ಪಾಕಿಸ್ತಾನ, ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ
Team Udayavani, Jan 22, 2020, 10:41 PM IST
ನವದೆಹಲಿ: ಪಾಕಿಸ್ತಾನ ಅಥವಾ ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನವದೆಹಲಿಯಲ್ಲಿ ಬುಧವಾರ ಎನ್‌ಸಿಸಿ ಗಣರಾಜ್ಯ ದಿನ ಶಿಬಿರದಲ್ಲಿ ರಕ್ಷಾಮಂತ್ರಿ ಪದಕ ವಿತರಿಸಿ ಅವರು ಮಾತನಾಡಿದರು.
ಭಾರತದ ಸಂತರು ತನ್ನ ನೆಲದ ಪ್ರಜೆಗಳನ್ನು ಮಾತ್ರ ತನ್ನವರೆಂದು ಹೇಳಲಿಲ್ಲ. ಬದಲಿಗೆ ಇಡೀ ವಿಶ್ವವನ್ನೇ ತನ್ನವರೆಂದು ಹೇಳಿದರು. ಆ ಸಂತರ ಮೌಲ್ಯಗಳಿಂದಲೇ ಭಾರತದಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡಲು ಸಾಧ್ಯವಾಗಿದೆ. ಹೀಗಾಗಿಯೇ ಪಾಕಿಸ್ತಾನ, ಅಮೆರಿಕದಂತೆ ಭಾರತ ಧರ್ಮಾಧಾರಿತ ದೇಶವೆಂದು ಘೋಷಿಸಿಕೊಳ್ಳಲಿಲ್ಲ ಎಂದಿದ್ದಾರೆ.
ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿ, ಮುಸ್ಲಿಮರನ್ನು ಪ್ರತ್ಯೇಕವಾಗಿ ನೋಡುತ್ತಿದೆ ಎಂದು ದೇಶಾದ್ಯಂತ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜನಾಥ್ ಹೇಳಿಕೆ ಮಹತ್ವ ಪಡೆದಿದೆ.
ನಾವು ಯಾವ ಧರ್ಮೀಯರನ್ನೂ ತರತಮ ಭಾವದಿಂದ ನಡೆಸಿಕೊಳ್ಳುವುದಿಲ್ಲ. ನಮ್ಮದು ಹಿಂದು, ಬೌದ್ಧ, ಸಿಖ್ ಧರ್ಮಾಧಾರಿತ ರಾಷ್ಟ್ರವೆಂದು ನಾವು ಹೇಳಲಿಲ್ಲ. ಇದು ಎಲ್ಲ ಧರ್ಮೀಯರಿಗೆ ಸೇರಿದ ದೇಶ. ಅದೇ ಪಾಕಿಸ್ತಾನ ನಮ್ಮದು ಧರ್ಮಾಧಾರಿತ ಎಂದು ಘೋಷಿಸಿಕೊಂಡಿದೆ. ಅಮೆರಿಕ ಕೂಡ ಧರ್ಮಾಧಾರಿತ ದೇಶವಾಗಿದೆ ಎಂದು ರಾಜನಾಥ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.