ತೆರಿಗೆ ಕಟ್ಟಲು ಜನರು ಹಿಂದೇಟು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ?
Team Udayavani, Jan 22, 2020, 4:29 PM IST
ಮಣಿಪಾಲ: ತೆರಿಗೆ ಸಂಗ್ರಹದಲ್ಲಿ ಕೊರತೆ : ತೆರಿಗೆ ಕಟ್ಟಲು ಜನರು ಹಿಂದೇಟು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ರವಿ ಚಕ್ರವರ್ತಿ: ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚಿಸುವವರನ್ನ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ. ಹಾಗೆಯೇ ಎಲ್ಲಾ ರಾಜ್ಯಗಳಿಗೂ ತೆರಿಗೆಯ ಪಾಲನ್ನ ಸಮರ್ಪಕವಾಗಿ ಹಂಚಬೇಕಲ್ಲವೇ. ಕೆಲವು ರಾಜ್ಯಗಳಿಗೆ ಬೇಕಾಬಿಟ್ಟಿ ತೆರಿಗೆ ಪಾಲನ್ನ ಹಂಚುವುದು ಎಷ್ಟರ ಮಟ್ಟಿಗೆ ಸರಿ.
ಹರೀಶ್ ಡಿ ಸಾಲ್ಯಾನ್: ಮೊದಲಿನಿಂದಲೂ 100 ರೂ ತೆರಿಗೆ ಕಟ್ಟಲು ಬಂದಾಗ 10 ರೂ ಲಂಚ ಕೊಟ್ಟು 20 ರೂ ತೆರಿಗೆ ಕಟ್ಟುವ ಸಂಪ್ರದಾಯ ದಿಂದ 65 ವರ್ಷಗಳ ನಂತರ ಈಗ ಕೆಲವರಿಗೆ ಸರಿಯಾದ ತೆರಿಗೆ ಕಟ್ಟಲು ಬೇಜಾರಾಗಿರೋದು ಸುಳ್ಳಲ್ಲ !
ಯೋಗೀಶ್ ಆಚಾರ್: ಮೊದ್ಲೇ ವ್ಯವಹಾರ ಇಲ್ಲ. ದುಡಿದ ಹಣ ಪೂರ್ತಿ ಟ್ಯಾಕ್ಸ್ ಕಟ್ಟಿದ್ರೆ ಜೀವನ್ ನೆಡೆಸೋದು ಕಷ್ಟ ಆಗುತ್ತೆ.
ರಜಾಕ್ ಕರ್ಪಾಡಿ: ನಾವು ಕಷ್ಟ ಪಟ್ಟು ತೆರಿಗೆ ಕಟ್ಟುದು. ಅದನ್ನು ನಮ್ಮ ಪಕ್ಷ ಸರಕಾರ ಕಟ್ಟಬೇಕು ಎಂದು ಅಧಿಕಾರದ ಆಸೆಯಿಂದ ಸರ್ಕಾರ ನಡೆಸುತ್ತಿದ್ದ ಪಕ್ಷದ ಅಭ್ಯರ್ಥಿಗಳನ್ನು ದೊಡ್ಡ ದೊಡ್ಡ ರೆಸಾರ್ಟ್ ಗಳಲ್ಲಿ ಕೂಡಿಟ್ಟು ಸರಕಾರವನ್ನು ಬೀಳಿಸುದು. ಮತ್ತೆ ಇವರು ಸರಕಾರಕ್ಕೆ ಬಂದ ಮೇಲೆ ಖಜಾನೆಯಲ್ಲಿ ಹಣ ಇಲ್ಲ ಅನ್ನೂದು. ಇವರಿಗೆ ಅಧಿಕಾರದ ಆಸೆ ಬಡಜನರಿಗೆ ಬದುಕುವ ಆಸೆ.
ನರಸಿಂಹ ಮೂರ್ತಿ ಎನ್ ಎಂ: ದೇಶದ ಆರ್ಥಿಕ ಮೂಲವಾಗಿರುವ ಮಧ್ಯಮ ವರ್ಗದವರಿಂದ ತೆರಿಗೆ ವಸೂಲು ಮಾಡೀ ಮಾಡೀ ವಿವಿಧ ಭಾಗ್ಯಗಳ ಹೆಸರಿನಲ್ಲಿ ಲೂಟಿಕೋರರು ಚನ್ನಾಗಿ ಉಣ್ಣುತ್ತಾರೆ. ಎಷ್ಟೇ ತೆರಿಗೆ ಕಟ್ಟಿದರೂ ಸಾಲದು. ಮದ್ಯಮ ವರ್ಗದವರು ಕಷ್ಟ ಪಟ್ಟು ದುಡಿದು ತೆರಿಗೆ ಕಟ್ಟಿ ದೇಶದ ಶ್ರೀಮಂತರನ್ನು ಮತ್ತು ಬಡವರನ್ನು ಸಾಕಬೇಕಾಗಿದೆ. ಲಕ್ಷಾದೀಶರಾದರೂ ಬಡತನ ರೇಖೆಗಿಂತ ಕೆಳಗಿರುವ ಕೆಲ ಬಡವರಿಂದ ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡಿ
ಗಾಯತ್ರಿ ರಮೇಶ್: ತೆರಿಗೆ ದರ ತುಂಬಾ ಅತಿಯಾಯಿತು 10 ಲಕ್ಷಕ್ಕೂ ಹೆಚ್ಚಿನ ಆದಾಯಕ್ಕೆ ಶೇ 30 ತೆರಿಗೆ ಇದೆ. ಮತ್ತೆ ಅದಕ್ಕೆ ಸರಚಾರ್ಜ 3 %. ಅಂದರೆ ನಿಮ್ಮ ಆದಾಯ ರೂ ಒಂದು ಕೋಟಿ ಇದ್ದರೆ ರೂ 33 ಲಕ್ಷ ತೆರಿಗೆ ಕಟ್ಟಬೇಕು. ಎಂತಹವರಿಗೂ ಇದು ಬೇಸರದ ವಿಷಯ. ಅದಕ್ಕಾಗಿ ತೆರಿಗೆ ಕಟ್ಟುವುದಿಲ್ಲ ಅಥವಾ ತೆರಿಗೆ ತಪ್ಪಿಸುವ ಮಾರ್ಗ ಹುಡುಕುತ್ತಾರೆ. ಇದಲ್ಲದೆ ನಮ್ಮ ತೆರಿಗೆ ಹಣವನ್ನು ಎಲ್ಲಾ ರಾಜಕಾರಣಿಗಳೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಪಕ್ಷಬೇದ ಇಲ್ಲ. ತೆರಿಗೆ ಹಣವನ್ನು ಲೂಟಿ ಮಾಡುತ್ತಾರೆ. ಇವರ ಸಂಬಳ ಮತ್ತು ಇತರೆ ಖರ್ಚುಗಳಿಗಾಗಿ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಅಲ್ಲದೆ ಅಭಿವೃದ್ಧಿ ಕಾರ್ಯಗಳಲ್ಲೂ ಸಹ % ತೆಗೆದುಕೊಳ್ಳುತ್ತಾರೆ.. ಈ ಎಲ್ಲಾ ಕಾರಣಗಳಿಂದ ತೆರಿಗೆ ಸಂಗ್ರಹ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.