ಹಳೇ ಬ್ಯಾಟು ಹಳೇ ಚೆಂಡು
Team Udayavani, Jan 25, 2020, 6:02 AM IST
ತನಗಿಂತ ಕಪಿಲ್ ಶ್ರೇಷ್ಠ
ಕಪಿಲ್‌ದೇವ್, ಇಮ್ರಾನ್ ಖಾನ್, ರಿಚರ್ಡ್ ಹ್ಯಾಡ್ಲಿ, ಇಯಾನ್ ಬಾಥಮ್, ವಿವಿಯನ್ ರಿಚರ್ಡ್ಸ್ ಇವರೆಲ್ಲ 80ರ ದಶಕದಲ್ಲಿ ವಿಪರೀತ ಹೆಸರು ಮಾಡಿದ್ದ ಆಟಗಾರರು. ಅಷ್ಟೇ ಅಲ್ಲ, ಮುಂದಿನ ಹತ್ತು ವರ್ಷದ ಅವಧಿವರೆಗೂ ತುಂಬಾ ಬಲಿಷ್ಠ ಆಟಗಾರರು ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದು ಈ ಎಲ್ಲ ಕ್ರಿಕೆಟಿಗರ ಫಿಟೆ°ಸ್‌ಗೆ ಸಾಕ್ಷಿ. ಈ ಪೈಕಿ ಕಪಿಲ್‌ದೇವ್, ಇಮ್ರಾನ್ ಖಾನ್ ಮತ್ತು ವಿವಿಯನ್ ರಿಚರ್ಡ್ಸ್ ತಂಡಗಳ ನಾಯಕರಾಗಿದ್ದವರು. ರಿಚರ್ಡ್ಸ್ ಅವರನ್ನಂತೂ ಕ್ರಿಕೆಟ್ ಜಗತ್ತು “ಸರ್’ ಎಂದು ಪ್ರೀತಿ ಗೌರವದಿಂದ ಕರೆದು ತನ್ನ ಅಭಿಮಾನವನ್ನು ತೋರಿತು. ಈ ಎಲ್ಲ ಆಟಗಾರರೂ ಸಮಕಾಲೀನರು. ಕ್ರಿಕೆಟ್ ಅಂಗಳದ ದಿಗ್ಗಜರು. ಆದರೆ ಇವರ ಪೈಕಿಯೇ ಶ್ರೇಷ್ಠ ಆಟಗಾರರು ಯಾರು?
ಇಂಥಹದೊಂದು ಪ್ರಶ್ನೆ, ಅವತ್ತಿನ ಕ್ರೀಡಾ ಪ್ರೇಮಿಗಳನ್ನು ಕಾಡಿತ್ತು. ಕ್ರೀಡಾ ವರದಿಗಾರನೊಬ್ಬ ರಿಚರ್ಡ್ಸ್ ಅವರಿಗೆ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟ. ಆಗ ಎರಡನೇ ಯೋಚನೆಯನ್ನು ಮಾಡದೆ ರಿಚರ್ಡ್ಸ್ ಹೇಳಿದ್ದು: “ಅನುಮಾನವೇ ಬೇಡ. ಕಪಿಲ್‌ದೇವ್ ನಮ್ಮ ಕಾಲದ ಶ್ರೇಷ್ಠ ಆಟಗಾರ. ಆತ 131 ಟೆಸ್ಟ್‌ಗಳನ್ನು ನಿರಂತರವಾಗಿ ಆಡಿದ. ಅಷ್ಟೇ ಅಲ್ಲ, ಆರಂಭಿಕ ಬೌಲರ್ ಆಗಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಭಾರತ ಕ್ರಿಕೆಟ್ ತಂಡದ ಘನತೆಗೆ ಕಾರಣನಾದ. ಅಂಥದೊಂದು ಸಾಧನೆ ಮಾಡಲು ನಮಗ್ಯಾರಿಗೂ ಸಾಧ್ಯವಾಗಲಿಲ್ಲ. ಹಾಗಾಗಿ ಎಲ್ಲ ರೀತಿಯಿಂದಲೂ ನನಗಿಂತ ಅವನೇ ಶ್ರೇಷ್ಠ ಆಟಗಾರ. ಇನ್ನೊಂದು ಸಂಗತಿಯೆಂದರೆ ಕಪಿಲ್‌ದೇವ್, ನನಗೆ ಆಪ್ತಮಿತ್ರ. ಗೆಳೆಯನ ಎದುರು ಸೋಲುವುದು ನನಗಂತೂ ಹೆಮ್ಮೆ…’
ಹತ್ತರ ಪೈಕಿ ಮೂರು ಅತ್ಯುತ್ತಮ!
