ಸಾಲ ತುಂಬಿದರೂ ನೋಟಿಸ್
Team Udayavani, Jan 22, 2020, 4:14 PM IST
ಗೋಕಾಕ: ಟ್ರ್ಯಾಕ್ಟರ್ ಮೇಲೆ ಪಡೆದಿದ್ದ ಸಾಲ ಪಾವತಿಯಾಗಿದ್ದರೂ ಸಾಲ ಬಾಕಿ ಇದೆ ಎಂದು ನೋಟಿಸ್ ನೀಡಿದ ಬ್ಯಾಂಕಿನ ಕ್ರಮ ಖಂಡಿಸಿ ರೈತ ಸಂಘದವರು ಬ್ಯಾಂಕಿನ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸಿಂಡಿಕೇಟ್ ಬ್ಯಾಂಕಿನ ಮುಂದೆ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಬ್ಯಾಂಕಿನ ವಿರುದ್ಧ ಘೋಷಣೆ ಕೂಗಿ, ಬ್ಯಾಂಕ್ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ ಮಾತನಾಡಿ, ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಹೇಶ ಹೊರಟ್ಟಿ ಎಂಬ ರೈತ 2005ರಲ್ಲಿ ಟ್ರ್ಯಾಕ್ಟರ್ ಮೇಲೆ ಸಾಲ ಪಡೆದು ಮರಳಿ ಸಾಲ ಪಾವತಿ ವಿಳಂಬವಾಗಿದ್ದರಿಂದ ಬ್ಯಾಂಕಿನವರು ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಜಪ್ತಿ ಮಾಡಿ 2008ರಲ್ಲಿ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಿ ಸಾಲ ಪಾವತಿಸಿಕೊಂಡು ಬಾಕಿ ಹಣವನ್ನು ರೈತನ ಖಾತೆಗೆ ಜಮೆ ಮಾಡಿದ್ದಾರೆ. ಆದರೆ ಕಳೆದ ಡಿ. 19ರಂದು ರೈತನಿಗೆ ಬಾಕಿ ಸಾಲವಿದ್ದು, ಬೃಹತ್ ಸಿಂಡ್ ಅದಾಲತ್ (ರಿಕವರಿ ಕ್ಯಾಂಪ್)ನಲ್ಲಿ ಒಂದೇ ಕಂತಿನ ರಿಯಾಯತಿಯಲ್ಲಿ ತುಂಬಲು ಅನುಕೂಲವಿದೆ ಎಂದು ಬ್ಯಾಂಕಿನವರು ರೈತನಿಗೆ ನೋಟಿಸ್ ನೀಡಿದ್ದು ಖಂಡನೀಯವಾಗಿದೆ ಎಂದರು.
ರೈತ ಮಹೇಶ ಹೊರಟ್ಟಿ ಮಾತನಾಡಿ, ಬ್ಯಾಂಕಿನಲ್ಲಿ 4.90 ಲಕ್ಷ ರೂ. ಟ್ರ್ಯಾಕ್ಟರ್ ಮೇಲೆ ಸಾಲ ಪಡೆದಿದ್ದೆ, ಬ್ಯಾಂಕಿನವರು ಟ್ರ್ಯಾಕ್ಟರ್ ಜತೆ ಟ್ರೇಲರ್ ಕೂಡಾ ಜಪ್ತಿ ಮಾಡಿ, 2008ರಲ್ಲಿ ಬಹಿರಂಗ ಹರಾಜಿನಲ್ಲಿ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಮಾರಾಟ ಮಾಡಿ ಸಾಲ ತುಂಬಿಕೊಂಡು ಉಳಿದ ಹಣವನ್ನು ನಮ್ಮ ಖಾತೆಗೆ ಜಮಾ ಮಾಡಿದ್ದರು. ಈಗ ನನ್ನ ಹೆಸರಿನಲ್ಲಿ ಸಾಲವಿದೆ ಎಂದು ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಮುಖಂಡರಾದಮಹಾದೇವ ಗೋಡೇರ, ಶಂಕರ ಮದಿಹಳ್ಳಿ, ಪ್ರಕಾಶ ಹಾಲನ್ನವರ, ಶಿವು ಪಾಟೀಲ, ಮುತ್ತೆಪ್ಪ ಮದಿಹಳ್ಳಿ, ಹೊಳೆಪ್ಪ ಉದ್ಯಾಗೋಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.