ನಗರಕ್ಕೆ ಬರಲಿ ಬಿರ್ಚ್ ಫಾರೆಸ್ಟ್ ಮಾದರಿ ಯೋಜನೆ
Team Udayavani, Jan 26, 2020, 5:08 AM IST
ಅಮೆರಿಕದ ಬೂಸ್ಟ್‌ನ್ ನಗರವೂ “ಬಿರ್ಚ್ ಫಾರೆಸ್ಟ್’ ಎಂಬ ಪರಿಸರ ಸ್ನೇಹಿ ಪರಿಕಲ್ಪನೆಯೂ ಮಾದರಿಯನ್ನು ಅನುಷ್ಠಾನಗೊಳಿಸಿದೆ. ಇದೊಂದು ಪರಿಸರ ಪೂರಕವಾದ ಯೋಜನೆಯಾಗಿದ್ದು ಎಲ್ಲ ದೇಶಗಳೂ ಅಳವಡಿಸಿಕೊಳ್ಳಬಹುದಾದ ಯೋಜನೆಯಾಗಿದೆ.
ಭಾರತ ದೇಶವೂ ನಗರೀಕರಣವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಬಳಿಕ, ವೇಗವಾಗಿ ಬೆಳೆದು ನಿಂತಿತು. ದೇಶದ ಪ್ರಮುಖ ನಗರಗಳೂ ಅಭಿವೃದ್ಧಿ ಪಥದತ್ತ ಸಾಗಿದವು. ಅಂತೆಯೇ ನಗರಗಳು ಬೆಳೆದಂತೆಯೇ ಜನಸಂಖ್ಯೆಯೂ ವೃದ್ಧಿಯಾಯಿತು. ಇದರ ಪರಿಣಾಮವಾಗಿ ನಗರದಲ್ಲಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿದವು. ಸಂಚಾರ ವ್ಯವಸ್ಥೆಯಲ್ಲಿ ಭಾರೀ ಪರಿಣಾಮಕಾರಿ ಬದಲಾವಣೆ ಕಾಣಲು ಸಾಧ್ಯವಾಯಿತು. ಇದೊಂದು ಸಕಾರಾತ್ಮಕ ಬದಲಾವಣೆ ಎಂದೇ ಭಾವಿಸುತ್ತಿರುವಾಗ ಇದರ ಹಿಂದೆಯೇ ಪರೋಕ್ಷವಾಗಿ ಕೆಲವೊಂದು ಸಮಸ್ಯೆಗಳು ಉದ್ಭವಿಸಿದವು.
ನಗರೀಕರಣದಿಂದಾಗಿ ನಗರದಲ್ಲಿ ಕ್ರಮೇಣ ಪರಿಸರ ಕ್ಷೀಣಿಸುತ್ತಾ ಹೋಯಿತು. ಗಿಡ-ಮರಗಳನ್ನು ಧರೆಗೆ ಉರುಳಿಸಿ ಬಹುಮಹಡಿ ಕಟ್ಟಡ, ಫ್ಲೈಓವರ್‌ಗಳನ್ನು ನಿರ್ಮಿಸಲಾಯಿತು. ಇದರಿಂದ ಸಂಚಾರ ವ್ಯವಸ್ಥೆಗೆ ಪೂರಕವಾಯಿತಾದರೂ, ವಾಹನಗಳ ಸಂಖ್ಯೆ ಹೆಚ್ಚಳದಿಂದ ವಾಹನಗಳ ಇಂಧನದ ಹೊಗೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಳವಾಯಿತು. ಮನುಷ್ಯ ವಾಸಿಸಲು ಯೋಗ್ಯವಾದ ಸ್ಥಳವನ್ನು ಹುಡುಕುವಂತಾಯಿತು. ಇತ್ತೀಚೆಗಷ್ಟೇ ಹೊಸದಿಲ್ಲಿಯ ಜನರು ಕೃತಕ ಆಮ್ಲಜನಕದ ಮೊರೆ ಹೋಗಿದ್ದು ನಾವು ಕಾಣಬಹುದು. ಈ ಹಿನ್ನೆಲೆಯಲ್ಲಿ ಭಾರತ ನಗರೀಕರಣಗೊಂಡ ಪರಿಯನ್ನು ಪ್ರಶ್ನೆಯಾಗಿ ನೋಡಬೇಕಿದೆ. ಇದಕ್ಕೆ ಪೂರಕವಾದ ಯೋಜನೆ, ಯೋಚನೆಗಳನ್ನು ಆಡಳಿತ ವ್ಯವಸ್ಥೆ ಸಹಿತ ಪ್ರತಿಯೊಬ್ಬರೂ ರೂಪಿಸಬೇಕಾದ ಅನಿವಾರ್ಯತೆ ಪ್ರಸ್ತುತವಾಗಿದೆ.
ಒಂದು ಯೋಜನೆಯನ್ನು ರೂಪಿಸುವಾಗ ಸುಸ್ಥಿರ ಬದುಕನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದರೆ ಅದು ಯಶಸ್ವಿಯಾಗುತ್ತದೆ ಎಂಬ ಉದಾಹರಣೆಗೆ ಅಮೆರಿಕದ ಬೂಸ್ಟ್‌ನ್ ನಗರವೂ ಅಳವಡಿಸಿಕೊಂಡಿರುವ “ಬಿರ್ಚ್ ಫಾರೆಸ್ಟ್’ ಎಂಬ ಕಲ್ಪನೆಯೂ ದೇಶಕ್ಕೆ ಮಾದರಿಯಾಗಬಲ್ಲದು.
