ರಾಜ್ಯಮಟ್ಟದ ಗಾಳಿಪಟ ಉತ್ಸವ ನಾಳೆ
Team Udayavani, Jan 25, 2020, 3:00 AM IST
ಚಾಮರಾಜನಗರ: ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ಜ.26ರಂದು ನಗರದಲ್ಲಿ 31ನೇ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಆಯೋಜನೆಗೊಂಡಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಗಾಳಿಪಟ ಉತ್ಸವಕ್ಕೆ ನಾಂದಿ ಹಾಡಿದವರು ಖ್ಯಾತ ಜನಪದ ಲೇಖಕ ನಾಡೋಜ ಎಚ್.ಎಲ್.ನಾಗೇಗೌಡರು. ಗಾಳಿಪಟ ಸಂಸ್ಕೃತಿ ಮರೆಯಾಗುತ್ತಿದ್ದ ಸಂದರ್ಭದಲ್ಲಿ, ಅದನ್ನು ಮುನ್ನಲೆಗೆ ತರುವ ಉದ್ದೇಶದಿಂದ ನಾಗೇಗೌಡರು 1987-88ರ ಅವಧಿಯಲ್ಲಿ ಗಾಳಿಪಟ ಉತ್ಸವ ಆರಂಭಿಸಿದರು. ಜತೆಗೆ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಯಿತು. 10-12 ಅಡಿ ಎತ್ತರದ, ಎಂಟು-ಹತ್ತು ಜನ ಎತ್ತಿ ಹಿಡಿಯುವ ಗಾಳಿಪಟಗಳು, ಈ ಉತ್ಸವದಲ್ಲಿ ಪಾಲ್ಗೊಂಡವು. ಈ ಮೊದಲ ಯಶಸ್ಸಿನ ನಂತರ ಗಾಳಿಪಟ ಉತ್ಸವ ಮತ್ತಷ್ಟು ವಿಸ್ತಾರವಾಯಿತು.
ನಡೆದು ಬಂದ ಹಾದಿ: ಇದುವರೆಗೆ ಗಾಳಿಪಟ ಉತ್ಸವ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಆಯೋಜನೆಗೊಂಡಿದ್ದು, ಉತ್ತಮ ಜನಮನ್ನಣೆ ಗಳಿಸಿದೆ. ಪ್ರತಿ ವರ್ಷ ನಾನಾ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡಿದ್ದಾರೆ.
ಕರ್ನಾಟಕದ ನಂಟು: ಗಾಳಿಪಟ ಹಾರಿಸುವಿಕೆ ಕನ್ನಡಿಗರ ಸಂಪ್ರದಾಯಗಳಲ್ಲಿ ಒಂದು. ಇಂದಿಗೂ ಮಕರ ಸಂಕ್ರಮಣದ ದಿನ ಹಬ್ಬದ ಭಾಗವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಗಾಳಿಪಟ ತಯಾರಿಸಿ ಹಾರಿಸಲಾಗುತ್ತದೆ. ಅಲ್ಲದೇ ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸುವುದು ಸರ್ವೇ ಸಾಮಾನ್ಯವಾಗಿದೆ.
