ಮಹಾಗಣಪತಿ ಪ್ರತಿಷ್ಠಾ ಮಹೋತ್ಸವ 25ರಿಂದ

ನೂತನ ದೇವಾಲಯ ಉದ್ಘಾಟನೆ | ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

Team Udayavani, Jan 23, 2020, 5:10 PM IST

23-January-22

ಶಿರಸಿ: ಐನೂರು ವರ್ಷಗಳ ಇತಿಹಾಸವುಳ್ಳ, ಕರೂರು ಅರಸ ಶಿವಪ್ಪ ನಾಯಕನಿಂದ ಪ್ರತಿಷ್ಠಾಪಿತವಾಗಿದೆ ಎಂಬ ಐತಿಹ್ಯವುಳ್ಳ ತಾಲೂಕಿನ ತುಡಗುಣಿ ಸಿದ್ಧಿವಿನಾಯಕ ದೇವಸ್ಥಾನದ ಪುನರ್‌ ನಿರ್ಮಾಣವಾಗಿದ್ದು, ಮಹಾಗಣಪತಿ ಮೂರ್ತಿ ಪ್ರತಿಷ್ಠಾ ಮಹೋತ್ಸವ ಜ.25 ರಿಂದ 27ರ ತನಕ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಹೆಗಡೆ
ಭತ್ತಗುತ್ತಿಗೆ ಹಾಗೂ ಇತರರು, ಜ.25 ರಿಂದ 27ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೀವಗಿ ರಮಾನಂದ ಸ್ವಾಮೀಜಿ ಹಾಗೂ ಸೋಂದಾ ಸ್ವರ್ಣವಲ್ಲೀ ಶ್ರೀಗಳು
ಸಾನ್ನಿಧ್ಯ ವಹಿಸಲಿದ್ದಾರೆ. ಆಗಮ ಪಂಡಿತ ಷಡಕ್ಷರಿ ಕೃಷ್ಣ ಭಟ್ಟ ಗೋಕರ್ಣ ಅವರ ಪ್ರಧಾನ ಆಚಾರ್ಯತ್ವದಲ್ಲಿ ಪ್ರತಿಷ್ಠಾ ವಿಧಿ ವಿಧಾನಗಳು ನಡೆಯಲಿವೆ ಎಂದು ವಿವರಿಸಿದರು.

ಐದು ಶತಮಾನದಾಚೆಯ ಈ ದೇಗುಲ ಜೀರ್ಣವಾಗಿದ್ದು, ಅದನ್ನು ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ. ಹಿಂದೆ ಕರೂರು ಅರಸ ಶಿವಪ್ಪ ನಾಯಕನು ವೈರಿಗಳಿಂದ ಸೋತು
ಜೀವ ರಕ್ಷಣೆಗಾಗಿ ಇಲ್ಲಿ ಬಂದು ನೆಲೆ ನಿಂತಿದ್ದನು. ಬಳಿಕ ಮಂದಿರ ನಿರ್ಮಾಣ ಮಾಡಿದ್ದಾನೆ ಎಂಬ ಉಲ್ಲೇಖವಿದೆ. 400 ವರ್ಷಗಳಿಂದ ಶಿವಪ್ಪ ನಾಯಕನಿಂದಲೇ ಕಡತೋಕದ ಅರ್ಚಕ ಕುಟುಂಬದವರು ಈ ದೇವಾಲಯದ ದೇವರ ಅರ್ಚನೆಗೆ ಬಂದವರು. ಪೂಜೆ ಪುನಸ್ಕಾರಗಳನ್ನೂ ಅದೇ ಕುಟುಂಬ ನಡೆಸಿಕೊಂಡು ಬಂದಿದ್ದು ಕಾಲಾಂತರದಲ್ಲಿ ಇದು
ಗ್ರಾಮದ ದೇವಸ್ಥಾನವಾಗಿದೆ. 1988ರಲ್ಲಿ ಒಮ್ಮೆ ಜೀರ್ಣೋದ್ಧಾರ ಆಗಿದ್ದರೂ
ಪ್ರಶ° ಮಂಗಲದ ಪ್ರಕಾರ ವೆಂಕಟೇಶ ಭಟ್ಟ ಫಲಕಾಡರ ಮಾರ್ಗದರ್ಶನದಲ್ಲಿ ನೂತನ ದೇವಸ್ಥಾನ ಹಾಗೂ ದೇವರ ಮೂರ್ತಿ ನಿರ್ಮಾಣ ಮಾಡಲಾಗಿದೆ.

ವರ್ಲೆಗದ್ದೆ ವೆಂಕಟ್ರಮಣ ಹೆಗಡೆ ದೇವರ ಮೂರ್ತಿ ಕೆತ್ತನೆ
ಮಾಡಿಕೊಟ್ಟಿದ್ದಾರೆ. ವಾಸ್ತುಶಿಲ್ಪಿ ಮಹೇಶ ಮುನಿಯಂಗಳ ಅವರ
ಮಾರ್ಗದರ್ಶನಲ್ಲಿ ಕೇರಳ ಮಾದರಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿ ಗೋಪು ತಾಮ್ರ ಹೊದಿಕೆ ಮಾಡಲಾಗಿದೆ ಎಂದರು. ಗ್ರಾಮಸ್ಥರು, ಬೇರೆಡೆ
ಉದ್ಯೋಗದಲ್ಲಿರುವವರು ಹಾಗೂ ಈ ಗ್ರಾಮದ ತವರಿನ ಹೆಣ್ಣು ಮಕ್ಕಳು ಉದಾರವಾಗಿ ನೆರವಾಗಿದ್ದಾರೆ. ಈಗಾಗಲೇ 35 ಲಕ್ಷ ರೂ. ವಿನಿಯೋಗಿಸಲಾಗಿದೆ. 25ರಂದು ಬೆಳಗ್ಗೆ
ಸಾಮೂಹಿಕ ಪ್ರಾರ್ಥನೆ ಗಣೇಶ ಯಾಗ, ಬಿಂಬ ಪರಿಗ್ರಹ, ಬಿಂಬಾ ವಾಸಗಳು, ರಾತ್ರಿ ಯಾಗಶಾಲಾ ಪ್ರವೇಶ, ಕುಂಡ ಸಂಸ್ಕಾರಗಳು ನಡೆಯಲಿವೆ.

26ರಂದು ಪ್ರತಿಷ್ಠಾಂಗ ಹೋಮಗಳು, ಬೆಳಗ್ಗೆ 10:48ಕ್ಕೆ ರಮಾನಂದ
ಶ್ರೀಗಳಿಂದ ಪ್ರತಿಷ್ಠಾಪನೆ, ಶಿಖರ ಪ್ರತಿಷ್ಠೆ ಹೋಮಗಳು ನಡೆಯಲಿವೆ. 27ರಂದು ಕಲಾ ಸಾನ್ನಿಧ್ಯ, ಸ್ವರ್ಣವಲ್ಲೀ ಶ್ರೀಗಳಿಂದ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 4ಕ್ಕೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಬಳಿಕ ತಾಳಮದ್ದಲೆ ನಡೆಯಲಿದೆ ಎಂದರು.

ದೇವಸ್ಥಾನದ ಕಾರ್ಯದರ್ಶಿ ಶಿವಾನಂದ ಹೆಗಡೆ ಉಗ್ರೇಸರ, ಎಲ್‌. ಎಂ. ಹೆಗಡೆ, ವಿಶ್ವನಾಥ ಶರ್ಮಾ ನಾಡಗುಳಿ, ಗಣಪತಿ ಭಟ್ಟ, ರಾಮಚಂದ್ರ ಭಟ್ಟ, ಶ್ರೀಧರ ಭಟ್ಟ ದೊಡ್ಮನೆ, ಮಹಾಬಲ ಭಟ್ಟ, ಗಜಾನನ ಹೆಗಡೆ, ಲಕ್ಷೀಕಾಂತ ಭಟ್ಟ, ಮಂಜುನಾಥ ಹೆಗಡೆ, ನಾಗಪತಿ  ಗಡೆ ಬಾವಿಕೈ ಇತರರು ಇದ್ದರು.

ಟಾಪ್ ನ್ಯೂಸ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.