಾಲಿ, ಜಿಮ್‌ ಸದಸ್ಯೆ.

 ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

suicide

Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.