ಮೊಬೈಲ್‌ಗಳಲ್ಲಿ ಸಿಗಲಿದೆ ಇಸ್ರೋ ನಾವಿಕ್ ವ್ಯವಸ್ಥೆ
Team Udayavani, Jan 22, 2020, 9:30 AM IST
ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್.
ಹೊಸದಿಲ್ಲಿ: ಅಮೆರಿಕದ ದೂರಸಂಪರ್ಕ ಕಂಪೆನಿ ಕ್ವಾಲ್ಕಾಂ ಮತ್ತು ಇಸ್ರೋ ನಡುವೆ ಸಹಭಾಗಿತ್ವ ಏರ್ಪಟ್ಟಿದೆ. ಈ ಒಪ್ಪಂದದ ಬಳಿಕ ಕ್ವಾಲ್ಕಾಂ ಕಂಪನಿ ಹೊರತರಲಿರುವ ಹೊಸ ಮೊಬೈಲ್‌ಗಳಲ್ಲಿ ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್ (NavIC) ಸಿಗಲಿದೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್ 720ಜಿ, ಸ್ನ್ಯಾಪ್‌ಡ್ರಾಗನ್ 662 ಮತ್ತು ಸ್ನ್ಯಾಪ್ ಡ್ರಾಗನ್460 ಎಂಬ ಹೊಸ ರೀತಿಯ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿ ಸಲಾಗಿದೆ. ಇದೇ ಮೊದಲ ಬಾರಿಗೆ ಚಿಪ್ ತಯಾರಿಕಾ ಸಂಸ್ಥೆಯೊಂದು ಇಸ್ರೋ ಜತೆಗೆ ಕೈಜೋಡಿಸಿದೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್, “ಸಂಸ್ಥೆ ಕ್ವಾಲ್ಕಾಂ ಹೊಂದಿರುವ ತಾಂತ್ರಿಕ ವ್ಯವಸ್ಥೆಯಲ್ಲಿ ಪರಿಶೀಲಿಸಿ ತೃಪ್ತಿ ಹೊಂದಿದ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಗೆ ಸೆಡ್ಡು ಹೊಡೆವ ನಿಟ್ಟಿನಲ್ಲಿ ಇಸ್ರೋ ನಾವಿಕ್ ಎಂಬ ಹೊಸ ವ್ಯವಸ್ಥೆ ಅಭಿವೃದ್ಧಿಗೊಳಿಸಿದ್ದು, ಅದು ಹೆಚ್ಚಿನ ರೀತಿಯಲ್ಲಿ ಲಭ್ಯವಾಗಲು ಉಪಗ್ರಹಗಳನ್ನು ಉಡಾಯಿಸಿದೆ.
ಮೊಬೈಲ್ ಕಂಪನಿಗಳಾದ ಶಿಯೋಮಿ, ರಿಯಲ್‌ಮಿ ಈಗಾಗಲೇ ಕ್ವಾಲ್ಕಾಂ ಜತೆಗೆ ಕೈಜೋಡಿಸುವ ನಿರ್ಧಾರ ಪ್ರಕಟಿಸಿವೆ. ಮುಂದಿನ ದಿನಗಳಲ್ಲಿ ಈ ಎರಡೂ ಕಂಪನಿಗಳ ಫೋನ್‌ಗಳಲ್ಲಿ ಇಸ್ರೋದ ನಾವಿಕ್ ವ್ಯವಸ್ಥೆ ಒಳಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.