ಮಂಗಳೂರಿಗೆ ಬರಲಿ
ಈಗಾಗಲೇ ಮಹಾನಗರವಾಗಿ ಬೆಳೆದಿರುವ ಮಂಗಳೂರು ನಗರವೂ ದೇಶದ ಸ್ಮಾರ್ಟ್ ಸಿಟಿ ನಗರಗಳ ಪೈಕಿ ಇದು ಒಂದಾಗಿದೆ. ಸ್ಮಾರ್ಟ್ ಸಿಟಿ ಮಂಗಳೂರಿಗೆ ಈ ಯೋಜನೆಯನ್ನು ಅಳವಡಿಸಕೊಳ್ಳುವ ಅನಿವಾರ್ಯತೆ ಕೂಡ. ಈಗಾಗಲೇ ನಗರದಲ್ಲಿ ಕೆಲವೊಂದು ಕಡೆ ಪಾರ್ಕ್‌ಗಳು ಕೂಡ ಇದ್ದರೂ, ಬೆಳೆಯುತ್ತಿರುವ ನಗರಕ್ಕೆ ಬಿರ್ಚ್ ಫಾರೆಸ್ಟ್ ನಂಥಸಣ್ಣ ಸಣ್ಣ ಪಾರ್ಕ್ ಗಳನ್ನು ನಿರ್ಮಿಸಬೇಕಾಗಿದೆ. ಇದಕ್ಕೆ ಆಡಳಿತ ವ್ಯವಸ್ಥೆ ಗಮನಹರಿಸಬೇಕಿದೆ.
ಈ ಯೋಜನೆ ಎಲ್ಲಿದೆ?
ಈ ಯೋಜನೆಯನ್ನು ಅಮೆರಿಕದ ಬೂಸ್ಟನ್ ನಗರದ ರಾಸ್ಲಿನ್‌ದಲ್ ಎಂಬಲ್ಲಿ ಮೊದಲಿಗೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆ ಅಂತಿಮ ಹಂತಕ್ಕೆ ಬಂದಿದೆ. ಇದರಿಂದ ರಾಸ್ಲಿನ್‌ದಲ್ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಕ್ರಮೇಣ ಕ್ಷೀಣಗೊಂಡಿದೆ. ಅಲ್ಲಿನ ಜನರ ಸುಸ್ಥಿರ ಬದುಕಿನ ಉದ್ದೇವನ್ನಿಟ್ಟುಕೊಂಡು ಅನುಷ್ಠಾನಗೊಳಿಸಿರುವ ದೂರದೃಷ್ಟಿ ಯೋಜನೆ ಇದಾಗಿದೆ.
ಬೂಸ್ಟನ ಬಿರ್ಚ್ ಫಾರೆಸ್ಟ್ ಎಂಬ ಯೋಜನೆಯೂ ಇದೊಂದು ಪರಿಸರ ಪೂರಕ ಯೋಜನೆಯಾಗಿದ್ದು ಇದನ್ನು ಇಂದು ಎಲ್ಲ ದೇಶಗಳೂ ಈ ಮಾದರಿ ಯೋಜನೆಯನ್ನು ರೂಪಿಸುತ್ತಿವೆ. ಇಂತಹ ಸಿದ್ಧ ಮಾದರಿಯ ಯೋಜನೆಗಳನ್ನು ಕೂಡ ಭಾರತದ ನಗರಗಳು ಅಳವಡಿಸಿಕೊಳ್ಳಬೇಕಿದೆ.
ಏನಿದು ಬಿರ್ಚ್ ಫಾರೆಸ್ಟ್?
ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದ್ದು, ನಗರದ ಹೆಚ್ಚಿನ ಜನ ಸಂದಣಿ ಸ್ಥಳಗಳಲ್ಲಿ ಸಣ್ಣದಾದ ಪಾರ್ಕ್‌ವೊಂದನ್ನು ನಿರ್ಮಿಸುವುದು ಇದಾಗಿದೆ. ಈ ಪಾರ್ಕ್ ನಗರದ ಪ್ರಮುಖ ರಸ್ತೆಯ ಮಧ್ಯದಲ್ಲಿಯೇ ನಿರ್ಮಿಸಲಾಗುತ್ತದೆ. ಹೆಚ್ಚಿನ ವಾಹನ ಸಂದಣಿಯಿರುವ ಪ್ರದೇಶದಲ್ಲಿ ನಿರ್ಮಿಸಿದರೆ ಒಳಿತು. ಬಿರ್ಚ್ ಫಾರೆಸ್ಟ್‌ನಲ್ಲಿ ಇದೊಂದು ಸಣ್ಣ ಕಾಡಿನಂತೆ ಹೆಚ್ಚಿನ ಹಸುರು ಗಿಡ-ಮರಗಳನ್ನು ಬೆಳೆಸಬೇಕು. ಈ ಸಣ್ಣ ಕಾಡಿನಲ್ಲಿ ಜನಗಳಿಗೆ ಕೂಡಲು ಕಟ್ಟಿಗೆಯ ಚೇರ್‌ಗಳನ್ನು ನಿರ್ಮಿಸಬೇಕು. ಎಲ್ಲವೂ ಪರಿಸರಮಯವಾಗಿರಬೇಕು. ಒಟ್ಟಾರೆಯಾಗಿ ಸಂತುಲಿತ ಪರಿಸರ ನಿರ್ಮಾಣ ಈ ಯೋಜನೆಯ ಉದ್ದೇಶ.
ಅಭಿನವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.