“ದಿಲ್ ತೋ ಹ್ಯಾಪಿ ಹೈ ಜೀ ಶೋ”ನ ನಟಿ ಸೇಜಲ್ ಆತ್ಮಹತ್ಯೆಗೆ ಶರಣು
ಸೇಜಲ್ ಶರ್ಮಾ ಉದಯ್ ಪುರ್ ನಿಂದ 2017ರಲ್ಲಿ ಮುಂಬೈಗೆ ನಟಿಯಾಗುವ ಕನಸು ಹೊತ್ತು ಬಂದಿದ್ದರು.
Team Udayavani, Jan 25, 2020, 11:06 AM IST
ಮುಂಬೈ: ಸಿಮ್ಮಿ ಖೋಸ್ಲಾ ಅವರ “ದಿಲ್ ತೋ ಹ್ಯಾಪಿ ಹೈ ಜೀ” ಸೀರಿಯಲ್ ನ ನಟಿ ಸೇಜಲ್ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.
ನಟಿ ಸೇಜಲ್ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದರು ಎಂಬ ವಿವರ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಹನಟ ಅರು ಕೆ ವರ್ಮಾ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸೇಜಲ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಂಬಲೂ ಸಾಧ್ಯವಾಗುತ್ತಿಲ್ಲ. ಹತ್ತು ದಿನಗಳ ಹಿಂದೆ ನಾನು ಆಕೆಯನ್ನು ಭೇಟಿಯಾಗಿದ್ದೆ. ಆಗ ಖುಷಿಯಲ್ಲೇ ಇದ್ದಿರುವುದಾಗಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ದಿಲ್ ತೋ ಹ್ಯಾಪಿ ಹೈ ಜೀ ಸೀರಿಯಲ್ ನಲ್ಲಿ ವರ್ಮಾ ಸೇಜಲ್ ಸಹೋದರನ ಪಾತ್ರ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಆಕೆ ನೇಣಿಗೆ ಶರಣಾಗಿದ್ದರು ಎಂಬ ಸುದ್ದಿ ಆಕೆಯ ಮನೆಯವರಿಗೆ ಇಂದು ಬೆಳಗ್ಗೆ ಗಮನಕ್ಕೆ ಬಂದಿತ್ತು. ಇದೀಗ ಸೇಜಲ್ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಸಲು ಉದಯ್ ಪುರ್ ಗೆ ಕೊಂಡೊಯ್ಯುತ್ತಿದ್ದಾರೆ ಎಂದು ವರ್ಮಾ ತಿಳಿಸಿದ್ದಾರೆ.
ಸೇಜಲ್ ಶರ್ಮಾ ಉದಯ್ ಪುರ್ ನಿಂದ 2017ರಲ್ಲಿ ಮುಂಬೈಗೆ ನಟಿಯಾಗುವ ಕನಸು ಹೊತ್ತು ಬಂದಿದ್ದರು. ನಂತರ ಸ್ಟಾರ್ ಪ್ಲಸ್ ನ ದಿಲ್ ತೋ ಹ್ಯಾಪಿ ಹೈ ಜೀ ಶೋನಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.