ಕುಳಾಯಿ ಜಂಕ್ಷನ್ ಹೆದ್ದಾರಿ ಗುಂಡಿಗೆ ಶಾಶ್ವತ ಮುಕ್ತಿ: ಡಾ| ಭರತ್ ಶೆಟ್ಟಿ
ಕುಳಾಯಿ ಜಂಕ್ಷನ್‌ನ ಕಾಂಕ್ರೀಟ್ ರಸ್ತೆ ಉದ್ಘಾಟನೆ
Team Udayavani, Jan 23, 2020, 5:24 AM IST
ಕುಳಾಯಿ: ರಾಷ್ಟ್ರೀಯ ಹೆದ್ದಾ ರಿಯ ಕುಳಾಯಿ ಜಂಕ್ಷನ್‌ನಲ್ಲಿ ಹೆದ್ದಾರಿ ರಸ್ತೆ ಅನೇಕ ವರ್ಷಗಳಿಂದ ಹಾಳಾಗಿದ್ದು, ವಾಹನ ಸವಾರರು, ಪ್ರಯಾ ಣಿಕರು ತೊಂದರೆ ಅನುಭವಿಸುವುದರ ಜತೆಗೆ ಹೆದ್ದಾರಿಯ ಸುಗಮ ಸಂಚಾರಕ್ಕೂ ತಡೆಯಾಗುತ್ತಿತ್ತು. ಇದೀಗ ಹೆದ್ದಾರಿ ಇಲಾಖೆಗೆ ಕಾಂಕ್ರೀಟ್ ಕಾಮಗಾರಿ ನಡೆಸಿದ್ದು, ಸ್ಥಳೀಯರ ಬಹು ದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಶಾಸಕ ಡಾ|ಭರತ್ ಶೆಟ್ಟಿ ವೈ. ಹೇಳಿದರು.
ಬುಧವಾರ ಕುಳಾಯಿ ಜಂಕ್ಷನ್‌ನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡ ಹೊಂಡ, ಗುಂಡಿಗಳು ಬಿದ್ದು ವಾಹನಗಳ ಬಿಡಿ ಭಾಗಗಳಿಗೆ ಹಾನಿ ಯಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ರಿûಾ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದರು. ಸಂಸದರ ಜತೆ ಚರ್ಚಿಸಿ ಹೆದ್ದಾರಿ ಇಲಾಖೆಗೆ ಕಾಂಕ್ರೀಟ್ ಹಾಕಲು ಸೂಚಿಸಿದ್ದೆ. ಇದೀಗ ರಸ್ತೆ, ಸುಸಜ್ಜಿತ ಮಳೆ ನೀರು ಹರಿಯಲು ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಫುಟ್‌ಪಾತ್ ನಿರ್ಮಿಸಲಾಗುವುದು.ಬೈಕಂಪಾಡಿ ಕೈಗಾರಿಕಾ ತಿರುವು ಜಂಕ್ಷನ್, ಕೂಳೂರು ಹೆದ್ದಾರಿ ಬಳಿ ಕೂಡ ಇದೇ ಮಾದರಿಯಲ್ಲಿ ಅಭಿವೃದ್ಧಿಗೆ ಸೂಚಿಸಲಾಗಿದೆ ಎಂದರು.
ಪಾಲಿಕೆ ಸದಸ್ಯ ವರುಣ್ ಚೌಟ, ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು , ಪಾಲಿಕೆ ಸದಸ್ಯೆ ವೇದಾವತಿ, ಬಿಜೆಪಿ ಮುಖಂಡರಾದ ವಿಠಲ ಸಾಲ್ಯಾನ್, ರಮೇಶ್ ಅಳಪೆ, ಯೋಗೀಶ್ ಸನಿಲ್, ಭರತ್ ಶೆಟ್ಟಿ, ಗಂಗಾಧರ ಬಂಜನ್, ಎಂ.ಟಿ. ಸಾಲ್ಯಾನ್, ಸುನಿಲ್ ಕುಳಾಯಿ, ಕೆ.ಪಿ. ಚಂದ್ರಶೇಖರ್, ಜಯರಾಂ ಕುಳಾಯಿ, ಮಂಗಳೂರು ಉತ್ತರ ಸಂಚಾರಿ ಠಾಣೆಯ ಸಿ.ಐ. ಮೋಹನ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
ಏಕಮುಖ ಸಂಚಾರ ಪ್ರಸ್ತಾವ
ಕುಳಾಯಿ ಮಾರ್ಗವಾಗಿ ಎಂಆರ್‌ಪಿಎಲ್, ಎಚ್‌ಪಿಸಿಎಲ್ ಸಹಿತ ಬೃಹತ್ ಕಂಪೆನಿಗಳಿಗೆ ಭಾರೀ ಗಾತ್ರದ ಟ್ರಕ್‌ಗಳು, ಟ್ಯಾಂಕರ್ ಓಡಾಡುತ್ತಿದ್ದು, ಅಪಾಯಕಾರಿಯಾಗಿದೆ. ಈ ಪ್ರದೇಶ ಹಲವು ಬಡಾವಣೆಗಳನ್ನು ಹೊಂದಿದ್ದು, ಟ್ರಕ್, ಟ್ಯಾಂಕರ್‌ಗಳನ್ನು ನಿಷೇ ಧಿಸಬೇಕೆಂಬ ಮನವಿ ಸಾರ್ವಜನಿಕರಿಂದ ಕೇಳಿ ಬಂತು. ಸುರತ್ಕಲ್ ಜಂಕ್ಷನ್‌ನಲ್ಲಿ ವಾಹನ ಒತ್ತಡ ಅಧಿ ಕವಾಗುವುದರಿಂದ ಕುಳಾಯಿ, ಸುರತ್ಕಲ್‌ನಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಸ್ತಾವ ವ್ಯಕ್ತವಾಯಿತು. ಉತ್ತರ ಸಂಚಾರ ಠಾಣೆಯ ಅ ಧಿಕಾರಿಗಳಿಗೆ ಈ ಬಗ್ಗೆ ಮುಂಜಾಗ್ರತಾ ಕ್ರಮ ಕ್ರಮಗೊಳ್ಳುವಂತೆ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.