![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 24, 2020, 1:32 PM IST
ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆ ರೋಚಕ ಟ್ವಿಸ್ಟ್ ಪಡೆದಿದ್ದು, ಮೀಸಲಾತಿ ಸಂಬಂಧ ಇಬ್ಬರು ಮೇಯರ್ ಆಕಾಂಕ್ಷಿಗಳ ವಿರುದ್ಧ ದಾಖಲಾಗಿರುವ ದೂರುಗಳು ಪಟ್ಟದ ಆಸೆಯಲ್ಲಿದ್ದ ಆಕಾಂಕ್ಷಿಗಳಿಗೆ ಭ್ರಮ ನಿರಸನ ಮೂಡಿಸಿವೆ.
ಮೇಯರ್ ಆಕಾಂಕ್ಷಿಗಳಾದ ಸುವರ್ಣ ಶಂಕರ್ ಮೀಸಲಾತಿ ಕಳೆದುಕೊಂಡಿದ್ದಾರೆ. ಅನಿತಾ
ರವಿಶಂಕರ್ ಭವಿಷ್ಯ ಡೋಲಾಯಮಾನವಾಗಿದೆ. 35 ವಾರ್ಡ್‌ಗಳ ಪಾಲಿಕೆಯಲ್ಲಿ 20 ಸ್ಥಾನ
ಪಡೆಯುವ ಮೂಲಕ ಬಿಜೆಪಿ ಅಧಿಕಾರಕ್ಕೇರಿತ್ತು. ಮೊದಲ ಅವ ಧಿಯಲ್ಲಿ ಎಸ್‌ಸಿ ಮಹಿಳಾ
ಮೀಸಲಾತಿಯಲ್ಲಿ ಲತಾ ಗಣೇಶ್, ಸಾಮಾನ್ಯ ಮೀಸಲಾತಿಯಲ್ಲಿ ಚನ್ನಬಸಪ್ಪ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು. ಎರಡನೇ ಅವಧಿಗೆ ಬಿಸಿಎಂ “ಬಿ’ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು, ಬಿಜೆಪಿಯ ಇಬ್ಬರು ಆಕಾಂಕ್ಷಿಗಳು ಕಣದಲ್ಲಿದ್ದರು.
9ನೇ ವಾರ್ಡಿನ ಸುವರ್ಣ ಶಂಕರ್, 7ನೇ ವಾರ್ಡಿನಿಂದ ಗೆದ್ದ ಅನಿತಾ ರವಿಶಂಕರ್ ಮೇಯರ್
ಸ್ಥಾನಕ್ಕೆ ತೀವ್ರ ಪೈಪೋಟಿ ಒಡ್ಡಿದ್ದರು. ಮೂರು ಬಾರಿ ಗೆದ್ದ ಸುವರ್ಣ ಶಂಕರ್, ಮೊದಲನೇ ಬಾರಿ ಗೆದ್ದಿರುವ ಅನಿತಾ ರವಿಶಂಕರ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಬದಲಾದ ಸನ್ನಿವೇಶದಲ್ಲಿ ಇಬ್ಬರ ಮೀಸಲಾತಿ ವಿಷಯ ಈಗ ಉಪ ವಿಭಾಗಾಧಿಕಾರಿ ಕಚೇರಿ ಮೆಟ್ಟಿಲೇರಿದೆ.
ಸುವರ್ಣ ಶಂಕರ್ ಕಣದಿಂದ ಔಟ್: ಅನಿತಾ ರವಿಶಂಕರ್ ಅವರು ತೆರಿಗೆದಾರರಾಗಿದ್ದು
ಅವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಹರಲ್ಲ ಎಂದು ಖಾಸಗಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಅದೇ ರೀತಿ ಸುವರ್ಣ ಶಂಕರ್ ಅವರು ಸಾಮಾನ್ಯ ಮೀಸಲಾತಿಯಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದು ಅವರು ಕೂಡ ತೆರಿಗೆದಾರರಾಗಿದ್ದಾರೆ. ಅವರಿಗೆ ಬಿಸಿಎಂ “ಬಿ’ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ದೂರು ದಾಖಲಾಗಿತ್ತು. ಎರಡೂ ದೂರುಗಳ ವಿಚಾರಣೆ ನಡೆಸಿರುವ ಅಧಿ ಕಾರಿಗಳು ಸುವರ್ಣ ಶಂಕರ್ ಅವರ ಈಚೆಗೆ ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ರದ್ದು ಪಡಿಸಿದ್ದಾರೆ.
