ಪಿಕೆಪಿಎಸ್‌ಗೆ ಬಿರುಸಿನ ಮತದಾನ
Team Udayavani, Jan 22, 2020, 12:56 PM IST
ಭಾಲ್ಕಿ: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ದಿಕ್ಸೂಚಿಯಂದೇ ಬಿಂಬಿತವಾಗಿರುವ ತಾಲೂಕಿನ 24 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಂಗಳವಾರ ಬಿರುಸಿನ ಚುನಾವಣೆ ನಡೆಯಿತು.
ತಾಲೂಕಿನ ವ್ಯಾಪ್ತಿಯ ಒಟ್ಟು 36 ಪಿಕೆಪಿಎಸ್ ಗಳ ಪೈಕಿ ಹಲಬರ್ಗಾ ಮತ್ತು ಡೊಣಗಾಪೂರ ಪಿಕೆಪಿಎಸ್ ಗಳಿಗೆ ಮಧ್ಯಂತರ ಚುನಾವಣೆ ನಡೆದ ಕಾರಣ, ಬಾಕಿ ಉಳಿದ 34ರಲ್ಲಿ 10 ಪಿಕೆಪಿಎಸ್ ಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 24 ಪಿಕೆಪಿಎಸ್‌ಗಳಿಗೆ ಚುನಾವಣೆ ನಡೆದಿದ್ದು, ಕಣದಲ್ಲಿರುವ 582 ಅಭ್ಯರ್ಥಿಗಳು ಮತದಾನ ಮಾಡಿಸುವಲ್ಲಿ ಹರಸಾಹಸ ನಡೆಸಿದರು. ಚುನಾವಣೆ ನಡೆಯುತ್ತಿರುವ 24 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನಾನಾ ಕ್ಷೇತ್ರಗಳಿಂದ 110 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯುತ್ತಲಿದೆ.
ಕಣದಲ್ಲಿರುವ ಅಭ್ಯರ್ಥಿಗಳು: ಸಾಮಾನ್ಯ ಕ್ಷೇತ್ರದಲ್ಲಿ 285 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ 50, ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ 36, ಪ್ರವರ್ಗ ಎ ಕ್ಷೇತ್ರದಲ್ಲಿ 48, ಪ್ರವರ್ಗ ಬಿ ಕ್ಷೇತ್ರದಲ್ಲಿ 48, ಮಹಿಳಾ ಕ್ಷೇತ್ರದಿಂದ 68 ಮತ್ತು ಸಾಲರಹಿತ ಕ್ಷೇತ್ರದಿಂದ 47 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರೆಲ್ಲರೂ ಗೆಲುವಿಗಾಗಿ ನಾನಾ ತಂತ್ರ ಹೆಣೆದಿದ್ದು, ಚುನಾವಣೆಯ ಸಮಯದಲ್ಲಿ ಪ್ರತಿಶತ ಮತದಾನವಾಗುವಂತೆ ಎಚ್ಚರ ವಹಿಸುತ್ತಲಿದ್ದಾರೆ.
ಅವಿರೋಧ ಆಯ್ಕೆಯಾದ ಪಿಕೆಪಿಎಸ್: ಭಾಲ್ಕಿಪಟ್ಟಣ, ಕುರುಬಖೇಳಗಿ, ಮೊರಂಬಿ, ಧನ್ನೂರ (ಎಚ್), ಬಾಳೂರ, ಗೋರಚಿಂಚೋಳಿ, ಲಖಣಗಾಂವ, ಕಾಸರ ತುಗಾಂವ, ಜಮಖಂಡಿ ಮತ್ತು ಕಣಜಿ ಪಿಕೆಪಿಎಸ್‌ಗಳಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧಧವಾಗಿ ಆಯ್ಕೆ ಮಾಡಲಾಗಿದೆ.
ಚುನಾವಣೆ ನಡೆಯುವ ಪಿಕೆಪಿಎಸ್: ನಾವದಗಿ, ದಾಡಗಿ, ವಳಸಂಗ, ಅಂಬೆಸಾಂಗವಿ, ಬೀರಿ(ಬಿ), ಕಳಸದಾಳ, ತಳವಾಡ(ಎಮ್), ಜ್ಯಾಂತಿ, ಕೋನಮೆಳಕುಂದಾ, ಸಿದ್ದೇಶ್ವರ, ಜೋಳದಪಕಾ, ಹುಪಳಾ, ನಿಟ್ಟೂರ(ಬಿ), ಭಾತಂಬ್ರಾ, ಶಿವಣಿ, ಮೇಥಿಮೆಳಕುಂದಾ, ಸಾಯಿಗಾಂವ, ಕೇಸರ ಜವಳಗಾ, ಮೆಹಕರ, ಅಟ್ಟರ್ಗಾ, ತೂಗಾಂವ(ಎಚ್), ಖಟಕಚಿಂಚೋಳಿ, ಚಳಕಾಪುರ, ಮತ್ತು ಬ್ಯಾಲಹಳ್ಳಿ(ಕೆ) ಪಿಕೆಪಿಎಸ್ ಗಳಲ್ಲಿ ಮಂಗಳವಾರ ಬಿರುಸಿನ ಚುನಾವಣೆ ನಡೆದಿದ್ದು, ನಾಲ್ಕು ಗಂಟೆಗೆ ಚುನಾವಣೆ ಮುಕ್ತಾಯ ಗೊಳ್ಳಬೇಕಿತ್ತು. ಆದರೆ ಉದ್ದನೆಯ ಸಾಪು ಇರುವ ಕಾರಣ ಸಂಜೆ 6 ಗಂಟೆಯ ನಂತರವೂ ಕೆಲವು ಪಿಕೆಪಿಎಸ್‌ಗಳಲ್ಲಿ ಚುನಾವಣೆ ನಡೆದ ವರದಿ ಬಂದಿದೆ. ಹೀಗಾಗಿ ಇಂದೇ ಪ್ರಕಟಿಸಬೇಕಾಗಿದ್ದ ಚುನಾವಣಾ ಫಲಿತಾಂಶದಲ್ಲಿ ವಿಳಂಬವಾಗಿದೆ.
ಒಟ್ಟಿಗೆ ಎಲ್ಲ ಕ್ಷೇತ್ರಗಳಿಗೂ ಒಬ್ಬರೇ ಮತದಾರರು ಮತ ಚಲಾಯಿಸುತ್ತಿರುವ ಕಾರಣ, ಪ್ರತಿ ಕ್ಷೇತ್ರಕ್ಕೂ ವಿವಿಧ ಬ್ಯಾಲೆಟ್ ಪೇಪರ ಕೊಡಲಾಗುತ್ತಿದೆ. ಒಬ್ಬ ಮತದಾರರಿಗೆ 5 ರಿಂದ 6 ಬ್ಯಾಲೆಟ್ ಪೇಪರಗಳನ್ನು ಕೊಡಲಾಗುತ್ತಿದ್ದು, ಇದರಿಂದ ಮತದಾರರಿಗೆ ತಾವು ಮತ ಚಲಾಯಿಸುವಲ್ಲಿ ಗೊಂದಲ ಸೃಷ್ಟಿಯಾದ ಪ್ರಸಂಗ ನಡೆದಿದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಏಜೆಂಟರೆ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತ ಚಾಲಾಯಿಸಿದ ಪ್ರಸಂಗಗಳು ಕೂಡ ನಡೆದಿವೆ.
-ಜಯರಾಜ ದಾಬಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.