ಗ್ರಾಮಾಭಿವೃದ್ಧಿ ಸಮಾಜದ ಏಕೀಕರಣ ಶಕ್ತಿ
ಧರ್ಮಸ್ಥಳದ ಧರ್ಮಶ್ರೀ ನೂತನ ವಿಸ್ತೃತ ಕಟ್ಟಡ ಉದ್ಘಾಟನೆಯಲ್ಲಿ ಸದಾನಂದ ಗೌಡ
Team Udayavani, Jan 25, 2020, 12:48 AM IST
ಬೆಳ್ತಂಗಡಿ: ಸಮಾಜದ ಪ್ರತಿಯೊಬ್ಬ ಪ್ರಜೆಯನ್ನು ಜವಾಬ್ದಾರಿಯುತ ನಾಗರಿಕನ ನ್ನಾಗಿಸುವಲ್ಲಿ ಸರಕಾರಕ್ಕಿಂತಲೂ ಉನ್ನತ ಕೆಲಸ ಮಾಡುತ್ತಿರುವ ಡಾ| ಹೆಗ್ಗಡೆಯವರ ಚಿಂತನೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಶ್ವವ್ಯಾಪಿಯಾಗಿದೆ ಎಂದು ಕೇಂದ್ರ ರಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಧರ್ಮಸ್ಥಳದಲ್ಲಿ ಯೋಜನೆಯ ಆಡಳಿತ ಕಚೇರಿ “ಧರ್ಮಶ್ರೀ’ಯ ನೂತನ ವಿಸ್ತೃತ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎ. 26: ಸಾಮೂಹಿಕ ವಿವಾಹ
ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಾಂಕೇತಿಕವಾಗಿ ಶ್ರದ್ಧಾಕೇಂದ್ರಗಳಿಗೆ ತ್ಯಾಜ್ಯ ಸಂಗ್ರಹಣ ಬುಟ್ಟಿ ವಿತರಿಸಿ ಮಾತನಾಡಿ, ಸರಕಾರದ ಜನಮಂಗಳ ಕಾರ್ಯಗಳಿಗೆ ಹೆಗ್ಗಡೆಯವರೇ ಪ್ರೇರಕ ಶಕ್ತಿಯಾಗಿದ್ದಾರೆ. ಧರ್ಮಸ್ಥಳದ ಮಾದರಿಯಲ್ಲೆ ಎ. 26ರಂದು ರಾಜ್ಯದ 110 ದೇವಸ್ಥಾನಗಳಲ್ಲಿ ಸರಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲಾಗುವುದು. ಹೆಗ್ಗಡೆ ದಂಪತಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸಬೇಕು ಎಂದು ಸಚಿವರು ಅವರನ್ನು ಆಮಂತ್ರಿಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ರಾಜ್ಯದೆಲ್ಲೆಡೆ 1,500 ಮಂದಿ ಸೇವಾ ಪ್ರತಿನಿಧಿಗಳು ಸೇವೆ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಫಲಾನು ಭವಿಗಳೆಲ್ಲ ಪ್ರಗತಿಯ ಹರಿಕಾರರಾಗಿ ಯೋಜನೆಯ ಯಶಸ್ಸಿನ ಪಾಲುದಾರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನಮಂಗಳ ಕಾರ್ಯಕ್ರಮದಡಿ ವಿಶೇಷ ಚೇತನರಿಗೆ ಶಾಸಕ ಹರೀಶ್ ಪೂಂಜ ಸಲಕರಣೆಗಳನ್ನು ವಿತರಿಸಿದರು. ಕಟ್ಟಡ ನಿರ್ಮಾಣದ ರೂವಾರಿ ಡಿ. ಹಷೇìಂದ್ರ ಕುಮಾರ್, ವಾಸ್ತು ಶಿಲ್ಪಿ ಬ್ರಹೆ ಮತ್ತು ಗೋಪಾಲ ಮೆನನ್ ಅವರನ್ನು ಗೌರವಿಸಲಾಯಿತು.
ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಶಿರ್ತಾಡಿ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು. ಡಾ| ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ಯೋಜನಾಧಿಕಾರಿ ಜಯಕರ ಶೆಟ್ಟಿ ವಂದಿಸಿದರು. ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮತ್ತು ಮಮತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ರಾಷ್ಟ್ರೀಯ ರಕ್ಷಣಾ ನಿಧಿಗೆ 25 ಲಕ್ಷ ರೂ. ದೇಣಿಗೆ.
10 ಸಾವಿರ ಶ್ರದ್ಧಾಕೇಂದ್ರಗಳಿಗೆ 20 ಸಾವಿರ ತ್ಯಾಜ್ಯ ಸಂಗ್ರಹಣಾ ಬುಟ್ಟಿ ವಿತರಣೆ.
ಜನಮಂಗಳ ಕಾರ್ಯಕ್ರಮದಡಿ 1,415 ಮಂದಿ ವಿಶೇಷ ಚೇತನರಿಗೆ ಸಲಕರಣೆ ವಿತರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.