ಅವಮಾನ, ಟೀಕೆಗೆ ಸ್ಮಿತ್ ಬ್ಯಾಟಿಂಗ್ ಉತ್ತರ
Team Udayavani, Jan 25, 2020, 6:00 AM IST
ಚೆಂಡು ವಿರೂಪದಂತಹ ಪ್ರಕರಣದ ಬಳಿಕ ಅಪಮಾನ, ಅ ಪನಿಂದನೆಗಳಿಗೆ ಒಳಗಾಗಿದ್ದ ಸ್ಟೀವ್ ಸ್ಮಿತ್ ಎಲ್ಲವನ್ನೂ ಮರೆತು ಈಗ ಸಹಜ ಸ್ಥಿತಿಗೆ ಮರಳಿದ್ದಾರೆ, ಭಾರತದ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರಿಂದ ಸೋತಿರಬಹುದು, ಆದರೆ ಬ್ಯಾಟಿಂಗ್‌ನಲ್ಲಿ ಸ್ಟೀವ್ ಸ್ಮಿತ್ ಮೆರೆದಿರುವ ಪರಾಕ್ರಮ ನಿಜಕ್ಕೂ ಶ್ಲಾಘನೀಯ.
ಎರಡನೇ ಏಕದಿನ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 98 ರನ್ ಸಿಡಿಸಿದ್ದರು. 102 ಎಸೆತದಲ್ಲಿ 9 ಬೌಂಡರಿ, 1 ಸಿಕ್ಸರ್ ಚಚ್ಚಿ ಗಮನ ಸೆಳೆದಿದ್ದರು. ಕೇವಲ 2 ರನ್‌ನಿಂದ ಶತಕ ವಂಚಿತರಾಗಿದ್ದರು. ಮೂರನೇ ಪಂದ್ಯದಲ್ಲೂ ಸ್ಟೀವ್ ಸ್ಮಿತ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು. 132 ಎಸೆತ ಎದುರಿಸಿದ್ದ ಸ್ಮಿತ್ 14 ಬೌಂಡರಿ, 1 ಸಿಕ್ಸರ್‌ನಿಂದ 131 ರನ್ ಬಾರಿಸಿ ಆಸೀಸ್ ಮೊತ್ತವನ್ನು 280 ರನ್ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಏಕದಿನ ಕ್ರಿಕೆಟ್‌ನಲ್ಲಿ ಸ್ಮಿತ್ ಒಟ್ಟಾರೆ 121 ಪಂದ್ಯವನ್ನಾಡಿದ್ದಾರೆ. ಒಟ್ಟು 4039 ರನ್‌ಗಳಿಸಿದ್ದಾರೆ. 9 ಶತಕ, 24 ಅರ್ಧಶತಕ ಒಳಗೊಂಡಿದೆ. 164 ರನ್ ವೈಯಕ್ತಿಕ ಶ್ರೇಷ್ಠ ರನ್ ಆಗಿದೆ. 73 ಟೆಸ್ಟ್ ಪಂದ್ಯ ಆಡಿದ್ದು ಒಟ್ಟು 7227 ರನ್ ಬಾರಿಸಿದ್ದಾರೆ. 26 ಶತಕ, 29 ಅರ್ಧಶತಕ ಒಳಗೊಂಡಿದೆ. 36 ಟಿ20 ಪಂದ್ಯದಲ್ಲೂ ದೇಶ ಪ್ರತಿನಿಧಿಸಿದ್ದಾರೆ. ಒಟ್ಟು 577 ರನ್‌ಗಳಿಸಿದ್ದಾರೆ. 4 ಅರ್ಧಶತಕ ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.