ನಮ್ಮೂರ ಜಾತ್ರೆಗೆ 74ರ ಸಂಭ್ರಮ
30 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಭಾಗಿಜಂಗೀ ನಿಕಾಲಿ ಕುಸ್ತಿ-ಭಾರ ಎತ್ತುವ ಸ್ಪರ್ಧೆ
Team Udayavani, Jan 24, 2020, 12:00 PM IST
ಚಡಚಣ: ಪಟ್ಟಣದ ಆರಾಧ್ಯದೇವ ಸಂಗಮೇಶ್ವರ ಜಾನುವಾರುಗಳ ಜಾತ್ರೆಯು 74 ವರ್ಷಗಳ ಇತಿಹಾಸ ಹೊಂದಿದ್ದು, “ನಮ್ಮೂರ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದಿದೆ. ಪ್ರಸಕ್ತ ವರ್ಷ ಜ.24ರಿಂದ 31ರ ವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.
1946ರಲ್ಲಿ ವಿಜಯಪುರ ಹಾಗೂ ಸೊಲ್ಲಾಪುರ ಪಟ್ಟಣದಲ್ಲಿ ಜಾತ್ರೆ ನಡೆದಾಗ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಏಕಾಏಕಿ ಪ್ಲೇಗ್ ರೋಗ ಹರಡಿತ್ತು. ಜಾತ್ರೆಗೆ ಬಂದ ಜನರಲ್ಲಿ ಭಯವನ್ನುಂಟು ಮಾಡಿತ್ತು. ಸಾವಿರಾರು ಜಾತ್ರಾರ್ಥಿಗಳು ರೋಗದಿಂದ ನರಳಿ ತಮ್ಮ-ತಮ್ಮ ಗ್ರಾಮಗಳಿಗೆ ತೆರಳಿದರು. ಅದರಲ್ಲಿ ಕೆಲ ಜನರು ಚಡಚಣ ಬಜಾರದಲ್ಲಿ ದನಕರುಗಳೊಂದಿಗೆ ಬೀಡು ಬಿಟ್ಟರು. ಇದನ್ನರಿತ ಗ್ರಾಮದ ಗಣ್ಯರಾದ ದಿ| ಜೀವರಾಜ ರಾವಜಿ ದೋಶಿ, ಗುರುಬಾಳಪ್ಪ ಅವಜಿ, ರಾಮಚಂದ್ರ ಯಂಕಂಚಿ, ಗುರುಬಾಳಪ್ಪ ಜೀರಂಕಲಗಿ ಅವರು ಬೀಡು ಬಿಟ್ಟ ಜನರ ರಕ್ಷಣೆಗೆ ಮುಂದಾದರು.
ಅಂದಿನಿಂದ ಸಂಗಮೇಶ್ವರ ಜಾತ್ರೆಯು ಅವರಾತ್ರಿ ಅಮಾವಾಸ್ಯೆಯಿಂದ ಆರಂಭಗೊಂಡಿತು ಎಂದು ಹೇಳಲಾಗಿದೆ. ಜಾತ್ರೆಯ ರೂವಾರಿ ಜಿವರಾಜ ರಾವಜೀ ದೋಶಿ ಹಾಗೂ ಸಂಗಡಿಗರು 60 ವರ್ಷದವರೆಗೆ ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸುತ್ತಾ ಬಂದಿದ್ದಾರೆ. ಈ ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಜಾನುವಾರು ಖರೀದಿದಾರರು ಆಗಮಿಸುತ್ತಾರೆ. ಇಂದಿನಿಂದ ಜಾತ್ರೆ: ಪ್ರಸಕ್ತ ವರ್ಷ ಸಂಗಮೇಶ್ವರ ಜಾನುವಾರು ಜಾತ್ರೆಯು ಜ.24ರಿಂದ 30ರ ವರೆಗೆ ಜರುಗಲಿದೆ. ಜ.24ರಂದು ಬೆಳಗ್ಗೆ 7ಗಂಟೆಗೆ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿ ಧ್ವಜ ವಿವಿಧ ವಾದ್ಯವೈಭವಗಳೊಂದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಬೆಳಗ್ಗೆ 9ಗಂಟೆಗೆ ರುದ್ರಕಟ್ಟೆಯ ಮೇಲೆ ದೇವರ ನುಡಿಮುತ್ತುಗಳ
ನಂತರ ಗಂಗಾಧರ ಪಾವಲೆಯರಿಂದ ಮಹಾಪ್ರಸಾದ ಜರುಗಲಿದೆ.
ಜ.25ರಂದು ಮಧ್ಯಾಹ್ನ 3ಗಂಟೆಗೆ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿ ಧ್ವಜವು ನಾಗಠಾಣ ಕ್ಷೇತ್ರದ ಶಾಸಕ ಡಾ| ದೇವಾನಂದ ಚವ್ಹಾಣರ ಸಹಕಾರದೊಂದಿಗೆ ವಿವಿಧ ವಾದ್ಯವೈಭವಗಳೊಂದಿಗೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನವಿಲುಕುಣಿತ, ಗೊಂಬೆ ಕುಣಿತ, ಮಹಿಳೆಯರಿಂದ ಡೊಳ್ಳು ಕುಣಿತ ಕಲಾವಿದರ ಕಲೆಯೊಂದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ಬರುವುದು. ರಾತ್ರಿ 9ಗಂಟೆಗೆ ದೇವಸ್ಥಾನದ ಹತ್ತಿರವಿರುವ ಎತ್ತರದ ಸ್ಥಳದಲ್ಲಿ ಮದ್ದು ಸುಡಲಾಗುವುದು.
ಜ.26ರಂದು ಮಧ್ಯಾಹ್ನ 2:30ಗಂಟೆಗೆ ಚಡಚಣ ಪಟ್ಟಣ ಪಂಚಾಯತ ವತಿಯಿಂದ ಪ್ರಸಿದ್ಧ ಜಂಗೀ ನಿಕಾಲಿ ಕುಸ್ತಿಗಳು, ಜ.30ರಂದು ಸಂಜೆ 7ಗಂಟೆಗೆ ಸಂಗಮೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ,ನಂದಿ ಧ್ವಜ, ವಾದ್ಯಗಳೊಂದಿಗೆ ವೀರಭದ್ರೇಶ್ವರ ಗುಡಿಗೆ ತಲುಪುವುದು. ಚಡಚಣ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೆಗೆ ಆಗಮಿಸಿ ಸಂಗಮೇಶ್ವರ ದರ್ಶನ ಪಡೆದು ಪುನೀತರಾಗಬೇಕೆಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಲವೂ ಸಂಗಮೇಶ್ವರನ ಜಾತ್ರೆ ವೈಭವದಿಂದ ಜರುಗಲಿದೆ. ನುಡಿಮುತ್ತುಗಳನ್ನು ಕೇಳಲು ಬರುವ ಭಕ್ತಾದಿಗಳಿಗೆ ಕೂಡ್ರುವ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವ್ಯವಸ್ಥೆಯೂ ಇದೆ. ಜಾನುವಾರು ವ್ಯಾಪಾರಿಗಳು ಜಾತ್ರೆಗೆ ಆಗಮಿಸಿ ಲಾಭ ಪಡೆದುಕೊಳ್ಳಬೇಕು. ದಿನಂಪ್ರತಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ.
ಗಂಗಾಧರ ಪಾವಲೆ,
ಸಂಗಮೇಶ್ವರ ಸಂಸ್ಥೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.