118 ನಿಸ್ವಾರ್ಥ ಸಾಧಕರಿಗೆ “ಪದ್ಮಶ್ರೀ’ ಪ್ರಶಸ್ತಿಯ ಗರಿ

ಈ ಬಾರಿಯೂ ಎಲೆಮರೆಕಾಯಿಗಳ ಆಯ್ಕೆ

Team Udayavani, Jan 26, 2020, 12:56 AM IST

niswarta-sadaka

ಹೊಸದಿಲ್ಲಿ: ಚಂಡೀಗಡದ ಪಿಜಿಐ ಆಸ್ಪತ್ರೆಯ ಹೊರಗೆ, ಹಸಿದು ಬಂದ ರೋಗಿಗಳು, ಅವರ ಸಂಬಂಧಿಗಳಿಗೆ ಉಚಿತವಾಗಿ ಅನ್ನದಾನ ಮಾಡುವ ಜಗದೀಶ್‌ ಲಾಲ್‌ ಅಹುಜಾ…

25 ಸಾವಿರದಷ್ಟು ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿ ಧನ್ಯರೆನಿಸಿದ ಫೈಜಾಬಾದ್‌ನ ಮೊಹಮ್ಮದ್‌ ಶರೀಫ್…

ಮಹಾರಾಷ್ಟ್ರದ ಬರಪೀಡಿತ ಹಿವಾರೆ ಬಜಾರ್‌ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸಿ ಕುಡಿಯುವ ನೀರಿನ ಸಮಸ್ಯೆಗೆ ಅಂತ್ಯಹಾಡಿದ ಪೋಪಾrರಾವ್‌ ಪವಾರ್‌…

ಹೀಗೆ ಅನ್ನದಾತನಿಂದ ಹಿಡಿದು ಅಕ್ಷರದಾತನವರೆಗೆ, ವೈದ್ಯರಿಂದ ಹಿಡಿದು ಭಜನೆಗಾಯಕನವರೆಗೆ ಒಟ್ಟು 118 ಮಂದಿ ಎಲೆಮರೆಯ ಕಾಯಿಗಳ ಮುಡಿಗೆ ಈ ಬಾರಿಯ “ಪದ್ಮ’ ಪ್ರಶಸ್ತಿಯ ಗೌರವ ಸಂದಿದೆ. ಕಳೆದ ವರ್ಷವೂ ಕೇಂದ್ರ ಸರಕಾರವು ಇದೇ ರೀತಿ ನಿಸ್ವಾರ್ಥ ಸೇವೆಗೆ ಹೆಸರಾದ ಸಾಧಕರಿಗೆ ಪದ್ಮ ಗೌರವ ನೀಡಿತ್ತು.

ಶನಿವಾರ ಕೇಂದ್ರ ಸರಕಾರವು ಪದ್ಮ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, 7 ಮಂದಿ ಸಾಧಕರಿಗೆ ಪದ್ಮ ವಿಭೂಷಣ, 16 ಮಂದಿಗೆ ಪದ್ಮಭೂಷಣ ಹಾಗೂ 118 ಮಂದಿಗೆ ಪದ್ಮಶ್ರೀ ಗೌರವವನ್ನು ಘೋಷಿಸಿದೆ.

ಸೇವೆಗೆ ಸಂದ ಹಿರಿಮೆ: ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ನಿಟ್ಟಿನಲ್ಲಿ ಮೌನವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನೇ ಪದ್ಮ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಅಸ್ಸಾಂನ ಆನೆಗಳ ವೈದ್ಯ ಕುಶಾಲ್‌ ಕೊನ್ವಾರ್‌ ಸರ್ಮಾ, ಜಮ್ಮು-ಕಾಶ್ಮೀರದಲ್ಲಿ ದಿವ್ಯಾಂಗ ಮಕ್ಕಳ ಸೇವೆಯಲ್ಲಿ ತೊಡಗಿರುವ ಸ್ವತಃ ದಿವ್ಯಾಂಗರಾಗಿರುವ ಸಮಾಜ ಸೇವಕ ಜಾವೇದ್‌ ಅಹ್ಮದ್‌ ತಕ್‌, ಕಳೆದ 4 ದಶಕಗಳಿಂದ ಈಶಾನ್ಯ ರಾಜ್ಯಗಳ ಕುಗ್ರಾಮಗಳಲ್ಲಿ ಶಿಕ್ಷಣ ಹಾಗೂ ಓದುವ ಅಭ್ಯಾಸವನ್ನು ಉತ್ತೇಜಿಸುತ್ತಿರುವ ಅರುಣಾಚಲ ಪ್ರದೇಶದ ಸತ್ಯನಾರಾಯಣ ಮುಂಡಾಯೂರ್‌(ಅಂಕಲ್‌ ಮೂಸಾ) ಅವರಿಗೆ ಪದ್ಮ ಪ್ರಶಸ್ತಿ ಸಂದಿದೆ.

