ಶ್ರೀ ಕ್ಷೇತ್ರ ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಆರಂಭ; 20 ಲಕ್ಷ ಭಕ್ತರ ನಿರೀಕ್ಷೆ: ನಳಿನ್
Team Udayavani, Jan 23, 2020, 6:46 AM IST
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
ಗಳು ಆರಂಭಗೊಂಡಿದ್ದು, ಫೆ. 3ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಸುಮಾರು 20 ಲಕ್ಷಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಕಟೀಲು ದೇವಸ್ಥಾನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ 12 ವರ್ಷಕ್ಕೊಮ್ಮೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಬೇಕು. ಕಟೀಲಿನಲ್ಲಿ 2007ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. ಆ ಪ್ರಯುಕ್ತ ಕಳೆದ ವರ್ಷ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಬೇಕಿತ್ತು. ಆದರೆ ಕೆಲವೊಂದು ಕಾರಣದಿಂದ ಕಳೆದ ವರ್ಷ ಅಷ್ಟಬಂಧ ಮಾತ್ರ ಮಾಡಲಾಗಿದ್ದು, ಒಂದು ವರ್ಷ ತಡವಾಗಿ ಈಗ ಬ್ರಹ್ಮಕಲಶ ನಡೆಸಲಾಗುತ್ತಿದೆ ಎಂದರು. ದೇವಾಲಯದ ಒಳಗಿನ ಕಾರ್ಯ ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಎರಡು ಗ್ರಾಮಗಳಿಗೆ ಪೂರಕವಾದ ಕುಡಿಯುವ ನೀರಿನ ಯೋಜನೆ, ರಸ್ತೆ ಕಾಮಗಾರಿಗಳು ನಡೆದಿದೆ ಎಂದರು.
ದೇವಸ್ಥಾನದಲ್ಲಿ ಸ್ವರ್ಣ ಲೇಪಿತ ಧ್ವಜಸ್ತಂಭ ನಿರ್ಮಾಣವಾಗಿದ್ದು, ಜ. 24ರಂದು ಪ್ರತಿಷ್ಠೆ ನಡೆಯಲಿದೆ. ಸದ್ಯ ಸುತ್ತು ಪೌಳಿಯ ಸುಂದರೀಕರಣ ನಡೆಯುತ್ತಿದೆ. ದೇವಸ್ಥಾನದ ಸುತ್ತ ವಿಸ್ತರಣೆ ಮಾಡಲಾಗ್ತಿದೆ ಎಂದರು. ದೇವಸ್ಥಾನದ ಎದುರಿನ ರಸ್ತೆಯ ಅಗಲೀಕರಣಕ್ಕೆ ಈ ಹಿಂದೆ ಕಾನೂನಾತ್ಮಕ ತೊಡಕು ಎದುರಾಗಿತ್ತು. ಸದ್ಯ ಅಂಗಡಿಗಳನ್ನು ತೆರವು ಮಾಡಲಾಗಿದ್ದು, ದೇವಸ್ಥಾನದ ಮುಂಭಾಗ ಸುಂದರ ರಥಬೀದಿ ಆಗಲಿದೆ. ಕಟೀಲು ಕ್ಷೇತ್ರದ ಅಭಿವೃದ್ಧಿಗೆಂದು ರಾಜ್ಯದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು 25 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದರು.
1 ಗಂಟೆಯಲ್ಲಿ 25,000 ಮಂದಿಗೆ ಊಟ!
1 ಗಂಟೆಯಲ್ಲಿ 25 ಸಾವಿರ ಮಂದಿಗೆ ಅಡುಗೆ ಮಾಡಬಹುದಾದ ಹೈಜೆನಿಕ್ ಅಡುಗೆ ಶಾಲೆ ನಿರ್ಮಾಣವಾಗಿದೆ. ಸಂಜೀವಿನಿ ಟ್ರಸ್ಟ್ ನೇತೃತ್ವದಲ್ಲಿ 1 ಕೋ. ರೂ. ನೆರವಿನಲ್ಲಿ ಶೌಚಾಲಯ ನಿರ್ಮಿಸ
ಲಾಗಿದೆ. 24 ಗಂಟೆ ತಂಪಾದ ನೀರಿನ ವ್ಯವಸ್ಥೆ ಇರಲಿದ್ದು, 19 ಕಡೆ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಹೇಳಿದರು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲಿನ ಅನುವಂಶಿಕ ಮೊಕ್ತೇಸರರಾದ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಅನಂತಪದ್ಮನಾಭ ಆಸ್ರಣ್ಣ, ಆಡಳಿತ ಮಂಡಳಿ ಅದ್ಯಕ್ಷ, ಅನುವಂಶಿಕ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಮುಖಾಂಶಗಳು
* ದೇವಸ್ಥಾನದ ಸುತ್ತ 3.5 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣ
* ಬ್ರಹ್ಮಕಲಶೋತ್ಸವಕ್ಕೆ 10,000 ಸ್ವಯಂಸೇವಕರು
*ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 700 ರಾ.-ಅಂ. ರಾಷ್ಟ್ರೀಯ ಕಲಾವಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.