ಬಾಂಬ್‌: ಮಹತ್ವದ ಸುಳಿವು

ವಿಮಾನ ನಿಲ್ದಾಣಕ್ಕೆ ಎನ್‌ಎಸ್‌ಜಿ ಭದ್ರತೆ; ಉಡುಪಿ ಮೂಲದ ವ್ಯಕ್ತಿ ಮೇಲೆ ಅನುಮಾನ

Team Udayavani, Jan 22, 2020, 7:00 AM IST

chii-35

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಮಹತ್ವದ ಸುಳಿವು ಲಭ್ಯ ವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ವಿಮಾನ ನಿಲ್ದಾಣಕ್ಕೆ ಮಂಗಳವಾರ ಎನ್‌ಎಸ್‌ಜಿ ಕಮಾಂಡೊ ಭದ್ರತೆಯನ್ನು ಒದಗಿಸಲಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ವಿಮಾನ ನಿಲ್ದಾಣದ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಕಾಣಿಸುವ ಶಂಕಿತ ವ್ಯಕ್ತಿಯನ್ನೇ ಹೋಲುವ ಉಡುಪಿ ಮೂಲದ ವ್ಯಕ್ತಿಯೋರ್ವನ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು, ಆ ದಿಕ್ಕಿನಲ್ಲಿಯೂ ತನಿಖೆ ಕೈಗೊಂಡಿದ್ದಾರೆ. ಈ ವ್ಯಕ್ತಿಯು ಎರಡು ವರ್ಷಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಕರೆ ಮಾಡಿ ಸೆರೆ ಸಿಕ್ಕಿದ್ದ. ಮಂಗಳೂರು ಸೇರಿದಂತೆ ಹಲವು ವಿಮಾನ ನಿಲ್ದಾಣಗಳಿಗೆ ಈ ಹಿಂದೆ ಹುಸಿ ಬಾಂಬ್‌ ಕರೆ ಮಾಡಿದ್ದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಿ, ಅವರ ಕೈವಾಡ ಇರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಹೇಳಿದ್ದಾರೆ.

