ಒಲಿಂಪಿಕ್‌ ಅರ್ಹತೆ ಕಳೆದುಕೊಳ್ಳುವ ಭೀತಿಯಲ್ಲಿ ಸೈನಾ ನೆಹ್ವಾಲ್‌, ಶ್ರೀಕಾಂತ್‌


Team Udayavani, Jan 22, 2020, 1:34 PM IST

saina

ಬ್ಯಾಂಕಾಕ್‌ (ಥಾಯ್ಲೆಂಡ್‌): ಜುಲೈನಲ್ಲಿ ಜಪಾನಿನ ಟೋಕೊಯೋದಲ್ಲಿ ಒಲಿಂಪಿಕ್‌ ಆರಂಭವಾಗಲಿದೆ. ಈಗ ಎಲ್ಲಕಡೆ ಒಲಿಂಪಿಕ್‌ಗೆ ಅರ್ಹತೆ ಪಡೆಯುವ ಧಾವಂತ. ಭಾರತದ ಖ್ಯಾತ ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌ ಹಾಗೂ ಕೆ. ಶ್ರೀಕಾಂತ್‌ ಕೂಡ ಅಂತಹದ್ದೇ ಸಂದಿಗ್ಧದಲ್ಲಿದ್ದಾರೆ.

ಏ.26ರೊಳಗೆ ಅವರು ಅಗತ್ಯವಿರುವ ಅರ್ಹತೆಯನ್ನು ಗಳಿಸಬೇಕು. ಆದ್ದರಿಂದ ಮುಂದೆ ನಡೆಯುವ ಪ್ರತೀ ಕೂಟವೂ ಅವರಿಗೆ ಅನಿವಾರ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ ಬುಧವಾರದಿಂದ ಆರಂಭವಾಗಲಿರುವ ಥಾಯ್ಲೆಂಡ್‌ ಮಾಸ್ಟರ್ಸ್‌ ಕೂಟದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿಂದ ಕಣಕ್ಕಿಳಿಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರೂ ಅರ್ಹತೆ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ.

ಅರ್ಹತೆ ಪಡೆಯುವುದು ಹೇಗೆ?: ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ 22ನೇ ಶ್ರೇಯಾಂಕದಲ್ಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ 23ನೇ ಸ್ಥಾನದಲ್ಲಿದ್ದಾರೆ. ಏ.26ರೊಳಗೆ ಯಾರು ಅಗ್ರ 16ನೇ ಶ್ರೇಯಾಂಕ ದೊಳಗಿರುತ್ತಾರೋ, ಅವರಿಗೆ ಒಲಿಂಪಿಕ್‌ನಲ್ಲಿಸ್ಪರ್ಧಿಸುವ ಅವಕಾಶ ಸಿಗಲಿದೆ. ಆದರೆ ಇಲ್ಲೂ ಷರತ್ತುಗಳು ಅನ್ವಯಿಸುತ್ತವೆ.

ಅಂದರೆ ಒಂದು ದೇಶದ ತಲಾ ಇಬ್ಬರಿಗೆ, ಒಂದು ಸಿಂಗಲ್ಸ್‌ ವಿಭಾಗದಲ್ಲಿ (ಪುರುಷ ಮತ್ತು ಮಹಿಳೆಯರಿಗೆ ತಲಾ 2) ಅರ್ಹತೆ ಸಿಗುತ್ತದೆ. ಆಗ ಅವರು ಕೇವಲ ಅಗ್ರ 16ರೊಳಗೆ ಅರ್ಹತೆ ಪಡೆದರೆ ಸಾಲುವುದಿಲ್ಲ. ತಮ್ಮ ದೇಶದ ಉಳಿದೆಲ್ಲರಿಗಿಂತ ಉತ್ತಮ ಶ್ರೇಯಾಂಕ ಹೊಂದಬೇಕು.