ಒಂದು ಓವರಿನ ಆರು ಚೆಂಡುಗಳಲ್ಲಿ ಆರು ಸಿಕ್ಸರ್ ಹೊಡೆದವರು ಯಾರು?, ಈ ಪ್ರಶ್ನೆಗೆ ಹೆಚ್ಚಿನವರು ಹೇಳಬಹುದಾದ ಉತ್ತರ ಯುವರಾಜ್ ಸಿಂಗ್. ಯುವಿ, ಈ ಸಾಧನೆಯನ್ನೂ ಟಿ20 ಕ್ರಿಕೆಟ್‌ನಲ್ಲಿ ಮಾಡಿದ್ದಾರೆ. ಅಂಥದ್ದೇ ಸಾಧನೆಯನ್ನು ಒನ್‌ಡೇ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮಾಡಿದ್ದಾರೆ. ಆದರೆ ಅವರ ದಾಖಲೆ ಬಂದದ್ದು ದುರ್ಬಲ ಐರೆಲಂಡ್ ತಂಡದ ವಿರುದ್ಧ. ಹಾಗಾಗಿ, ಅದಕ್ಕೆ ಹೆಚ್ಚಿನ ಮಹತ್ವ ಸಿಗಲಿಲ್ಲ. ಅಂದ ಹಾಗೆ, ಒಂದು ಓವರಿನ ಎಲ್ಲ ಚೆಂಡುಗಳಲ್ಲೂ ಸಿಕ್ಸರ್ ಬಾರಿಸಿದ ದಾಖಲೆಯನ್ನು ಮೊದಲ ಬಾರಿಗೆ ಮಾಡಿದವರು, ವೆಸ್ಟ್ ಇಂಡೀಸ್‌ಸ ಸರ್ ಗ್ಯಾರಿ ಸೋಬರ್.
ಇಂಗ್ಲೆಂಡಿನ ಕೌಂಟಿ ಪಂದ್ಯದಲ್ಲಿ ಆಡುವ ಸಂದರ್ಭದಲ್ಲಿ ಈ ಮಾಲ್ಕಂ ನ್ಯಾಶ್ ಬೌಲಿಂಗ್‌ನಲ್ಲಿ ದಾಖಲೆ ಮಾಡಿದ್ದರು. ಆನಂತರದಲ್ಲಿ ರವಿಶಾಸ್ತ್ರಿ , ರಣಜಿ ಕ್ರಿಕೆಟ್‌ನ ಬರೋಡಾ ವಿರುದ್ಧದ ಪಂದ್ಯದಲ್ಲಿ ತಿಲಕ್‌ರಾಜ್ ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದರು. ಇದಾಗಿ 22 ವರ್ಷದ ನಂತರ, ಅಂದರೆ 2007ರಲ್ಲಿ ಗಿಬ್ಸ್ ಮತ್ತು ಯುವರಾಜ್ ಸಿಂಗ್, ಈ ಸಾಧನೆ ಮಾಡಿದರು. ಈಗ ಎಲ್ಲ ಬಗೆಯ ಕ್ರಿಕೆಟ್ ಅನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ, ಒಂದು ಓವರಿನ ಆರು ಎಸೆತಗಳಲ್ಲಿ ಆರನ್ನೂ ಸಿಕ್ಸರ್‌ಗೆ ಅಟ್ಟಿದವರ ಸಂಖ್ಯೆ 10ಕ್ಕೆ ತಲುಪಿದೆ. ಆ ಪೈಕಿ ಯುವರಾಜ್ ಸಿಂಗ್, ಸೋಬರ್ ಮತ್ತು ರವಿಶಾಸ್ತ್ರಿ ಹೊಡೆದ ಸಿಕ್ಸರ್‌ಗಳು ಇವತ್ತಿಗೂ ಅತ್ಯುತ್ತಮ ಹೊಡೆತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.