ಬುಡ ಜಾನಪದ ಸಂಸ್ಥೆಗೆ ಬೆಳ್ಳಿ ಪದಕ
Team Udayavani, Jan 25, 2020, 2:37 PM IST
ಹೊನ್ನಾವರ: ಪ್ರತಿವರ್ಷ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆ ಔಟ್‌ಲುಕ್ ನೀಡುವ ಬೆಸ್ಟ್ ಟೂರ್ ಆಪರೇಟರ್ ಬೆಳ್ಳಿ ಪ್ರಶಸ್ತಿ ಡಾ| ಸವಿತಾ ನಾಯಕರ ಬುಡ ಫ್ಲೋಕ್‌ಲೋರ್‌ಗೆ ದೊರಕಿದೆ. ಅಧ್ಯಯನ ಪ್ರವಾಸೋದ್ಯಮಕ್ಕೆ ಈ ಸಂಸ್ಥೆ ನೀಡಿದ ಕೊಡುಗೆಗಾಗಿ ರಾಷ್ಟ್ರದಲ್ಲಿ ಸಂಸ್ಥೆ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.
ಔಟ್‌ಲುಕ್ ಪತ್ರಿಕೆ ಪ್ರತಿವರ್ಷ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕಾಗಿ ಚಿನ್ನ ಮತ್ತು ಬೆಳ್ಳಿ ಪ್ರಶಸ್ತಿಯನ್ನು ವಿವಿಧ ಹಂತಗಳ ಅಧ್ಯಯನ ಮತ್ತು ದಾಖಲೆಯೊಂದಿಗೆ ಪರಿಶೀಲನೆ ಮಾಡಿ ಉನ್ನತ ಮಟ್ಟದ ಸಮೀತಿಗೆ ನೀಡುತ್ತದೆ. ಮೊದಲ ಸುತ್ತಿನಲ್ಲಿ 10 ಸ್ಥಾನಗಳಲ್ಲಿ 1ಸ್ಥಾನ ಪಡೆದ ಬುಡ ಅಂತಿಮ ಸುತ್ತಿಗೆ ಬಂದ 5ಸಂಸ್ಥೆಗಳಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಸಹಸ್ರಾರು ಪ್ರವಾಸೋದ್ಯಮ ಸಂಸ್ಥೆಗಳಿದ್ದರೂ ವಿಶಿಷ್ಟವಾದ ಸಂಸ್ಥೆಯನ್ನು ಡಾ| ಸವಿತಾ ಮಾದನಗೇರಿಯಿಂದ 30ಕಿಮೀ ದೂರ ಅಚವೆಯ ಸಮೀಪ ಅಂಗಡಿಬೈಲು ಎಂಬಲ್ಲಿ ನಿರ್ಮಿಸಿದ್ದಾರೆ. 21ಎಕರೆಜಮೀನು ಪಡೆದು ಅದರಲ್ಲಿ ಮುಕ್ಕಾಲು ಭಾಗ ಕಾಡನ್ನು ಉಳಿಸಿಕೊಂಡು ಭತ್ತ, ಕಬ್ಬು, ತೆಂಗು, ಮೊದಲಾದ ಬೆಳೆ ಬೆಳೆಯುತ್ತ ಪಕ್ಕಾ ಜಾನಪದ ಪದ್ಧತಿಯಲ್ಲಿ ಜೀವನ ನಡೆಸುತ್ತಿದ್ದಾರೆ.
ಇವರ ಸಂಸ್ಥೆ ದೇಶದ ಪ್ರತಿಷ್ಠಿತ 15 ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ದೇಶದ ನಾನಾಭಾಗಗಳಿಂದ ಕನಿಷ್ಠ 3-4ಶಾಲೆಯ ವಿದ್ಯಾರ್ಥಿಗಳು ಪ್ರತಿತಿಂಗಳು ಇಲ್ಲಿಗೆ ಬಂದು, ವಾರಗಟ್ಟಲೆ ಉಳಿದುಅಧ್ಯಯನ ಮಾಡಿ ರೈತರೊಂದಿಗೆ ಭತ್ತ ಕುಟ್ಟುವ, ಸಸಿ ನೆಡುವ, ಗೋದಿ ಬೀಸುವ ಮೊದಲಾದ ಕೆಲಸಮಾಡಿ ಹಳ್ಳಿಗಳನ್ನು ಸುತ್ತಾಡಿ, ಜಾನಪದ ಸಂಸ್ಕೃತಿ ಅನುಭವಿಸುವುದರ ಜೊತೆಯಲ್ಲಿ ಅನುಸರಿಸುತ್ತಾರೆ. ಖಂಡಿತ ಒಂದುವಾರ ಉಳಿಯಲು ಸಾಧ್ಯವಿರುವವರನ್ನು ಮಾತ್ರ ಇಲ್ಲಿ ಉಳಿಸಿಕೊಂಡಿದ್ದ ಬಂದು ಹೋಗುವವರಿಗೆ ಅವಕಾಶವಿಲ್ಲ. ಹೀಗೆವಿಶಿಷ್ಟವಾಗಿ ಸಂಸ್ಥೆ ಕಟ್ಟಲು ಸವಿತಾ ಅವರ ತಂದೆ ಹಿರಿಯ ಜಾನಪದ ವಿದ್ವಾಂಸ ಡಾ| ಎನ್.ಆರ್. ನಾಯಕ ಮತ್ತು ತಾಯಿ ಶಾಂತಿ ನಾಯಕರ ಪ್ರೇರಣೆ ಕಾರಣವಾಗಿದೆ.
