ನೇರ ತೆರಿಗೆ ಸಂಗ್ರಹದಲ್ಲಿ 2 ದಶಕಗಳ ಕುಸಿತ ; ಗುರಿಗಿಂತ ಅರ್ಧದಷ್ಟು ಮಾತ್ರ ಸಂಗ್ರಹ
Team Udayavani, Jan 25, 2020, 12:02 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ನವದೆಹಲಿ: ದೇಶದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ 2 ದಶಕಗಳ ಕುಸಿತ ಕಂಡು ಬರುತ್ತಿದೆ. ತಾನು ನಿಗದಿಪಡಿಸಿದಕ್ಕಿಂತ ಇದೇ ಮೊದಲ ಬಾರಿ ನೇರ ತೆರಿಗೆ ಸಂಗ್ರಹದಲ್ಲಿ ಇಷ್ಟೊಂದು ಕುಸಿತ ಕಂಡು ಬಂದಿದೆ ಎಂದು ವರದಿಯೊಂದು ಹೇಳಿದೆ.
2 ದಶಕಗಳ ಕುಸಿತ
ಆರ್ಥಿಕ ಬೆಳವಣಿಗೆಯ ತೀವ್ರ ಕುಸಿತ ಹಾಗೂ ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಕಡಿತದ ನಡುವೆ ಕಾರ್ಪೊರೇಟ್ ಮತ್ತು ಆದಾಯ ತೆರಿಗೆ ಸಂಗ್ರಹ ಇದೇ ಮೊದಲ ಬಾರಿಗೆ ಕನಿಷ್ಠ ಎರಡು ದಶಕಗಳ ಕುಸಿತ ಕಂಡಿದೆ.
13.5 ಲಕ್ಷ ರೂ. ಗುರಿ
2019-20ರ ಆರ್ಥಿಕ ವರ್ಷದ ಅಂತ್ಯ ಮಾರ್ಚ್ 31ರ ವೇಳೆಗೆ 13.5 ಲಕ್ಷ ಕೋಟಿ (189 ಮಿಲಿಯನ್ ಡಾಲರ್) ರೂ. ನೇರ ತೆರಿಗೆ ಸಂಗ್ರಹ ಗುರಿ ಹೊಂದಿತ್ತು. ಇದು ಕಳೆದ ಆರ್ಥಿಕ ವರ್ಷಕ್ಕಿಂತ ಶೇ.17ರಷ್ಟು ಹೆಚ್ಚು.
ಕಾರಣ ಏನು?
ಮಾರುಕಟ್ಟೆಯಕಲ್ಲಿ ಬೇಡಿಕೆ ಕುಸಿತದಿಂದಾಗಿ ಉದ್ಯಮ ಚಟುವಟಿಕೆ ಕುಂಠಿತಗೊಂಡಿದೆ. ಕಂಪನಿಗಳು ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಕಡಿತಗೊಳಿಸಿದ್ದು ತೆರಿಗೆ ಸಂಗ್ರಹದ ಮೇಲೆ ಭಾರೀ ಪೆಟ್ಟು ನೀಡಿದೆ ಎಂದು ಹೇಳಲಾಗುತ್ತಿದೆ.
ಎಷ್ಟು ಸಂಗ್ರಹವಾಯಿತು?
ತೆರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜನವರಿ 23ರ ವರೆಗೆ ಕೇವಲ 7.3 ಲಕ್ಷ ಕೋಟಿ ತೆರಿಗೆಯನ್ನು ಸಂಗ್ರಹಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹಿಸಲಾದ ತೆರಿಗೆ ಪ್ರಮಾಣಕ್ಕಿಂತ ಶೇ. 5.5ರಷ್ಟು ಕಡಿಮೆ.
ಕಳೆದ ವರ್ಷದ ಟಾರ್ಗೆಟ್ ತಲುಪುವುದು ಡೌಟ್
ಲೆಕ್ಕಾಚಾರದ ಪ್ರಕಾರ, ಮೊದಲ ಮೂರು ತ್ತೈಮಾಸಿಕಗಳಲ್ಲಿ ಸಾಮಾನ್ಯವಾಗಿ ಶೇ.30-35ರಷ್ಟು ನೇರ ತೆರಿಗೆ ಸಂಗ್ರಹವಾಗುತ್ತದೆ. ಈ ಬಾರಿ ಗರಿಷ್ಠ ಪ್ರಯತ್ನಗಳ ಹೊರತಾಗಿಯೂ ನೇರ ತೆರಿಗೆ ಸಂಗ್ರಹ 11.5 ಲಕ್ಷ ಕೋಟಿ ರೂ. ಮೀರುವುದು ಸಂಶಯ ಎನ್ನಲಾಗಿದೆ. ಅಂದರೆ 2018-19ನೇ ಸಾಲಿನಲ್ಲಿ ಸಂಗ್ರಹವಾಗಿದ್ದ ನೇರ ತೆರಿಗೆಗಿಂತ ಇದು ಕಡಿಮೆ.
ಹಳೆ ತಪ್ಪಿದ್ದು ಇದೇ ಮೊದಲು
ಗುರಿ ಬಿಟ್ಟು ನೇರ ತೆರಿಗೆ ಸಂಗ್ರಹದಲ್ಲಿ ಇಷ್ಟೊಂದು ಕುಸಿತವಾಗಿರುವುದು ಇದೇ ಮೊದಲ ಬಾರಿ. ಈ ವರ್ಷ ಕನಿಷ್ಠವಾದರೂ ಈ ಹಿಂದಿನ ತೆರಿಗೆಯಾದ 11.5 ಲಕ್ಷ ಕೋಟಿ ರೂ. ಸಂಗ್ರಹಿಸಲು ಪ್ರಯತ್ನಗಳು ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.