ಕುಂದಿಲ್ಲದ ನೆನಪಿನ ಕವಿ ಮುದ್ದಣ
Team Udayavani, Jan 24, 2020, 5:05 AM IST
ಕನ್ನಡ ನಾಡಿನ ಜನತೆಯಲ್ಲಿ ಕನ್ನಡದ ಆಸಕ್ತಿ ವಿವಿಧ ಮುಖಗಳಲ್ಲಿ ಹರಡಿ ವ್ಯಾಪಿಸುವಂತೆ ಮಾಡಿದ ಮಹನೀಯರು ಹಲವು ಮಂದಿ. ಅವರು ಮಾಡಿದ ವೈವಿಧ್ಯಪೂರ್ಣವಾದ ಕೆಲಸಗಳು ಐತಿಹಾಸಿಕವಾಗಿ ಗುರುತಿಸಲೇ ಬೇಕಾದ “ಭಾಷಾ ಸಾಹಿತ್ಯ ಸೇವೆ’ಯೇ ಹೌದು. ಅವರು ತಮ್ಮ ಕೆಲಸಗಳಿಂದ ಕನ್ನಡ ನಾಡಿನವರಿಗೆ ನೀಡಿದ ಪ್ರೇರಣೆ ದೊಡ್ಡದು. ಅವರು ಆ ಕೆಲಸಗಳನ್ನು ಮಾಡುವಾಗ ತಮ್ಮ ಕೆಲಸಗಳು ಇತರರಿಗೆ ಪ್ರೇರಣಾದಾಯಕವೆಂದು ಭಾವಿಸಿ ಮಾಡಿದುದಲ್ಲವಾದರೂ ಅವು ಆ ರೀತಿಯಾಗಿ ಪರಿಣಮಿಸಿರುವುದು ಗುರುತಿಸಬೇಕಾದ ವಿಷಯ.
ಕವಿ ಮುದ್ದಣ ಈ ರೀತಿಯ ಹಿರಿಮೆಯನ್ನು ಪಡೆದ ಲೇಖಕ. ಅವನು ಹೊಸ ಕಾಲದ (1870-1901) ಲೇಖಕನಾದರೂ ತನ್ನ ಕೃತಿಯ ನಿರೂಪಣ ವೈಶಿಷ್ಟéದಿಂದ ಮತ್ತು ಭಾಷಾ ಪ್ರಯೋಗದ ಪ್ರತ್ಯೇಕತೆಯಿಂದ ಇತರ ಸಮಕಾಲೀನ ಲೇಖಕರಿಗಿಂತ ಬೇರೆಯಾಗಿ ನಿಂತನು. ಹೊಸಕಾಲದಲ್ಲಿದ್ದು ಹಳೆಗನ್ನಡ ಭಾಷೆಯನ್ನು ಉಪಯೋಗಿಸಿ ಬರೆದವನು. ಅವನ ಪ್ರಸಿದ್ಧ ಕೃತಿ “ರಾಮಾಶ್ವಮೇಧ’. ಉಪಯೋಗಿಸಿದ ಭಾಷೆ ಹಳಗನ್ನಡ. ಆ ಕೃತಿಗೆ ಹಾಕಿಕೊಂಡ ಚೌಕಟ್ಟು ಮುದ್ದಣ- ಮನೋರಮೆಯರೆಂಬ, ಕವಿ-ಕವಿ ಪತ್ನಿಯರ ಸಂಭಾಷಣೆ. ಕತೆ-ಭಾಷೆ ಹಳೆಯದಾದರೂ ಕಥಾ ತಂತ್ರ, ನಿರೂಪಣ ತಂತ್ರ ಹೊಸದು. ಹಳಗನ್ನಡ ಭಾಷೆಯನ್ನು ಉಪಯೋಗಿಸಿದರೂ ವಾಕ್ಯ ರಚನಾ ವಿಧಾನ ಹೊಸದು. ಹೊಸ ಕಾಲದ ಭಾಷೆ-ನಿರೂಪಣ ಕ್ರಮವನ್ನು ಹಳೆಗನ್ನಡಕ್ಕೆ ಅಳವಡಿಸಿದ್ದುದರಿಂದ ಒಂದು ವಿಶಿಷ್ಟವಾದ ನೂತನತೆ ಅವನ ಕೃತಿಗೆ ಸಿದ್ಧಿಸಿತು. ಸಾಂಪ್ರದಾಯಿಕವಾದ ಕಾವ್ಯಾರಂಭ ವಿಧಾನವನ್ನು ಬಿಟ್ಟು ಕೊಟ್ಟು ಕಥಾಮುಖದಲ್ಲಿ ಮಳೆಗಾಲದ ವರ್ಣನೆಯನ್ನು ಅಳವಡಿಸಿಕೊಂಡು ಶ್ರೀರಾಮನು ಅಶ್ವಮೇಧ ಯಾಗ ಮಾಡಿದ ಕತೆಯನ್ನು ನಿರೂಪಿಸಿದ್ದಾನೆ. ಕೃತಿಯೊಳಗೆ ಕತೆ ಹೇಳುವವನು “ಮುದ್ದಣ ಎಂಬ ಹೆಸರಿನ ಕವಿ. ಕೇಳುವವಳು ಆತನ ಪತ್ನಿ ಮನೋರಮೆ. ನಿಜವಾಗಿ ಕೃತಿಯನ್ನು ಬರೆದವನು ನಂದಳಿಕೆ ಲಕ್ಷ್ಮೀನಾರಾಯಣಯ್ಯ ಎಂಬ ವ್ಯಕ್ತಿ. ಈ ಲೇಖಕನಿಗೆ “ಮುದ್ದಣ’ ಇನ್ನೊಂದು ಹೆಸರು ನಿಜವಾಗಿ ಇತ್ತೂ ಇಲ್ಲವೋ ತಿಳಿಯದು. ಆದರೆ ಆತ ತನ್ನ ಕೃತಿಯಲ್ಲಿ ಸೃಷ್ಟಿಸಿದ ಕತೆಗಾರನ ಆ ಹೆಸರು ಆತನಿಗೆ ಶಾಶ್ವತವೆಂಬತೆ ಅಂಟಿಕೊಂಡಿತ್ತು. ಕನ್ನಡದ ಹೊಸ ಕಾಲದ ಬರವಣಿಗೆಯನ್ನು ಆತನ ರಚನೆ ಸಂಕೇತಿಸಿದ್ದುದರಿಂದ ” ಹೊಸಗನ್ನಡದ ಮುಂಗೋಳಿ’ ಎಂದು ಆತನಿಗೆ ಹೆಸರು ಬಂತು.
ಕನ್ನಡದಲ್ಲಿ ಹೊಸ ರೀತಿಯ ಬರವಣಿಗೆಯು ಹೊಸ ರೀತಿಯ ಚಿಂತನೆಯು ತೊಡಗಿದ ಕಾಲದಲ್ಲಿ ಮುದ್ದಣನ ರಾಮಶ್ವಾಮೇಧದಲ್ಲಿ ಕವಿ-ಕವಿ ಪತ್ನಿಯರ ಸಂಭಾಷಣೆಯಲ್ಲಿ ಬಂದ ಕೆಲವು ಮಾತುಗಳು ಪುನಃ ಪುನಃ ಉದ್ಧರಿಸಬಹುದಂತಹುದೆಂದು ಕನ್ನಡನಾಡಿನ ಜನ ಭಾವಿಸಿದ್ದರು. ಆ ಕಾಲದ ಲೇಖಕ-ವಿಮರ್ಶಕರು ಆ ಮಾತುಗಳನ್ನು ಅಲ್ಲಲ್ಲಿ ಎತ್ತಿ ಹೇಳಿದರು. ” ಕನ್ನಡಂ ಕಸ್ತೂರಿಯಲೆ¤’ ಎಂಬುದು ಅಂತಹ ಒಂದು ಮಾತು. ” ಪದ್ಯಂವದ್ಯಂ, ಗದ್ಯಂಹೃದ್ಯಂ’ ಎಂಬುದು ಇನ್ನೊಂದು ಮಾತು. ಇಪ್ಪತ್ತನೇ ಶತಮಾನ ಮತ್ತು ಮುಂದಿನ ದಿನಗಳು ಗದ್ಯ ಪ್ರಾಧಾನ್ಯ ಮತ್ತು ಗದ್ಯ ಪ್ರಾತಿನಿಧಿಕತೆಯ ಕಾಲವೆಂಬುದನ್ನು ಈ ಎರಡನೆಯ ಮಾತು ಸಂಕೇತಿಸಿತು. ಈ ಮಾತು ಕನ್ನಡದ ಭವಿಷ್ಯ ಸೂಚನೆಯ ಮಾತಾಗಿ ಪರಿಣಮಿಸಿತು.ಆದ್ದುದರಿಂದ ಕವಿಗಳು ಕ್ರಾಂತದರ್ಶಿಗಳೆಂಬ ಮಾತು ಸತ್ಯವಾಯಿತು. ಕನ್ನಡ ಮತ್ತು ಸಂಸ್ಕೃತದ ಸಂಬಂಧವನ್ನು ಕುರಿತಂತೆ ಅವನು ಹೇಳಿದ “ಕರ್ಮಣಿ ಸ್ವರದಲ್ಲೋ ಚೆಂಬವಲ್ಲಮಂ ಕೋದಂತೆ’ ಎಂಬ ಮಾತು ಕನ್ನಡ ಗದ್ಯ ರಚನೆಯಲ್ಲಿ ಆದರ್ಶವೆಂಬತೆ ಆ ಕಾಲದ ಲೇಖಕರಿಂದ ಗ್ರಹಿಸಲ್ಪಟ್ಟಿತು. ಅಪ್ರಸಿದ್ಧ ಮತ್ತು ಕ್ಲಿಷ್ಟ ಪದ ಪ್ರಯೋಗಗಳಿಂದ ಕೃತಿಯನ್ನು ಗಟ್ಟಿಗೊಳಿಸುವ ಕೆಲವು ಲೇಖಕರ ಪ್ರಯತ್ನಗಳು ” ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ’ ಎಂಬುದನ್ನು ಕವಿಪತ್ನಿ ಮಾತಿನಲ್ಲಿ ಸೂಚಿಸಿರುವುದು ಮುಂದಿನ ಲೇಖಕರಿಗೆ ಮಾರ್ಗವನ್ನು ನೀಡಿದ ಮಾತಾಯಿತು. ಹೀಗೆ ಕವಿ ಮುದ್ದಣ ಹೇಳಿದ ಮಾತುಗಳು ಆತನ ಕೃತಿ ನಿರೂಪಣೆಯ ನವನವೀನ ವಿಧಾನಗಳು ಮುಂದಿನ ಲೇಖಕರಿಗೆ ಮಾರ್ಗದ ಕವಲು ದಾರಿಗಳನ್ನು ನಿರ್ದೇಶಿಸುವ ತೋರುಗೈಗಳಾದವು.
