ಫೆ. 22ಕ್ಕೆ ಶುಕಮುನಿಸ್ವಾಮಿ ರಥೋತ್ಸವ
ಭಕ್ತಿ ಹೆಸರಲ್ಲಿ ಆಸ್ತಿಪಾಸ್ತಿ ಹಾನಿಗೊಳಿಸಿದರೆ ಕ್ರಮ ಜಾತ್ರೆಗೆ ಬರುವ ಭಕ್ತರಿಗೆ ವ್ಯವಸ್ಥೆ ಕಲ್ಪಿಸಿ
Team Udayavani, Jan 23, 2020, 5:03 PM IST
ದೋಟಿಹಾಳ: ಗ್ರಾಮದ ಶುಕಮುನಿಸ್ವಾಮಿ ತಾತನ ಜಾತ್ರೆ ತಾಲೂಕಿನಲ್ಲಿ ದೊಡ್ಡ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ. ಆದರೆ ಜಾತ್ರೆಗೆ ಬರುವ ಭಕ್ತರಿಗೆ ಸರಿಯಾದ ವ್ಯವಸ್ಥೆಯಿಲ್ಲ ಎಂದು ಮೂರು ವರ್ಷಗಳಿಂದ ಚರ್ಚೆ ಮಾಡಲಾಗುತ್ತಿದೆಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಗ್ರಾಮದ ಅವದೂತ ಶುಕಮುನಿಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಜಾತ್ರೆ
ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಈ ಮಠ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಜಾತ್ರೆಗೆ ಬರುವ ಮಹಿಳೆಯರಿಗಾಗಿ ಸಾನ್ನಗೃಹ ನಿರ್ಮಿಸಬೇಕೆಂಬ ಎರಡ್ಮೂರು ವರ್ಷಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಜಾತ್ರೆ ಹತ್ತಿರ ಬರುತ್ತಿದ್ದರೂ ಮಠದ ಆವರಣದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ಸ್ವಚ್ಛತೆ ಮಾಡಿಲ್ಲ. ರಥ ಬೀದಿಯಲ್ಲಿ ನೀರು ನಿಂತು ಚರಂಡಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ತಿಳಿಸಿದರು.
ಸಿಪಿಐ ಜೆ. ಚಂದ್ರಶೇಖರ ಮಾತನಾಡಿ. ಪಲ್ಲಕ್ಕಿ ಉತ್ಸವದಲ್ಲಿ ಸಾರ್ವಜನಿಕರ
ಆಸ್ತಿ-ಪಾಸ್ತಿಗೆ ಹಾನಿ ಮಾಡಿದರೆ. ಯಾವುದೇ ಮುಲಾಜಿಲ್ಲದೆ ಅಂತಹ ವ್ಯಕ್ತಿಗಳ ವಿರುದ್ಧ
ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಇಲಾಖೆಯಿಂದ ವಿಶೇಷವಾಗಿ ತಂಡ ರಚನೆ ಮಾಡಲಾಗುತ್ತದೆ. ಪಲ್ಲಕ್ಕಿ ಉತ್ಸವ ಆರಂಭದಿಂದ ಕೊನೆಯವರಿಗೆ ವೀಡಿಯೊ ಚಿತ್ರೀಕರಣ ಮಾಡಲಾಗುವುದು. ಒಂದು ವೇಳೆ ಸಾರ್ವಜನಿಕರು ಭಕ್ತಿಯ ನೆಪದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ತೊಂದರೆ ಮಾಡಿದರೆ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಎಂ. ಸಿದ್ದೇಶ ಮಾತನಾಡಿ,ಮಹಿಳಾ ಯಾತ್ರಿಕರಿಗೆ ಕೂಡಲೇ ಸಾನ್ನಗೃಹ ನಿರ್ಮಾಣ ಮಾಡುತ್ತೇವೆ. ಶ್ರದ್ಧಾಭಕ್ತಿಯಿಂದ ತಾತನ ಜಾತ್ರೆ, ಪಲ್ಲಕ್ಕಿ ಉತ್ಸವ ಆಚರಿಸಿ
ದೇವರ ಕೃಪೆಗೆ ಪಾತ್ರರಾಗಿ. ಇದನ್ನು ಬಿಟ್ಟು ಮನಸ್ಸು ಬಂದಂತೆ ಆಚರಣೆ ಮಾಡಿ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡುವುದು ತಪ್ಪು. ಜಾತ್ರೆಯನ್ನು ಶಾಂತಿಯುತವಾಗಿ ಆಚರಿಸಬೇಕು. ರಥ ಬೀದಿಯ ಸ್ವತ್ಛತೆಯ ಬಗ್ಗೆ ಈಗಾಗಲೇ ಶಾಸಕರ ಜೊತೆ ಚರ್ಚೆ ಮಾಡಲಾಗಿದೆ.