ಇನ್ನೊಂದೆಡೆ, ಸೋಮವಾರ ಬೆಳಗ್ಗೆ 8.45ರಿಂದ 9 ಗಂಟೆ ಮಧ್ಯೆ ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡದ ಟಿಕೆಟ್‌ ಕೌಂಟರ್‌ ಬಳಿ ಬಾಂಬ್‌ ಇದ್ದ ಬ್ಯಾಗ್‌ ಇರಿಸಿದ ವ್ಯಕ್ತಿ ತುಳು ಮಾತನಾಡುತ್ತಿದ್ದು, ಸ್ಥಳೀಯನೇ ಆಗಿರಬೇಕೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಆಟೋದಲ್ಲಿ ಬಂದಿರಲಿಲ್ಲ?
ಶಂಕಿತ ಸಂಚರಿಸಿದ್ದ ರಿಕ್ಷಾ ಮಂಗಳೂರು ನಗರ ವ್ಯಾಪ್ತಿಯದ್ದು ಎನ್ನಲಾಗಿದ್ದು, ಈ ಆಟೋ ಚಾಲಕ ಪಂಪ್‌ವೆಲ್‌ ಬಳಿಯಿಂದ ಪ್ರಯಾ ಣಿಕ ರೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದರು. ವಿಮಾನ ನಿಲ್ದಾಣ ದಿಂದ ಹಿಂದಿರುಗು ವಾಗ ಶಂಕಿತ ಈ ರಿಕ್ಷಾಕ್ಕೆ ಕೈತೋರಿಸಿ ಕೆಂಜಾರು ಜಂಕ್ಷನ್‌ ತನಕ ಸಂಚರಿಸಿದ್ದ. ಹೀಗಾಗಿ ಶಂಕಿತ ವ್ಯಕ್ತಿಯು ಮಂಗಳೂರು ಅಥವಾ ಕೆಂಜಾರು ಬಳಿಯಿಂದ ಏರ್‌ಪೋರ್ಟ್‌ಗೆ ಆಟೊದಲ್ಲಿ ಬಂದಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಂಕಿತ ವ್ಯಕ್ತಿಯು ಸಂಚರಿಸಿದ್ದ ಮಂಗಳೂರಿನ ಆಟೋ ಚಾಲಕನನ್ನು ವಶಕ್ಕೆ ಪಡೆದುಕೊಂಡಿರುವ ಬಜಪೆ ಠಾಣೆ ಪೊಲೀಸರು ಹಲವು ದಿಕ್ಕಿನಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಖಾಸಗಿ ಬಸ್ಸಿನಲ್ಲಿ ಸಂಚರಿಸಿ ಕೆಂಜಾರು ಜಂಕ್ಷನ್‌ನಲ್ಲಿ ಇಳಿದ ಆರೋಪಿ ಅಲ್ಲಿಂದ ವಿಮಾನ ನಿಲ್ದಾಣದ ಕಡೆಗೆ ಬೇರೊಂದು ಆಟೋ ರಿಕ್ಷಾದಲ್ಲಿ ಸಂಚರಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ಆದರೆ ಆ ರಿಕ್ಷಾ ಯಾವುದೆಂದು ಗೊತ್ತಾಗಿಲ್ಲ. ಆತ ವಿಮಾನ ನಿಲ್ದಾಣಕ್ಕೆ ಹೋಗುವಾಗಲೂ ಅಲ್ಲಿಂದ ವಾಪಸಾಗುವಾಗಲೂ ತಲೆಗೆ ಕ್ಯಾಪ್‌ ಧರಿಸಿದ್ದು, ಮುಖ ಸರಿಯಾಗಿ ಕಾಣಿಸುತ್ತಿಲ್ಲ. ಹಾಗಾಗಿ ಗುರುತು ಪತ್ತೆ ಕಷ್ಟವಾಗಿದೆ. ವಿಮಾನ ನಿಲ್ದಾಣದಿಂದ ವಾಪಸ್‌ ಕೆಂಜಾರು ತನಕ ಆಟೋದಲ್ಲಿ ಬಂದಿದ್ದ ಆತ ಅಲ್ಲಿಂದ ಮುಂದೆ ಯಾವ ಮಾರ್ಗದಲ್ಲಿ ಸಂಚರಿಸಿದ್ದಾನೆ ಎನ್ನುವ ಬಗ್ಗೆ ಪೊಲೀಸರಿಗೆ ಇನ್ನೂ ಸ್ಪಷ್ಟ ಸುಳಿವು ಲಭಿಸಿಲ್ಲ ಎನ್ನಲಾಗುತ್ತಿದೆ.

ಓಡೋಡಿ ಬಂದ ಶಂಕಿತ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದಾನೆ ಎನ್ನಲಾದ ಶಂಕಿತನು ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಸರ್ವೀಸ್‌ ಬಸ್‌ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಖಾಸಗಿ ಬಸ್‌ನಲ್ಲಿ ಸಂಚರಿಸಿದ್ದ ಎನ್ನಲಾಗುತ್ತಿದೆ. ಆ ಬಸ್‌ ನಿರ್ವಾಹಕ, ಬಸ್‌ ಬೆಳಗ್ಗೆ 7.35ಕ್ಕೆ ಸ್ಟೇಟ್‌ಬ್ಯಾಂಕ್‌ನಿಂದ ಕಟೀಲಿಗೆ ಹೊರಡುತ್ತಿತ್ತು. ಬಸ್‌ ಹೊರಡುವ ವೇಳೆ ವ್ಯಕ್ತಿಯೊಬ್ಬ ಓಡೋಡಿ ಬಂದು ಹಿಂದಿನ ಬಾಗಿಲಿನಲ್ಲಿ ಹತ್ತಿ ಕೊನೆಯ ಬದಿ ಸೀಟಿನಲ್ಲಿ ಕುಳಿತ. ಆತನ ಪಕ್ಕ ಐದು ಮಂದಿ ಕುಳಿತಿದ್ದರು. ಯಾರ ಜತೆಗೂ ಮಾತನಾಡುತ್ತಿರಲಿಲ್ಲ. ಉದ್ದನೆಯ ವ್ಯಕ್ತಿಯಾದ ಆತ ತಲೆಗೆ ಟೊಪ್ಪಿ ಹಾಕಿದ್ದ. ಅದೇ ಮೂಗಿನವರೆಗೆ ಆವೃತವಾಗಿತ್ತು. ಕುರುಚಲು ಗಡ್ಡ ಇತ್ತು. ಆತನ ಬೆನ್ನಿನಲ್ಲಿ ದೊಡ್ಡದಾದ ಬ್ಯಾಗ್‌ ನೇತಾಡುತ್ತಿತ್ತು. ನಾನು ಎಲ್ಲಿಗೆ ಎಂದು ಕೇಳಿದೆ. ಆತ ಏರ್‌ಪೋರ್ಟ್‌ ಎಂದ. ಸುಮಾರು 8.15ಕ್ಕೆ ಬಸ್‌ ಕೆಂಜಾರು ತಲುಪಿತ್ತು. ಆತ ಬಸ್‌ನಿಂದ ನಿರ್ಗಮಿಸಿದ’ ಎಂದು ಹೇಳಿದ್ದಾರೆ.