ಅವರು 4 ದಶಕಗಳ ಕಾಲ ಜಿಲ್ಲೆಯ ಜಾನಪದ ಸಾಹಿತ್ಯ, ಸಂಸ್ಕೃತಿ ಅಧ್ಯಯನ ಮಾಡಿ, ಅವುಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಡಾ| ಸವಿತಾ ಬರೆದುದ್ದನ್ನುಕೃತಿಯಲ್ಲಿ ಇಳಿಸುವ ಮುಖಾಂತರ ಅನುಭವವೇದ್ಯವನ್ನಾಗಿಸಿದ್ದಾರೆ. ಡಾ| ಸವಿತಾ ಮತ್ತು ಅವರ ಪತಿಉದಯ ಬಹುಕಾಲ ವಿದೇಶದಲ್ಲಿದ್ದರು.
ಮರಳಿ ಬಂದು ಏನನ್ನಾದರೂ ಸಾಧಿಸುವ ದೃಷ್ಠಿಯಿಂದ ಸವಿತಾ ಈ ರೀತಿಯಲ್ಲಿ ತೊಡಗಿಕೊಂಡರೆ ಪತಿ ಅಲ್ಲಿಗಿಂತ ದೂರ ಅಡಕೆ ಹಾಳೆಯಿಂದ ವಿವಿಧ ಜೀವನೋಪಯೋಗಿ ಪಾತ್ರೆಗಳನ್ನು ಯಾಂತ್ರಿಕವಾಗಿ ನಿರ್ಮಿಸುವ ದೊಡ್ಡ ಕೈಗಾರಿಕೆ ನಡೆಸುತ್ತಿದ್ದ ಮಗ ತಂದೆಯ ಜೊತೆಗಿದ್ದಾನೆ. ಇನ್ನೊಬ್ಬ ಮಗ ವನ್ಯಜೀವಿ ಅಧ್ಯಯನದಲ್ಲಿ ತೊಡಗಿದ್ದಾನೆ. 80 ದಾಟಿದ ಡಾ| ಎನ್.ಆರ್. ನಾಯಕ, ಶಾಂತಿ ನಾಯಕ, ಉದಯ, ಸವಿತಾ ಮತ್ತು ಮಕ್ಕಳ ಸಹಿತ ಎಲ್ಲರೂ ಜಿಲ್ಲೆಯ ಸಂಸ್ಕೃತಿ, ಪರಂಪರೆ, ಸಾಹಿತ್ಯ ಜನಜೀವನವನ್ನುಜಗತ್ತಿಗೆ ಪರಿಚಯಿಸಲು ಜಾನಪದ ವಿಶ್ವಪ್ರತಿಷ್ಠಾನ ಕಟ್ಟಿಕೊಂಡಿದ್ದಾರೆ.
ನನಗೆ ಬೆಸ್ಟ್ ಟೂರಿಸ್ಟ್ ಆಪರೇಟರ್ ಬೇಕಾಗಿರಲಿಲ್ಲ, ನನ್ನ ಉದ್ದೇಶ ಜಿಲ್ಲೆಗೆ ಜಾನಪದವನ್ನು ಸಮಗ್ರವಾಗಿ ಅಧ್ಯಯನ ಮಾಡುವ ಮುಖಾಂತರ ಅದನ್ನು ಜಗತ್ತಿಗೆ ಪಸರಿಸುವ ಕೆಲಸ ಮಾಡಬೇಕಾಗಿದೆ. ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಕರೆ ಬಂದರೂ ಇಲ್ಲಿ ದೂರದ ರಾಜ್ಯದ ವಿದ್ಯಾರ್ಥಿಗಳು ಜೊತೆಗೆ ಇದ್ದ ಕಾರಣ ಹೋಗಲು ಸಾಧ್ಯವಾಗಲಿಲ್ಲ. ಏನೇ ಇದ್ದರೂ ಔಟ್‌ಲುಕ್ ನಂತಹ ಪ್ರತಿಷ್ಠಿತ ಪತ್ರಿಕೆ ಆಯ್ಕೆಯಲ್ಲಿ ದೇಶದ ಗಣ್ಯಾತಿಗಣ್ಯರು ನಮ್ಮನ್ನು ಗುರುತಿಸಿರುವುದು ಸಂತೋಷ ಎಂದು ಹೇಳಿರುವ ಸವಿತಾ, ಪತಿ, ಹೆತ್ತವರ ಮತ್ತು ಮಕ್ಕಳ ಮತ್ತು ದೇಶಾದ್ಯಂತದಿಂದ ಬರುವ ಮಕ್ಕಳ ಪ್ರೀತ ನನ್ನ ಪಾಲಿಗೆರ ದೊಡ್ಡ ಪ್ರಶಸ್ತಿ ಎಂದು ಹೇಳಿದ್ದಾರೆ.
-ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.