ಇದರರ್ಥ ಇಷ್ಟೇ…ಮಹಿಳಾ ಸಿಂಗಲ್ಸ್‌ನಲ್ಲಿ ಞ6ನೇ ಶ್ರೇಯಾಂಕದಲ್ಲಿರುವ ಪಿ.ವಿ.ಸಿಂಧು ಈಗಾಗಲೇ ಅರ್ಹತೆ ಪಡೆದಿದ್ದಾರೆ. ಈ ವಿಭಾಗ  ದಲ್ಲಿ ಇನ್ನೂ ಒಂದು ಸ್ಥಾನವಷ್ಟೇ ಬಾಕಿಯಿದೆ. ಒಂದು ವೇಳೆ ಸೈನಾ ಅಗ್ರ 16ಕ್ಕೇರಿದರೂ, ಇನ್ನೊಬ್ಬ ಮಹಿಳಾ ತಾರೆ ಅದಕ್ಕಿಂತ ಉತ್ತಮ ಸ್ಥಾನ ಪಡೆದರೆ, ಸೈನಾಗೆ ಒಲಿಂಪಿಕ್‌ ಅರ್ಹತೆ ಸಿಗುವುದಿಲ್ಲ! ಸರಿಯಾಗಿ ಇದೇ ಸ್ಥಿತಿ ಕೆ. ಶ್ರೀಕಾಂತ್‌ಗೆ ಇದೆ. 11ನೇ ಶ್ರೇಯಾಂಕ ಹೊಂದಿರುವ ಬಿ.ಸಾಯಿ ಪ್ರಣೀತ್‌ ಒಲಿಂಪಿಕ್‌ಗೆ ತೆರಳುವುದು ಖಚಿತ. ಇನ್ನುಳಿದ ಒಂದು ಸ್ಥಾನವನ್ನು ಶ್ರೀಕಾಂತ್‌ ಪಡೆದುಕೊಳ್ಳಬೇಕು, ಉಳಿದವರ ಪೈಪೋಟಿಯನ್ನು ಮೀರಿ!

ಏ.26ರವರೆಗೆ ಒಟ್ಟು 6 ಬ್ಯಾಡ್ಮಿಂಟನ್‌ ಕೂಟಗಳು ನಡೆಯುತ್ತವೆ. ಅಷ್ಟರಲ್ಲೂ ಪಾಲ್ಗೊಳ್ಳುವುದು ಕಷ್ಟ. ಆಡಿದರೂ ಗೆಲ್ಲುವುದು ಕಷ್ಟ. ಸಿಕ್ಕಿದ ಅವಕಾಶಗಳ ಪೈಕಿ, ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವನ್ನು ದಕ್ಕಿಸಿಕೊಳ್ಳಬೇಕು, ಹಾಗೆಯೇ ಒಲಿಂಪಿಕ್‌ ಅರ್ಹತೆಯನ್ನು.

ಕಳಪೆ ಲಯದ ಭೀತಿ
ಸದ್ಯ ಕೆ.ಶ್ರೀಕಾಂತ್‌ ಹಾಗೂ ಸೈನಾ ನೆಹ್ವಾಲ್‌ ಸತತವಾಗಿ ಕಳಪೆ ಲಯ ತೋರಿದ್ದಾರೆ. ಥಾಯ್ಲೆಂಡ್‌ ಕೂಟದಲ್ಲಿ ಇಬ್ಬರ ಹಣೆಬರೆಹ ಬದಲಾದರೆ ಅದು ಪವಾಡ ಮಾತ್ರ. ಈ ಕೂಟದಲ್ಲಿ ಸೈನಾ, ಡೆನ್ಮಾರ್ಕ್‌ನ ಲೈನ್‌ ಎಚ್‌ ಜೆಮಾರ್ಕ್‌ ಜಾರ್‌ಫೆಲ್ಡ್‌ರನ್ನು, ಶೆಸಾರ್‌ ರುಸ್ಟಾವಿಟೊರನ್ನು ಶ್ರೀಕಾಂತ್‌ ಮೊದಲ ಪಂದ್ಯದಲ್ಲಿ ಎದುರಿಸಲಿದ್ದಾರೆ.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.