ನಂದಳಿಕೆ ಲಕ್ಷ್ಮೀನಾರಾಯಣಯ್ಯನದು ಸ್ವನಿರ್ಮಿತ ವ್ಯಕ್ತಿತ್ವ ನಂದಳಿಕೆಯಲ್ಲಿ ಹುಟ್ಟಿ ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿಯೂ ಕುಂದಾಪುರದ ಬೋರ್ಡ್ ಹೈಸ್ಕೂಲ್‌ನಲ್ಲಿಯೂ ವ್ಯಾಯಾಮ ಶಿಕ್ಷಕನಾಗಿ ಸ್ವಪ್ರಯತ್ನದಿಂದ ಕನ್ನಡ ಪಂಡಿತನಾಗಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ದುಡಿದನು. ತನ್ನ ಕೃತಿಗಳನ್ನು ಮರೆಯ ಹೆಸರುಗಳಿಂದ ಬೇರೆಡೆಯ ಪ್ರಕಾಶಕರ ಮೂಲಕ ಪ್ರಕಟ ಪಡಿಸಿದನು. ಮೊದಲಿಗೆ “ರತ್ನವತಿ ಕಲ್ಯಾಣ’ ಮತ್ತು “ಕುಮಾರ ವಿಜಯ’ ಎಂಬೆರೆಡು ಯಕ್ಷಗಾನ ಕೃತಿಗಳನ್ನೂ “ಶ್ರೀ ರಾಮಪಟ್ಟಾಭಿಷೇಕ’ ಎಂಬ ವಾರ್ಧಕ ಷಟ್ಪದಿ ಕಾವ್ಯವನ್ನು ಬರೆದನು. “ಅದ್ಭುತ ರಾಮಾಯಣ’ ಎಂಬುದು ಅವನ ಹಳೆಗನ್ನಡ ಗದ್ಯ ಕೃತಿ. ಈ ಕೃತಿಯ ಮೂಲಕ ಅವನ ಮುಖ್ಯ ಕೃತಿ “ಶ್ರೀರಾಮಾಶ್ವಮೇಧ’ದ ರಚನೆಗೆ ಪೂರ್ವಾಭ್ಯಾಸವನ್ನು ಸಾಧಿಸಿಕೊಂಡನು. ಶ್ರೀರಾಮಾಶ್ವಮೇಧವು ಅವನ ಮರಣಾನಂತರವೇ ಪ್ರಕಟಗೊಂಡಿತು. ಮೂವತ್ತೂಂದರ ಚಿಕ್ಕ ವಯಸ್ಸಿನಲ್ಲಿ ಕ್ಷಯರೋಗದಿಂದ ಕವಿ ಕೊನೆಯುಸಿರೆಳೆದನು. ಅವನ ಕೃತಿಗಳು ಕರ್ನಾಟಕದಾಂತ್ಯವಾಗಿ ಪಠ್ಯಪುಸ್ತಕಗಳಾದದ್ದು, ಮುದ್ದಣ-ಮನೋರಮೆಯರ ಸಂವಾದ ಭಾಗಗಳು ಹೊಸಗನ್ನಡದಲ್ಲೂ ಅನುವಾದಗೊಂಡು ಪಠ್ಯ ಪುಸ್ತಕದಲ್ಲಿ ಪ್ರವೇಶ ಪಡೆದದ್ದು ಮುದ್ದಣನಿಗೆ ಅಖೀಲ ಕರ್ನಾಟಕ ಮಟ್ಟದಲ್ಲಿ ಪರಿಚಯವನ್ನೂ, ವಿಶಿಷ್ಟ ಸ್ಥಾನವನ್ನೂ ಒದಗಿಸಿದವು. ಅವನ ಕೃತಿಗಳು ಹೊರಬಂದು ಒಂದು ಕಾಲು ಶತಮಾನವಾದರೂ ಅವನ ಜನಪ್ರಿಯತೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕುಂದು ಬಂದಿಲ್ಲ.
ಡಾ| ಪಾದೇಕಲ್ಲು ವಿಷ್ಣು ಭಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.