ಚಾಲಕರ ಒತ್ತಡ ನಿವಾರಣೆಗೆ ಯೋಗ ತರಬೇತಿ

Team Udayavani, Jan 24, 2020, 11:28 AM IST

br-tdy-1

ನೆಲಮಂಗಲ: ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿ ಚಾಲಕರು ದೈಹಿಕ ಸಮಸ್ಯೆ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿಯೇ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತ ಗಳನ್ನು ತಪ್ಪಿಸಲು ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ ಟಿಒ) ಅಧಿಕಾರಿಗಳು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಚಾಲಕರಿಗೆ ಯೋಗ ತರಬೇತಿ ನೀಡುತ್ತಿದ್ದು, ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ.

ಬೆಂಗಳೂರಿನ ಬಿಎಂಟಿಸಿ ತರಬೇತಿ ಶಾಲೆ ಹಾಗೂ ನೆಲಮಂಗಲ ಪ್ರಾದೇಶಿಕ ಆರ್‌ಟಿಒ ಕಚೇರಿಗೆ ವಾಹನ ಚಾಲನೆ ಪರವಾನಗಿ ಪಡೆಯಲು ಬರುವ ಚಾಲಕರಿಗೆ ಯೋಗಾಭ್ಯಾಸ ಮಾಡಿಸಿ, ಒತ್ತಡ ನಿಯಂತ್ರಿಸಲು ತರಬೇತಿ ನೀಡಲಾಗುತ್ತಿದೆ. ಸರ್ಕಾರ, ಪ್ರತಿ ವರ್ಷ ರಸ್ತೆ ಸುರಕ್ಷತೆಗೆ ಸರ್ಕಾರ ಕೋಟಿಗಟ್ಟಲೇ ಖರ್ಚು ಮಾಡಿ, ಜಾಗೃತಿ ಮೂಡಿಸಿದೆ.

ಒತ್ತಡ ತಗ್ಗಿಸಲು ಯೋಗದ ಶಿಕ್ಷಣ: ಅಪಘಾತಕ್ಕೆ ಒತ್ತಡವೇ ಬಹಳ ಮುಖ್ಯ ಕಾರಣ ಎಂದು ತಿಳಿದ ಆರ್‌ಟಿಒ ಅಧಿಕಾರಿಗಳು ಹಾಗೂ ಬಿಎಂಟಿಸಿ ತರಬೇತುದಾರರು, ಚಾಲಕರಿಗೆ ಯೋಗ ತರಬೇತಿ ಕೊಡಿಸುತ್ತಿದ್ದಾರೆ. ನಂತರ ಚಾಲಕರ ಒತ್ತಡ ನಿವಾರಣೆ ಜತೆ ಅಪಘಾತ ನಿಯಂತ್ರಣ ಮನಗಂಡ ಅಧಿಕಾರಿ ಗಳು ತರಬೇತಿ ಶಾಲೆಗಳಲ್ಲಿ ಹಾಗೂ ಚಾಲನೆ ಪರವಾನಗಿ (ಡಿಎಲ್‌)ಗೆ ಬರುವ ಚಾಲಕರು ಸೇರಿದಂತೆ 5 ಸಾವಿರ ಚಾಲಕರಿಗೆ ಯೋಗದ ಅಭ್ಯಾಸ ಮಾಡಿಸಲಾಗಿದೆ. 10 ಸಾವಿರ ಕಾಲೇಜು ವಿದ್ಯಾರ್ಥಿ ಗಳಿಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒತ್ತಡ ನಿವಾರಿಸುವ ಯೋಗ: ಚಾಲಕರು ಹಾಗೂ ವೃತ್ತಿಪರ ಚಾಲಕರು ಪ್ರತಿನಿತ್ಯ 10 ನಿತ್ಯ ಸೂರ್ಯ ನಮಸ್ಕಾರ, 5 ನಿಮಿಷ ಶವಾಸನ, 5 ನಿಮಿಷ ಪ್ರಾಣಾಯಾಮ, 5 ನಿಮಿಷ ಧ್ಯಾನ ಸೇರಿದಂತೆ ಅರ್ಧ ಗಂಟೆವರೆಗೆ ಯೋಗಾಭ್ಯಾಸ ಮಾಡಿದರೆ, ಮಾನಸಿಕ ಒತ್ತಡದ ಜತೆಗೆ ವಾಹನ ಚಾಲನೆ ಮಾಡಿ ಉಂಟಾಗುವ ದೈಹಿಕ ಒತ್ತಡ ದೂರ ಮಾಡಿಕೊಳ್ಳಬಹುದು. ವಾಹನ ಚಾಲನೆ ಮಾಡುವಾಗ ಕೆಲವು ಬಾರಿ ದೀರ್ಘ‌ ಉಸಿರಾಟ ಮಾಡಿದರೆ ದೇಹ ಮನಸ್ಸು ಏಕಾಗ್ರತೆ ಹೆಚ್ಚುತ್ತದೆ ಎಂದು ಆರ್‌ಟಿಒ ಹಿರಿಯ ಇನ್‌ಸ್ಪೆಕ್ಟರ್‌ ಡಾ.ಡಿ.ಎಸ್‌.ಒಡೆಯರ್‌ ತಿಳಿಸಿದರು.

