ಪ್ಲಾಸ್ಟಿಕ್ ಬಳಕೆ -ಜಾಗೃತಿ ಅಗತ್ಯ: ಹಾಲಾಡಿ ಶ್ರೀನಿವಾಸ ಶೆಟ್ಟಿ
ಕೋಡಿಯಲ್ಲಿ ಜನಮನ ಸೆಳೆದ "ನಿರ್ವಾಣ' ಬೀಚ್ ಉತ್ಸವ
Team Udayavani, Jan 25, 2020, 8:55 PM IST
ಕುಂದಾಪುರ: ಪರಿಸರಕ್ಕೆ ಹಾನಿಕಾರಕ ವಸ್ತು ಬಳಸುವುದನ್ನು ಕಡಿಮೆ ಮಾಡುವತ್ತ ನಾವೆಲ್ಲರೂ ಹೆಜ್ಜೆಯಿಡಬೇಕಿದೆ. ನೆಲ- ಜಲ – ಪರಿಸರ ಕಾಪಾಡು ವುದು ನಮ್ಮೆಲ್ಲರ ಕರ್ತವ್ಯ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸಲು ಕಷ್ಟವಾದರೂ, ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಬೇಕು. ಅದಕ್ಕಿಂತಲೂ ಮುಖ್ಯವಾಗಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಎಲ್ಲ ಕಡೆ ನಡೆಯಬೇಕು ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಶನಿವಾರ ಕೋಡಿಯ ಕಡಲ ಕಿನಾರೆಯಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 50ನೇ ವಾರದ ಸ್ವತ್ಛತಾ ಆಂದೋಲನದ ಹಿನ್ನೆಲೆಯಲ್ಲಿ ಆಯೋಜಿಸಿದ ಎರಡು ದಿನಗಳ “ನಿರ್ವಾಣ 2020′ ಬೀಚ್ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೀಫ್ವಾಚ್, ಎಫ್.ಎಸ್.ಎಲ್. ಇಂಡಿಯಾ, ಅಮಲಾ ಭಾರತ ಅಭಿಯಾನ, ಎನ್.ಎಚ್. 66, ಗೀತಾನಂದ ಫೌಂಡೇಶನ್ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಕೋಡಿಯ ಸೀವಾಕ್ ಸಮೀಪ ಈ ಉತ್ಸವ ಆಯೋಜನೆಗೊಂಡಿದೆ. ಬೀಚ್ ಉತ್ಸವವನ್ನು ಉದ್ಘಾಟಿಸಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಮಾತನಾಡಿ, ಎಲ್ಲರೂ ಪ್ಲಾಸ್ಟಿಕ್ ಬಳಕೆ ಬಗ್ಗೆ ಕಡಿಮೆ ಮಾಡುವತ್ತ ದೃಢ ಸಂಕಲ್ಪ ಕೈಗೊಳ್ಳಬೇಕು. ಇದೊಂದು ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಬೀಚ್ ಸ್ವಚ್ಛತೆಗೆ ಆದ್ಯತೆ
ಇಲ್ಲಿನ ಕೋಡಿ ಬೀಚ್ ಸೀವಾಕ್ ಆದ ಬಳಿಕ ದಿನದಿಂದ ದಿನಕ್ಕೆ ಜನ ಮನ್ನಣೆ ಗಳಿಸುತ್ತಿದ್ದು, ಪ್ರತಿ ನಿತ್ಯ ಇಲ್ಲಿಗೆ ಬರುವ ಪ್ರವಾಸಿಗರು, ವಿಹಾರಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಾಗೆಯೇ ಬೀಚ್‌ನ ಸ್ವಚ್ಛತೆ ಕಾಪಾಡುವುದು ಕೂಡ ಅಗತ್ಯ. ಆ ನಿಟ್ಟಿನಲ್ಲಿ ಕ್ಲೀನ್ ಕುಂದಾಪುರ ತಂಡವು ಉತ್ತಮ ಕಾರ್ಯ ಮಾಡುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್‌ನ ಕುಂದಾಪುರ ಘಟಕದ ಸಭಾಪತಿ ಜಯಕರ್ ಶೆಟ್ಟಿ ಹೇಳಿದರು.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಡಾ| ರಶ್ಮಿ ಕುಂದಾಪುರ, ಕಲ್ಪನಾ ಭಾಸ್ಕರ್, ಕುಂದಾಪುರದ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಉತ್ಸವದ ಸಂಘಟನ ಸಮಿತಿಯ ಭರತ್ ಬಂಗೇರ, ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್ ಅವರ ಪತ್ನಿ ಅನಂತ ಹರಿರಾಂ, ಅರುಣ್, ಶಕುಂತಳಾ, ಶ್ರೇಯಾ, ಶ್ರದ್ಧಾ, ಲೋಹಿತ್ ಬಂಗೇರ,
ಶಿವರಾಮ ಶೆಟ್ಟಿ, ಆಶಾ ಶೆಟ್ಟಿ, ಶಶಿಧರ, ಆದ್ಯಂತ್, ಅಭಿನಂದನ್, ರಕ್ಷಾ, ಅನುದೀಪ್ ಹೆಗಡೆ, ಸಚಿನ್ ನಕ್ಕತ್ತಾಯ, ಅನಿಲ್ ಕುಮಾರ್ ಶೆಟ್ಟಿ, ವಿಖ್ಯಾತ್, ಸುವಿತ್, ಅವೀಶ್, ಶ್ರೀಚರಣ್ ಇದ್ದರು. ರವಿಕಿರಣ್ ನಿರ್ವಹಿಸಿದರು.
