9/11 ದಾಳಿ ಹಿಂದೆ ಸೌದಿ ಅರೇಬಿಯಾ?


Team Udayavani, Jan 25, 2020, 8:19 AM IST

9-11-Attack-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

‘ದ ನ್ಯೂಯಾರ್ಕ್‌ ಟೈಮ್ಸ್‌’ ನಿಯತಕಾಲಿಕೆ, ‘ಪ್ರೊ ಪಬ್ಲಿಕಾ’ ತನಿಖೆಯಲ್ಲಿ ಪ್ರಸ್ತಾವ
ವಾಷಿಂಗ್ಟನ್‌: ಹದಿನೆಂಟು ವರ್ಷಗಳ ಹಿಂದೆ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ಅಲ್‌ಖೈದಾ ದಾಳಿಯ ಹಿಂದೆ ಸೌದಿ ಅರೇಬಿಯಾದ ಪಾತ್ರ ಇದೆಯೇ?
ಹೌದು ಎನ್ನುತ್ತದೆ “ದ ನ್ಯೂಯಾರ್ಕ್‌ ಟೈಮ್ಸ್‌’ ನಿಯತಕಾಲಿಕೆ ಮತ್ತು ‘ಪ್ರೊ ಪಬ್ಲಿಕಾ’ ಜಂಟಿಯಾಗಿ ನಡೆಸಿರುವ ತನಿಖಾ ವರದಿ. ಈ ಭೀಕರ ದಾಳಿಯಲ್ಲಿ ಸೌದಿ ಅರೇಬಿಯಾ ಸಾಂದ ರ್ಭಿಕವಾಗಿ ಪಾಲ್ಗೊಂಡ ಬಗ್ಗೆ ಸಾಕ್ಷ್ಯಗಳಿವೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಎರಡೂ ಮಾಧ್ಯಮ ಸಂಸ್ಥೆಗಳು ನಡೆಸಿರುವ ತನಿಖೆಯಲ್ಲಿ ಎಫ್ಬಿಐ ಸಿಗದ ಕೆಲವು ಲಿಂಕ್‌ಗಳ ಅಂಶ ಪತ್ತೆಯಾಗಿದೆ. ಸೌದಿ ಅರೇಬಿಯಾ ಪಾತ್ರದ ಬಗ್ಗೆ ತನಿಖೆ ಬೇಡವೆಂದು ಸೂಚಿಸಲಾಗಿದ್ದರೂ ತನಿಖಾ ಸಂಸ್ಥೆಯ ಅಧಿಕಾರಿಗಳ ಒಂದು ತಂಡ 10 ವರ್ಷ ಕಾಲ 9/11 ಘಟನೆಯ ಬಗ್ಗೆ ನಿಗಾ ಇರಿಸಿತ್ತು. ಸುಮಾರು 50 ಹಾಲಿ ಮತ್ತು ಮಾಜಿ ಎಫ್ಬಿಐ ಅಧಿಕಾರಿಗಳನ್ನು ಸಂದರ್ಶಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ಹೈಜಾಕರ್‌ಗಳ ಜತೆಗೆ ಸಂಪರ್ಕ: ಆಗರ್ಭ ಶ್ರೀಮಂತ ಸೌದಿ ಮನೆತನವೊಂದಕ್ಕೆ ಸೇರಿದ ಒಮರ್‌ – ಅಲ್‌-ಬಯೋಮಿ ಎಂಬ ವಿದ್ಯಾರ್ಥಿಗೆ ವಿಮಾನ ಅಪಹರಿಸಿ ವಿಶ್ವ ವಾಣಿಜ್ಯ ಕೇಂದ್ರಕ್ಕೆ ಅಪ್ಪಳಿಸಿದ್ದ ವ್ಯಕ್ತಿಗಳ ಪರಿಚಯ ಇತ್ತು. ಆದರೆ ಅಮೆರಿಕ ಸರಕಾರ ಆತನನ್ನು ಖುಲಾಸೆಗೊಳಿಸಿತ್ತು. ಬಯೋಮಿಯ ಬರ್ಮಿಂಗ್‌ಹ್ಯಾಮ್‌ನ ಮನೆಯಲ್ಲಿ ಶೋಧ ನಡೆಸಿದಾಗ, ನೋಟ್‌ ಪುಸ್ತಕದಲ್ಲಿ ಆಗಸದಿಂದ ಕೆಳಮುಖವಾಗಿ ಚಲಿಸುತ್ತಿರುವ ವಿಮಾನದ ಚಿತ್ರ ಸಿಕ್ಕಿತ್ತು.

ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್‌ಗೆ ದಾಳಿ ನಡೆಸಲು ಬಳಸಿದ್ದ ಫ್ಲೈಟ್‌ 77 ವಿಮಾನದ ಚಿತ್ರ ಅದಾಗಿತ್ತು ಎಂದು ಎಫ್ಬಿಐನಲ್ಲಿ ಏರೋ ನಾಟಿಕಲ್‌ ಎಂಜಿನಿಯರಿಂಗ್‌ ಕಲಿತಿದ್ದ ಅಧಿಕಾರಿ ಪುಷ್ಟೀಕರಿಸಿದ್ದರು. ಬಯೋಮಿಯ ಬಂಧನವಾದ ಬಳಿಕ ಈ ಅಂಶಗಳ ಬಗ್ಗೆ ಹೆಚ್ಚಿನ ತನಿಖೆ ನಡೆದಿರಲಿಲ್ಲ.

ಸಿಐಎ ತಡೆ: ವರ್ಷಗಳ ಅನಂತರ ಅಲ್‌ ಬಯೋಮಿ, ಸೌದಿಯ ರಾಜತಾಂತ್ರಿಕ ಅಧಿಕಾರಿ ಫ‌ಹಾದ್‌ ಅಲ್‌- ತುಮೈರಿ, ಯಮೆನ್‌- ಅಮೆರಿಕನ್‌ ಪ್ರಜೆ ಅನ್ವರ್‌ ಅಲ್‌- ಅವ್ಲಕಿ ನಡುವೆ ಹಲವಾರು ಬಾರಿ ಫೋನ್‌ ಸಂಭಾಷಣೆ ನಡೆದಿತ್ತು. ತನಿಖೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ‘ಇವು 2001ರಲ್ಲಿ ಸಿಕ್ಕಿರುತ್ತಿದ್ದರೆ ಪ್ರಬಲ ಸಾಕ್ಷ್ಯಗಳಾಗಿರುತ್ತಿದ್ದವು’ ಎಂದಿದ್ದಾರೆ.

2010ರಲ್ಲಿ ಎಫ್ಬಿಐ ಸೌದಿಯ ಇಸ್ಲಾಮಿಕ್‌ ವ್ಯವಹಾರ ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳ ಮೇಲೆ ನಿಗಾ ಇರಿಸಲು ನಿರ್ಧರಿಸಿತ್ತು. ಆದರೆ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ (ಸಿಐಎ) ಮಧ್ಯ ಪ್ರವೇಶಿಸಿದ್ದರಿಂದ ಅದಕ್ಕೆ ತಡೆ ಬಿತ್ತು.

ಟಾಪ್ ನ್ಯೂಸ್

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.