ಭೋಪಾಲ್‌ ಅನಿಲ ದುರಂತದ ಸಂತ್ರಸ್ತರಿಗಾಗಿ ಹೋರಾಡಿದ ಅಬ್ದುಲ್‌ ಜಬ್ಟಾರ್‌ರಿಗೆ ಮರಣೋತ್ತರವಾಗಿ ಪದ್ಮಶ್ರೀ ನೀಡಲಾಗಿದೆ. ರಾಜಸ್ಥಾನದ ದಲಿತ ಸಮಾಜ ಸೇವಕಿ ಉಷಾ ಚೌಮಾರ್‌, ಮೇಘಾಲಯದಲ್ಲಿ ಅರಶಿನ ಕೃಷಿ ಕ್ರಾಂತಿ ಮಾಡಿರುವ ರೈತ ಟ್ರಿನಿಟಿ ಸಾಯೂ, ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಚೆನ್ನೈನ ವೈದ್ಯ ರವಿ ಕಣ್ಣನ್‌, ರಾಜಸ್ಥಾನದ ಮುಸ್ಲಿಂ ಭಜನೆ ಗಾಯಕ ಮುನ್ನಾ ಮಾಸ್ಟರ್‌, ಉತ್ತರಾಖಂಡದ 81 ವರ್ಷದ ವೈದ್ಯ ಯೋಗಿ ಆರೆನ್‌ ಸೇರಿದಂತೆ ಅನೇಕ ಸಾಧಕರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

6 ಯೋಧರಿಗೆ ಶೌರ್ಯ ಚಕ್ರ
ಉಗ್ರ ನಿಗ್ರಹ ಹಾಗೂ ಬಂಡುಕೋರ ನಿಗ್ರಹ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದ 6 ಮಂದಿ ಯೋಧರಿಗೆ ಶೌರ್ಯ ಚಕ್ರ ಘೋಷಿಸಲಾಗಿದೆ. ಈ ಪೈಕಿ ನಾಯ್ಕ ಸುಬೇರಾದ್‌ ಸೊಂಬೀರ್‌ ಅವರಿಗೆ ಮರಣೋತ್ತರವಾಗಿ ಈ ಗೌರವ ಪಡೆಯಲಿದ್ದಾರೆ. ಇವರು ಕಳೆದ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ ವೇಳೆ ಹುತಾತ್ಮರಾಗಿದ್ದಾರೆ. ಉಳಿದಂತೆ, ಲೆ.ಕ. ಜ್ಯೋತಿ ಲಾಮಾ, ಮೇಜರ್‌ ಕೊಂಜೆಂಗ್‌ಭಾಮ್‌ ಬಿಜೇಂದ್ರ ಸಿಂಗ್‌, ಸುಬೇದಾರ್‌ ನರೇಂದ್ರ ಸಿಂಗ್‌ ಮತ್ತು ನಾಯ್ಕ ನರೇಶ್‌ ಕುಮಾರ್‌ ಅವರೇ ಶೌರ್ಯ ಚಕ್ರ ಪುರಸ್ಕೃತರು.

ಲೆ.ಜ. ಧಿಲ್ಲಾನ್‌ಗೆ ಗೌರವ: ಇದೇ ವೇಳೆ, ಸೇನೆಯ ಶ್ರೀನಗರ ಮೂಲದ 15 ಕಾರ್ಪ್‌Õ ಕಮಾಂಡರ್‌ ಲೆ.ಜ. ಕೆ.ಜೆ.ಎಸ್‌.ಧಿಲ್ಲಾನ್‌ ಅವರಿಗೆ ಉತ್ತಮ ಯುದ್ಧ ಸೇವಾ ಮೆಡಲ್‌ ಘೋಷಿಸಲಾಗಿದೆ. 370ನೇ ವಿಧಿ ರದ್ದು ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಕೈಗೊಂಡ ಗಣನೀಯ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.

ಜಾರ್ಖಂಡ್‌ನ‌ಲ್ಲಿ ನಕ್ಸಲ್‌ನ ಪ್ರಮುಖ ಕಮಾಂಡರ್‌ ಸಹದೇವ್‌ ರಾಯ್‌ ಅಲಿಯಾಸ್‌ ತಾಲಾ ಡಾನನ್ನು ಹತ್ಯೆಗೈಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ನಾಲ್ವರು ಸಿಬ್ಬಂದಿಗೆ ಪೊಲೀಸ್‌ ಶೌರ್ಯ ಪದಕ ನೀಡಲಾಗಿದೆ.

ಟಾಪ್ ನ್ಯೂಸ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

2

Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.