1-2 ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳತ್ತೇವೆ. ಪಲ್ಲಕಿ ಮೆರವಣಿಗೆಯನ್ನು ಸ್ಥಳೀಯ
ಸಂಘಗಳಿಗೆ ವಹಿಸಲಾಗುತ್ತದೆ. ಪ್ರತಿದಿನ ಒಂದು ಸಂಘದ ಸದಸ್ಯರ ಸಮ್ಮುಖದಲ್ಲಿ ತಾತಾ ಪಲ್ಲಕಿ ಉತ್ಸವ ನಡೆಯುತ್ತದೆ. ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸುವ ಸಂಘಗಳಿಗೆ ಟಿ-ಶರ್ಟ್ ವ್ಯವಸ್ಥೆ ಮಾಡಲಾಗುತ್ತದೆ. ದಾಸೋಹ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತದೆ. ದಾಸೋಹ ಸೇವೆ ಮಾಡುವ ಭಕ್ತರು ಮುಂಚಿತವಾಗಿ ದೇವಸ್ಥಾನದ ಕಮಿಟಿಯವರಿಗೆ ತಿಳಿಸಬೇಕು.
ನೇರವಾಗಿ ಅಡುಗೆ ಮಾಡುವಂತಿಲ್ಲ. ಹೀಗಾಗಿ ಭಕ್ತರು ಮಠಕ್ಕೆ ನೀಡುವ ದಾಸೋಹದ
ಧಾನ್ಯವನ್ನು ಕಮಿಟಿಯಲ್ಲಿ ಒಪ್ಪಿಸಿ ಅವರಿಂದ ರಶೀದಿ ಪಡೆದುಕೊಳ್ಳಬೇಕು. ಕಮಿಟಿಯವರು ಪ್ರಸಾದ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು. ಫೆ. 16ರಿಂದ ಫೆ. 24ರವರೆಗೆ ನಡೆಯುವ
ಶ್ರೀ ಅವಧೂತ ಶುಕಮುನಿಸ್ವಾಮಿ ಪಲ್ಲಕ್ಕಿ ಉತ್ಸವದಲ್ಲಿ ಮದ್ಯಪಾನ ಮಾಡಿದವರು ಭಾಗವಸುವಂತಿಲ್ಲ. ಫೆ. 22ರಂದು ಸಂಜೆ 5ಕ್ಕೆ ಮಹಾರಥೋತ್ಸವ ಜರುಗಲಿದೆ.
ಜಾತ್ರೆಯನ್ನು ಶಾಂತಿಯುತವಾಗಿ ಆಚರಿಸಲು ಫೆ. 21, 22ರಂದು ಗ್ರಾಮದಲ್ಲಿ
ಮದ್ಯಪಾನ ನಿಷೇಧ ಮಾಡವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ದೋಟಿಹಾಳ ಮತ್ತು ಕೇಸೂರ ಗ್ರಾಪಂ ಸದಸ್ಯರು, ಕಮಿಟಿ ಸದಸ್ಯರು ಮತ್ತು ಊರಿನ ಭಕ್ತರು ಹಾಗೂ ಗ್ರಾಮದ ಮುಖಂಡರು, ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ಕಳೆದ ವರ್ಷ ಪಲ್ಲಕ್ಕಿ ಉತ್ಸವದಲ್ಲಿ ನಡೆದ ಘಟನೆ ಮತ್ತೂಮ್ಮೆ ಮರುಕಳಿಸಬಾರದು.
ಒಂದು ವೇಳೆ ಇಂತಹ ಘಟನೆ ನಡೆದರೆ. ಘಟನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹನುಮಸಾಗರ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಅವರು ಖಡಕ್ಕಾಗಿ ಎಚ್ಚರಿಗೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.