ಕದ್ರಿ ದೇವಸ್ಥಾನದಲ್ಲಿ ಭದ್ರತೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದ ಶಂಕಿತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದ ಎನ್ನಲಾಗು ತ್ತಿದ್ದು, ಮಂಗಳವಾರದಂದು ಕದ್ರಿ ಕ್ಷೇತ್ರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕದ್ರಿ ದೇವಸ್ಥಾನದಲ್ಲಿ ಪ್ರಸ್ತುತ ಬ್ರಹ್ಮೋತ್ಸವ ನಡೆಯುತ್ತಿದೆ. ಇದೇ ಕಾರಣಕ್ಕೆ ಸಾವಿರಾರು ಮಂದಿ ಭಕ್ತರು ಕ್ಷೇತ್ರದಲ್ಲಿ ಸೇರುವ ಸಾಧ್ಯತೆ.
ಮುನ್ನೆಚ್ಚರಿಕೆ ದೃಷ್ಟಿಯಿಂದ ಕದ್ರಿ ದೇವಾಲಯದ ಪ್ರವೇಶ ದ್ವಾರದಲ್ಲಿ ಪೊಲೀಸ್‌ ವಾಹನ ನಿಂತಿದ್ದು, ಪೊಲೀಸರು ಗಸ್ತು ತಿರುಗುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು.

ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್‌ ಖರೀದಿ
ಈತ ಹೊಟೇಲ್‌ ಸಿಬಂದಿಯ ರೂಮ್‌ನಲ್ಲಿ ತಂಗುತ್ತಿದ್ದ. ಒಂದು ಬಾರಿ ಅಮೆಜಾನ್‌ನಲ್ಲಿ ವೈಟ್‌ ಸಿಮೆಂಟ್‌ ಖರೀದಿಸಿದ್ದು ಆತನ ಸಹೋದ್ಯೋಗಿಗಳಿಗೆ ತಿಳಿದಿತ್ತು. ಅದನ್ನು ಪ್ರಶ್ನಿಸಿದಾಗ ಮನೆಗೆ ಬೇಕು ಎಂದಿದ್ದ. ಇನ್ನೊಮ್ಮೆ ಕೇಳಿದಾಗ ಜಿಮ್‌ ಸಂದರ್ಭದಲ್ಲಿ ಗ್ರಿಪ್‌ ಸಿಗಲು ಪೌಡರ್‌ ಆಗಿ ಬಳಸಲು ಬೇಕು ಎಂದಿದ್ದ. ಕೆಲಸಕ್ಕೆ ಸೇರುವಾಗ ನೀಡಿದ ಪ್ರೊಫೈಲ್‌ನಲ್ಲಿ ಈ ಹಿಂದೆ ಬೆಂಗಳೂರು ಮತ್ತು ಮಣಿಪಾಲದ ಹೊಟೇಲ್‌ನಲ್ಲಿ ಕೆಲಸ ಮಾಡಿರುವುದನ್ನು ಉಲ್ಲೇಖೀಸಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಈಗ ಆತನ ಬಗ್ಗೆಯೂ ಹೊಟೇಲ್‌ನವರಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಆ ದಿಕ್ಕಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಭದ್ರತಾ ಲೋಪ ಕಂಡು ಬರುತ್ತದೆಯೋ ಅಂಥ ಕಡೆಗಳಲ್ಲಿ ಅದನ್ನು ಬಯಲುಗೊಳಿಸಿ ಸರಕಾರದ ಗಮನಸೆಳೆಯುವ ಚಾಳಿ ಆತನಿಗೆ ಇದೆ ಎನ್ನಲಾಗಿದೆ.