4 ವಿಭಾಗಗಳಲ್ಲಿ ಸ್ಪರ್ಧೆಗಳು: ಈ ಬಾರಿಯ ಗಾಳಿಪಟ ಉತ್ಸವದಲ್ಲಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 12 ವರ್ಷದೊಳಗಿನ ಕಿರಿಯರಿಗೆ, 13ರಿಂದ 21 ವರ್ಷದ ಕಿಶೋರರಿಗೆ, 21 ವರ್ಷ ಮೇಲ್ಪಟ್ಟವರಿಗೆ ಹಾಗೂ 22 ವರ್ಷ ಮೇಲ್ಪಟ್ಟ ಹಿರಿಯರಿಗೆ (ಐದು ಜನರ ಗುಂಪು) ವಿಭಾಗದಲ್ಲಿ ಸ್ಪರ್ಧೆಗಳಿವೆ. ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ, ನಗದು ಬಹುಮಾನ ಹಾಗೂ ಎರಡೆರಡು ಸಮಾಧಾನಕರ ಬಹುಮಾನಗಳು ಇರುತ್ತದೆ. ಗುಂಡುಚಕ್ರ, ಬೋರಂಟಿ, ಬೃಂದಾವನ, ಸರಮಾಲೆ, ಬಾಕ್ಸ್ ಮಾದರಿ, ಗಂಡಭೇರುಂಡ ಆಕೃತಿ ಹಾಗೂ ಮಾದರಿಯ ವೈವಿಧ್ಯಮಯ ಪಟಗಳನ್ನು ಹಾರಿಸುವ ನಿರೀಕ್ಷೆ ಇದೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಗಾಳಿಪಟ ಉತ್ಸವ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮರಡಿಗುಡ್ಡದಲ್ಲಿ ಪ್ರತಿ ವರ್ಷ ಪಟದ ಹಬ್ಬ ಸಂದರ್ಭದಲ್ಲಿ ಗಾಳಿಪಟವನ್ನು ಸಾರ್ವಜನಿಕರು ಸಾಮೂಹಿಕವಾಗಿ ಹಾರಿಬಿಡುತ್ತಾರೆ. ಆದರೆ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಮೊದಲ ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಂಡಿದೆ. ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗಾಳಿಪಟ ಸ್ಪರ್ಧೆಗಳು ನಡೆಯಲಿದೆ. ಜಿಲ್ಲಾಡಳಿತ ವತಿಯಿಂದ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಸತಿ, ಉಟೋಪಚಾರ, ಕುಡಿಯುವ ನೀರು ಹಾಗೂ ಇತರೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಗಾಳಿಪಟ ಕಲೆ ಉಳಿಸುವುದು ಅವಶ್ಯ: ಗಾಳಿಪಟ ಮಾನವನ ಹಾರುವಿಕೆ ಪರಿಕಲ್ಪನೆಗೆ ಮೂಲ ಎಂದರೆ ತಪ್ಪಲ್ಲ. ಗಾಳಿಪಟ ಕಟ್ಟುವಿಕೆ ಒಂದು ಕಲೆಯೂ ಆಗಿರುವುದರಿಂದ, ಇದನ್ನು ಉಳಿಸುವುದು ಅವಶ್ಯವಾಗಿದೆ. ಈ ಅಮೂಲ್ಯ ಸಂಸ್ಕೃತಿಯನ್ನು ಭವಿಷ್ಯಕ್ಕೆ ಉಳಿಸಿಕೊಡುವ ನಿಟ್ಟಿನಲ್ಲಿ ಗಾಳಿಪಟ ಉತ್ಸವ ದಾರಿದೀಪವಾಗಿದೆ ಎಂದು ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜು ಹೇಳುತ್ತಾರೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಗಾಳಿಪಟ ಉತ್ಸವ ವಿಶೇಷ ಆಕರ್ಷಣೆಯಾಗಲಿದೆ. ರಾಜ್ಯದ ನಾನಾ ಮೂಲೆಗಳಿಂದ ಹೆಚ್ಚಿನ ಸ್ಪರ್ಧಿಗಳನ್ನು ಈ ಬಾರಿಯ ಗಾಳಿಪಟ ಉತ್ಸವ ಸ್ಪರ್ಧೆಗೂ ನಿರೀಕ್ಷಿಸಲಾಗಿದೆ. ಜಿಲ್ಲೆಯ ಜನತೆ ಈ ಅಪರೂಪದ ರಂಗು-ರಂಗಿನ ಪಟ ಉತ್ಸವಕ್ಕೆ ಉತ್ಸಾಹದಿಂದ ಪಾಲ್ಗೊಂಡು ಉತ್ತೇಜನ ನೀಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.