ಬಿಎಂಟಿಸಿ ಚಾಲಕರಿಗೆ ಮದ್ದು: ಬೆಂಗಳೂರು ನಗರದ ಟ್ರಾಫಿಕ್‌ ಒತ್ತಡ ಹಾಗೂ ವಾಯು ಮಾಲಿನ್ಯದ ನಡುವೆ ನರಕಯಾತನೆ ಅನುಭವಿಸುವ ಬಿಎಂಟಿಸಿ ಚಾಲಕರು ದಿನನಿತ್ಯ ಬಸ್‌ ಚಾಲನೆ ಮಾಡಿ, ಒತ್ತಡದಿಂದ ಅಪಘಾತ ಮಾಡಿಕೊಂಡ ಉದಾರಣೆಗಳಿದೆ. 43 ಡಿಪೋ ವ್ಯಾಪ್ತಿಯಲ್ಲಿ ಅಪಘಾತ ಮಾಡುವ ಚಾಲಕರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಯೋಗದ ಅಭ್ಯಾಸ ಮಾಡುತ್ತಿದ್ದು, ಚಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆ ಅಪಘಾತ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ತಿಳಿಸಿದರು.

ಚಟದಿಂದ ಮುಕ್ತಿ: ವೃತ್ತಿಪರ ಚಾಲಕರು ಶೇ.90ರಷ್ಟು ದೈಹಿಕ ಒತ್ತಡದಿಂದ ಒಂದಲ್ಲಾ ಒಂದು ಚಟ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆ ಚಟಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು, ವೃತ್ತಿಪರ ಚಾಲಕರು ಯೋಗ ಮಾಡಬೇಕು. ದುಶ್ಚಟಗಳಿಂದ ದೂರವಾದರೆ ಅಪಘಾತಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಯೋಗ ಶಿಕ್ಷಕರು.

ಸುರಕ್ಷತಾ ಸಪ್ತಾಹ: ಸರ್ಕಾರ ಈಗಾಗಲೇ 31ನೇ ರಸ್ತೆ ಸುರಕ್ಷತೆ ಸಪ್ತಾಹ ಮಾಡಿದ್ದು, ಕೋಟಿಗಟ್ಟಲೇ ಹಣ ವ್ಯಯಿಸಿದೆ. ಆದರೆ ಸರ್ಕಾರ ಸ್ವಲ್ಪ ಬದಲಾವಣೆ ಮಾಡಿ, ಸಪ್ತಾಹದ ಸಮಯದಲ್ಲಿ ಯೋಗದಿಂದ ಚಾಲಕರಿಗೆ ಹಾಗೂ ಅಪಘಾತ ನಿಯಂತ್ರಣಕ್ಕೆ ಕಾರಣವಾಗುವ ಅಂಶ, ತಿಳಿಸಿದರೆ ವಾರಗಳ ಕಾಲ ನಡೆಯುವ ಸಪ್ತಾಹ ಯಶಸ್ವಿಯಾಗುತ್ತದೆ ಎಂಬುದು ಚಾಲಕರ ಮಾತು.

ಬಹುತೇಕ ಚಾಲಕರು ದೈಹಿಕ ಸಮಸ್ಯೆ ಹಾಗೂ ಒತ್ತಡದಿಂದ ಬಳಲುತ್ತಿರುತ್ತಾರೆ. ಹೀಗಾಗಿ ತರಬೇತಿ ಶಾಲೆಯಲ್ಲಿ ಚಾಲಕರಿಗೆ ಕಡ್ಡಾಯವಾಗಿ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಅದರಿಂದ ಬಹಳಷ್ಟು ಪ್ರಯೋಜನವಾಗಿದ್ದು, ಒತ್ತಡ ನಿವಾರಣೆಗೆ ಉತ್ತಮ ಔಷಧ ಯೋಗ.  –ಶ್ರೀನಿವಾಸ್‌, ಬಿಎಂಟಿಸಿ ತರಬೇತಿ ವಿಭಾಗದ ಇನ್‌ಸ್ಪೆಕ್ಟರ್‌

ಟಾಪ್ ನ್ಯೂಸ್

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.