ಹೊಟೇಲ್‌ನಲ್ಲಿ ಕೆಲಸಕ್ಕಿದ್ದ ವ್ಯಕ್ತಿ!
ಶಂಕಿತ ವ್ಯಕ್ತಿಗೆ ಹೋಲುವ ಉಡುಪಿ ಮೂಲದ ವ್ಯಕ್ತಿಯು ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ಹೊಟೇಲ್‌ವೊಂದರಲ್ಲಿ ಸುಮಾರು 10 ದಿನಗಳ ಕಾಲ ಕೆಲಸಕ್ಕಿದ್ದ ಎಂದು ತಿಳಿದುಬಂದಿದೆ.
ಆ ವ್ಯಕ್ತಿಯು ಡಿ.16ರಂದು ಹೊಟೇಲ್‌ಗೆ ಬಂದಿದ್ದ. ಆತನ ವಿದ್ಯಾರ್ಹತೆಯನ್ನು ನೋಡಿ ಹೊಟೇಲ್‌ನವರು ಬಿಲ್ಲಿಂಗ್‌ನಲ್ಲಿ ಕೆಲಸ ನೀಡಲು ನಿರ್ಧರಿಸಿದ್ದರು. ಆತ ಆ ಸಂದರ್ಭ ದಲ್ಲಿ ಮಾನಸಿಕವಾಗಿ ಖನ್ನವಾಗಿದ್ದ. ಕೇಳಿ ದಾಗ “ಮನೆಯಲ್ಲಿ ತಂದೆಗೆ ಸಮಸ್ಯೆ ಇದೆ. ಅದರಿಂದ ನೊಂದಿದ್ದೇನೆ’ ಎಂದಿದ್ದ. ಅನಂತರ ಕೆಲಸಕ್ಕೆ ಸೇರ್ಪಡೆ ಯಾಗಿದ್ದ ಆತ ಕೆಲಸ ಸರಿಯಾಗಿ ಮಾಡುತ್ತಿದ್ದನಾದರೂ ಬೆಳಗ್ಗೆ ಎದ್ದು ಬ್ಯಾಗ್‌ ಹಾಕಿಕೊಂಡು ಹೊರಗೆ ಹೋಗಿ ಬರುತ್ತಿದ್ದ ಎಂದು ಹೊಟೇಲ್‌ನವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಶಂಕಿತ ವ್ಯಕ್ತಿಯ ಬಗ್ಗೆ ತನಿಖೆ ತೀವ್ರ
ಬೆಂಗಳೂರಿನಲ್ಲಿ ಹುಸಿ ಬಾಂಬ್‌ ಕರೆ ಮಾಡಿ ಎರಡು ವರ್ಷಗಳ ಹಿಂದೆ ಸಿಕ್ಕಿಬಿದ್ದಿದ್ದ ಉಡುಪಿ ಮೂಲದ ವ್ಯಕ್ತಿಯೊಬ್ಬನ ಮೇಲೆಯೇ ಪೊಲೀಸ ರಿಗೆ ಅನುಮಾನ ಬಲವಾಗಿದ್ದು, ತನಿಖೆ ತೀವ್ರ ಗೊಳಿಸಿ ದ್ದಾರೆ. ಈತ ಕೆಲಸ ಮಾಡುತ್ತಿದ್ದ ಹೊಟೇಲಿಗೆ ಮಂಗಳವಾರ ಸಂಜೆ ಪೊಲೀಸರು ತೆರಳಿದ್ದು, ಸಿಬಂದಿ ಯಿಂದ ಮಾಹಿತಿ ಪಡೆದಿದ್ದಾರೆ. ಆತ ಇಲ್ಲಿ ಕೆಲಸಕ್ಕಿದ್ದ ಸಮಯದಲ್ಲಿ ಆನ್‌ಲೈನ್‌ ಮೂಲಕ ಖರೀದಿಸಿ ಬಾಕಿ ಯುಳಿಸಿದ್ದ ಪುಡಿ ಯನ್ನೂ ಸಂಗ್ರಹಿಸಿದ್ದಾರೆ. ಆತನ ಇತ್ತೀಚೆಗಿನ ಮೊಬೈಲ್‌ ಸಂಖ್ಯೆಯೂ ಲಭಿ ಸಿದೆ ಎನ್ನಲಾಗಿದೆ. ಉಡುಪಿ ಯಲ್ಲಿರುವ ಆತನ ಮನೆಗೂ ಸೋಮವಾರ ಸಂಜೆ ಪೊಲೀಸರು ತೆರಳಿ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.