ಪ್ಲಾಸ್ಟಿಕ್ ಮುಕ್ತ ಉತ್ಸವ
ಕೋಡಿಯ ಕಡಲ ಕಿನಾರೆಯಲ್ಲಿ ಆಯೋಜಿಸಿದ ಈ ಎರಡು ದಿನಗಳ ಕಾಲ ನಡೆಯುವ “ನಿರ್ವಾಣ -2020′ ಬೀಚ್ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ. ಇಲ್ಲಿ ಅಲಂಕಾರಕ್ಕಾಗಿ ಹಾಕಲಾದ ಎಲ್ಲ ವಸ್ತುಗಳು ಕಾಗದ, ಮತ್ತಿತರ ಪರಿಸರಕ್ಕೆ ಹಾನಿಯಿಲ್ಲದಂತಹ ವಸ್ತು, ಸಾಮಗ್ರಿಗಳನ್ನೇ ಬಳಸಲಾಗಿದೆ. ಇಲ್ಲಿ ತೆರೆಯಲಾದ ಎಲ್ಲ ಮಳಿಗೆಗಳಲ್ಲೂ ಪ್ಲಾಸ್ಟಿಕ್ ಮುಕ್ತ ವಸ್ತುಗಳನ್ನೇ ಮಾರಾಟಕ್ಕೆ ಇಡಲಾಗಿದೆ.
ಜನಸ್ನೇಹಿ ಬೀಚ್‌ಗೆ ಯೋಜನೆ
ನಾನು ಇಲ್ಲಿಗೆ ಬಂದ ಅನಂತರ 40 ನೇ ವಾರದ ಕ್ಲೀನ್ ಕುಂದಾಪುರ ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದೆ. ಆಗ ಪ್ರೇರಣೆಗೊಂಡು, ನಮ್ಮ ಪೊಲೀಸರನ್ನು ಕೂಡ ಭಾಗಿಯಾಗುವಂತೆ ಸಲಹೆ ನೀಡಿದೆ. ಈಗ 50ನೇ ವಾರದ ಸ್ವತ್ಛತಾ ಆಂದೋಲನ ನಡೆಯುತ್ತಿದೆ. ಇದೊಂದು ಉತ್ತಮ ಸಂದೇಶ ಸಾರುವ ಉತ್ಸವವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಮತ್ತಷ್ಟು ಮೂಲ ಸೌಕರ್ಯ, ಜನಸ್ನೇಹಿಯಾಗಿಸಲು ಸಿಸಿಟಿವಿ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಶಾಸಕರು, ಪುರಸಭೆ ಸಹಕಾರದಲ್ಲಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
-ಹರಿರಾಂ ಶಂಕರ್, ಎಎಸ್‌ಪಿ ಕುಂದಾಪುರ
ಪರಿಸರ ಜಾಗೃತಿ
ಈ ಉತ್ಸವ ಪ್ಲಾಸ್ಟಿಕ್ ನಿರ್ಮೂಲನದ ಅವಶ್ಯಕತೆ ಹಾಗೂ ನಮ್ಮ ಸುತ್ತಮುತ್ತ ಇರಬೇಕಾದ ಸ್ವತ್ಛತೆ, ಕಸಗಳ ವಿಲೇವಾರಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ನಮ್ಮದು. ಮಹಿಳೆಯರಿಗೆ ಉತ್ತೇಜನ ಕೊಡುವಂತಹ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳ ವ್ಯಾಪಾರ ಮಳಿಗೆ, ಪರಿಸರ ಸ್ನೇಹಿ ಪದಾರ್ಥಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಒಟ್ಟು 15 ಮಳಿಗೆಗಳು ಇಲ್ಲಿವೆ. 2-3 ಜನರಿಂದ ಆರಂಭಗೊಂಡ ಈ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಈಗ 30 ಮಂದಿಯ ತಂಡವಾಗಿದೆ. ಕಳೆದೊಂದು ವಾರದಿಂದ ಈ ಉತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಕಾರದ ಅಗತ್ಯವಿದೆ.
-ಡಾ| ರಶ್ಮಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.