ಇದರಿಂದ ಅವರ ಮೇಯರ್ ಆಸೆ ಗಗನ ಕುಸುಮವಾದಾಂತಾಗಿದೆ. ಅಧಿಕಾರಿಗಳ ಪ್ರಕಾರ ಸುವರ್ಣ ಶಂಕರ್ ಅವರು ಸಾಮಾನ್ಯ ಮೀಸಲಾತಿಯಲ್ಲಿ ಗೆದ್ದಿರುವ ಕಾರಣ ಅವರು
ಈಗ ಬಿಸಿಎಂ “ಬಿ’ ಪ್ರಮಾಣ ಪತ್ರಕ್ಕೆ ಅರ್ಹರಾಗುವುದಿಲ್ಲ ಎಂದು ಮೂಲಗಳು
ಸ್ಪಷ್ಟಪಡಿಸಿವೆ. ಇನ್ನು ಅನಿತಾ ರವಿಶಂಕರ್ ಅವರು ಬಿಸಿಎಂ “ಬಿ’ ಮೀಸಲಾತಿಯಲ್ಲೇ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಅವರ ವಿರುದ್ಧದ ದೂರು ಮಾನ್ಯವಾಗಿಲ್ಲ. ಈ ಹಂತದಲ್ಲಿ ಅವರ ಮೀಸಲಾತಿ ರದ್ದು ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಜಾತಿ ಪ್ರಮಾಣ ಪತ್ರಕ್ಕೆ ಅರ್ಹತೆಗಳು
ಸಂಬಂಧಿ ಸಿದ ವ್ಯಕ್ತಿ, ಅವರ ಕುಟುಂಬಸ್ಥರು ಯಾರೂ ಆದಾಯ ತೆರಿಗೆ, ಮಾರಾಟ ತೆರಿಗೆ
ಹಾಗೂ ವೃತ್ತಿ ತೆರಿಗೆ ಪಾವತಿದಾರರಾಗಿರಬಾರದು. ಒಟ್ಟು ಕುಟುಂಬದ ಹಿಡುವಳಿ ಮಿತಿ 8 ಹೆಕ್ಟೇರ್ ಗಿಂತ ಜಾಸ್ತಿ ಇರಬಾರದು.
ಬಿಜೆಪಿ ಪಾಳಯದಲ್ಲಿ ಆತಂಕ
ಮೇಯರ್ ಆಕಾಂಕ್ಷಿಗಳ ವಿರುದ್ಧ ದಾಖಲಾಗಿರುವ ದೂರು ಮಾನ್ಯಗೊಂಡರೆ ಇಬ್ಬರೂ ಸಹ
ಕಣದಿಂದ ಹಿಂದುಳಿಯಬೇಕಾಗುತ್ತದೆ. ಆಗ ಮೇಯರ್ ಸ್ಥಾನ ಅನಾಯಾಸವಾಗಿ ಕಾಂಗ್ರೆಸ್ ಪಾಲಾಗಾಲಿದೆ. ಈಗಾಗಲೇ ಸುವರ್ಣ ಶಂಕರ್ ಜಾತಿ ಪ್ರಮಾಣ ಪತ್ರ ರದ್ದಾಗಿದ್ದು, ಅನಿತಾ
ರವಿಶಂಕರ್ ಮೀಸಲಾತಿಯನ್ನು ಚುನಾವಣಾ ಆಯೋಗದಲ್ಲಷ್ಟೇ ಪ್ರಶ್ನಿಸಲು ಸಾಧ್ಯವಿದೆ. ಒಂದು ವೇಳೆ ಚುನಾವಣಾ ಆಯೋಗ ದೂರು ಸ್ವೀಕಾರ ಮಾಡಿದರೆ ತೀರ್ಪು ಬರುವವರೆಗೂ ಚುನಾವಣೆ ಮುಂದೂಡಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ.
ಶರತ್ ಭದ್ರಾವತಿ
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
You seem to have an Ad Blocker on.
To continue reading, please turn it off or whitelist Udayavani.