ಮಹಿಳಾ ಕ್ರಿಕೆಟ್‌ನ ಭರವಸೆಯ ಪ್ರತಿಭೆ ಸಂಧ್ಯಾ
ಕ್ರೀಡೆಯಲ್ಲಿ ಮುಂದಿರುವ ಸಂಧ್ಯಾ ಸಂಘಟನೆಯಲ್ಲೂ ಮುಂಚೂಣಿಯಲ್ಲಿದ್ದಾಳೆ.
Team Udayavani, Jan 23, 2020, 5:26 AM IST
ಕ್ರಿಕೆಟ್, ವಾಲಿಬಾಲ್, ಲಾನ್‌ಟೆನಿಸ್‌ನಲ್ಲಿ ಮುಂದಿರುವ ಸಂಧ್ಯಾ ಕೆ.ಕಾಂಚನ್ ಬಾಳಿಕೆರೆ ಮಹಿಳಾ ಕ್ರಿಕೆಟ್ ಅಖಾಡದಲ್ಲಿ ಭರವಸೆಯ ಕ್ರಿಕೆಟ್ ಆಟಗಾರ್ತಿಯಾಗುವ ಭರವಸೆ ಮೂಡಿಸಿದ್ದಾರೆ. ಈಗಾಗಲೇ ರಾಜ್ಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿರುವ ಸಂಧ್ಯಾ, ಬಾಲ್ಯದಿಂದಲೂ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವಳು.
ಕುಂದಾಪುರ ತಾಲೂಕು ದೇವಲ್ಕುಂದ ಸಮೀಪದ ಬಾಳಿಕೆರೆಯ ನಿವಾಸಿಯಾದ ಸಂಧ್ಯಾ ಕಿರಣ್ ಕುಂದರ್ ಮತ್ತು ಸರಸ್ವತಿ ದಂಪತಿಯ ಪುತ್ರಿ. ಪ್ರಸ್ತುತ ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಕಾಂ ಅಭ್ಯಾಸಿ.
ಈಗಾಗಲೇ ಮಹಿಳಾ ಕ್ರಿಕೆಟ್‌ನಲ್ಲಿ ಮಂಗಳೂರು ವಿವಿ ಮಟ್ಟದಲ್ಲಿ ತಂಡವನ್ನು 4ನೇ ಬಾರಿ ಪ್ರತಿನಿಧಿಸಿ ಉತ್ತಮ ಬೌಲರ್ ಪ್ರಶಸ್ತಿಗೆ 2 ಬಾರಿ ಭಾಜನರಾಗಿದ್ದಾರೆ. ಮಂಗಳೂರು ವಿವಿ ದಕ್ಷಿಣ ವಲಯ ಕ್ರಿಕೆಟ್ ಪಂದ್ಯಾವಳಿ, ಸತ್ಯಭಾಮ ಯುನಿವರ್ಸಿಟಿ ಚೆನ್ನೈ, ದಕ್ಷಿಣ ವಲಯ- ಬೆಂಗಳೂರು ಯುನಿವರ್ಸಿಟಿ ಬೆಂಗಳೂರಿನಲ್ಲಿ, ದಕ್ಷಿಣ ವಲಯ- ಆಂಧ್ರಪ್ರದೇಶದ ಆಂಧಾÅ ಯೂನಿವರ್ಸಿಟಿ ವಿಶಾಖಪಟ್ಟಣದಲ್ಲಿ ಆಡಿದ್ದ ಸಂಧ್ಯಾ, ಕಳೆದ ಡಿಸೆಂಬರ್‌ನಲ್ಲಿ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ವಿವಿ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿ ಧಿಸಿದ್ದರು. ವಾಲಿಬಾಲ್‌ನ ಸರ್ವಾಂಗೀಣ ಆಟಗಾರ್ತಿಯಾಗಿ ಹೊರಹೊಮ್ಮಿರುವ ಇವರು, ನೆಲಮಂಗಲದಲ್ಲಿ ನಡೆದ ರಾಜ್ಯ ಮಟ್ಟದ ಗ್ರಾಮೀಣ ವಾಲಿಬಾಲ್ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ರಾಜ್ಯ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಪಂದ್ಯದಲ್ಲಿ 2ನೇ ಬಹುಮಾನ, ಬಾಗಲಕೋಟದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಟದಲ್ಲಿ 2ನೇ ಬಹುಮಾನ, ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ವಾಲಿಬಾಲ್ ಪಂದ್ಯಾಟ, ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ, ರಾಜ್ಯ ಮಹಿಳಾ ತಂಡವನ್ನು 3 ಬಾರಿ ಪ್ರತಿನಿಧಿ ಸಿ, ಪಿವೈಕೆಕೆಎ ವಾಲಿಬಾಲ್ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಲಾನ್ ಟೆನಿಸ್‌ನಲ್ಲಿಯೂ ಪ್ರತಿಭಾನ್ವಿತ ಆಟಗಾರ್ತಿಯಾದ ಸಂಧ್ಯಾ, ಇತ್ತೀಚೆಗೆ ಓಪನ್ ಲಾನ್ ಟೆನಿಸ್ ಪಂದ್ಯಾವಳಿಗಾಗಿ ಆಯ್ಕೆಯಾಗಿ 1ನೇ ಸ್ಥಾನವನ್ನು ಪಡೆದರು.
2018-19ರಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಉಡುಪಿ ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಯುವ ಜಾಗƒತಿ ಯೋಜನೆಯಲ್ಲಿ ಭಾಗವಹಿಸಿದ್ದಾರೆ. 4 ವರ್ಷಗಳ ಇಂಟರ್ ಕಾಲೇಜು ಶಟ್ಲ ಬ್ಯಾಡ್ಮಿಂಟನ್, ಚೆಸ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಟೇಬಲ್ ಟೆನಿಸ್ ಪಂದ್ಯಾವಳಿ, ಯಕ್ಷಗಾನದಲ್ಲಿಯೂ ಆಸಕ್ತಿ ಹೊಂದಿದ್ದು, ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದರು.
ಸಂಧ್ಯಾ ಅವರ ಸಾಧನೆಯನ್ನು ಕಾಲೇಜು ಗೌರವಿಸಿ ಗುರುತಿಸಿತಲ್ಲದೆ ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ ವತಿಯಿಂದ ಜಾತ್ರೆಯಲ್ಲಿ ಸಮ್ಮಾನಿಸಿತು. ಇದಲ್ಲದೆ ಹಲವಾರು ಅಭಿನಂದನೆಗಳಿಗೆ ಪಾತ್ರರಾಗಿ ಮೊಗವೀರ ಯುವ ಸಂಘಟನೆಯ ಸದಸ್ಯೆಯಾಗಿ ಸಂಘಟನ ಚಟುವಟಿಕೆಯಲ್ಲೂ ತೊಡಗಿರುವುದು ವಿಶೇಷ.
- ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.