ಜೈನಧರ್ಮದಲ್ಲಿ ತ್ಯಾಗಕ್ಕೆ ಪ್ರಾಧಾನ್ಯತೆ: ಜೈನಮುನಿ
Team Udayavani, Jan 26, 2020, 10:27 AM IST
ಹುಬ್ಬಳ್ಳಿ: ಜೈನ ಧರ್ಮದಲ್ಲಿ ತ್ಯಾಗಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ತ್ಯಾಗದ ಮಹತ್ವವನ್ನು ಜಗತ್ತಿಗೆ ತಿಳಿಸಿದ್ದೇ ನಮ್ಮ ಧರ್ಮ ಎಂದು ಆಚಾರ್ಯ ಶ್ರೀ ಮಹಾಶ್ರಮಣಜಿ ಮಹಾರಾಜ್ ಹೇಳಿದರು.
ಸಂಸ್ಕಾರ ನಗರದಲ್ಲಿ ನಡೆಯುತ್ತಿರುವ ಮರ್ಯಾದಾ ಮಹೋತ್ಸವದಲ್ಲಿ ಶನಿವಾರ ಜರುಗಿದ ಸಂತರ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭೋಗವಿಲ್ಲದ ಸಂದರ್ಭದಲ್ಲಿ ತ್ಯಾಗ ಮಾರ್ಗದಲ್ಲಿ ಸಾಗುವವನು ತ್ಯಾಗಿಯಲ್ಲ. ಭೋಗವಿದ್ದರೂ ಅದನ್ನು ಅನುಭವಿಸದೇ ತಿರಸ್ಕರಿಸುವವನೇ ನಿಜವಾದ ತ್ಯಾಗಿ ಎಂದರು.
ತ್ಯಾಗಕ್ಕೆ ಸಮಾನವಾದುದು ಮತ್ತೂಂದಿಲ್ಲ. ಜೀವನದಲ್ಲಿ ಶಾಂತಿ-ಸಮಾಧಾನ ಪಡೆಯಲು ತ್ಯಾಗ ಸಹಾಯಕವಾಗುತ್ತದೆ. ಅಹಿಂಸಾ ಪರಮೋಧರ್ಮ. ಹಿಂಸೆಯನ್ನು ತ್ಯಾಗ ಮಾಡಬೇಕು. ಸಣ್ಣ ಕ್ರಿಮಿ ಕೀಟಗಳ ಬಗ್ಗೆಯೂ ಪ್ರೀತಿ ಹೊಂದಿರಬೇಕು. ಎಲ್ಲ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು ಎಂಬುದನ್ನೇ ಜೈನ ಧರ್ಮ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.
ಜೀವನದಲ್ಲಿ ಶ್ರೇಷ್ಠ ದಾನ ಅಭಯದಾನ. ಮಿಥ್ಯೆಯನ್ನು ತ್ಯಾಗ ಮಾಡಬೇಕು. ರಾತ್ರಿ ಭೋಜನವನ್ನು ತ್ಯಾಗ ಮಾಡಬೇಕು. ಕಟು ಭಾಷೆ, ಹಿಂಸಾ ಭಾಷೆಯನ್ನು ತ್ಯಾಗ ಮಾಡಬೇಕು. ತ್ಯಾಗಮಯ ಜೀವನವನ್ನು ರೂಪಿಸಿಕೊಳ್ಳಬೇಕು. ಸಂಯಮ ಎಂಬುದು ರತ್ನಕ್ಕೆ ಸಮ. ಅದಕ್ಕೆ ಸಮನಾದುದು ಯಾವುದೂ ಇಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ಮಾಡಲಿ: ವರೂರು ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜ ಮಾತನಾಡಿ, ಆಚಾರ್ಯ ಮಹಾಶ್ರಮಣ ಮಹಾರಾಜರು ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ಮಾಡಬೇಕು. ಇಲ್ಲಿನ ಭಕ್ತರು ಅವರಿಗೆ ಚಾತುರ್ಮಾಸ್ಯದ ಎಲ್ಲ ವ್ಯವಸ್ಥೆ ಮಾಡಿಕೊಡಲು ಶಕ್ತರಾಗಿದ್ದಾರೆ. ಧರ್ಮದ ಎಲ್ಲ ಜನರ ಪರವಾಗಿ ನಾನು ಅವರಲ್ಲಿ ಮನವಿ ಮಾಡುತ್ತೇನೆ ಎಂದರು. ತ್ಯಾಗಕ್ಕೂ ಜೈನ ಧರ್ಮಕ್ಕೂ ಅನ್ಯೋನ್ಯ ಸಂಬಂಧವಿದೆ. ಬೆಣ್ಣೆಯಲ್ಲಿರುವ ತುಪ್ಪದಂತೆ ಜೈನಧರ್ಮದಲ್ಲಿ ತ್ಯಾಗ ಅಡಕವಾಗಿದೆ. ನಮ್ಮಲ್ಲಿರುವ ಇಚ್ಛೆಗಳನ್ನು ತ್ಯಾಗ ಮಾಡುವುದು ಸಾಧನೆಗೆ ಪೂರಕವಾಗುತ್ತದೆ. ಅಂತರಂಗ ತ್ಯಾಗ ಹಾಗೂ ಬಹಿರಂಗ ತ್ಯಾಗ ಎರಡೂ ಮುಖ್ಯ ಎಂದು ನುಡಿದರು.
ಆಚಾರ್ಯ ಶ್ರೀ ಅಜಿತ ಶೇಖರ ಸುರೀಶ್ವರಜಿ ಮಾತನಾಡಿ, ತ್ಯಾಗದಲ್ಲಿ ಎರಡು ಬಗೆ. ಸಂಸಾರ ತ್ಯಾಗ ಹಾಗೂ ಪರಮಾರ್ಥ ತ್ಯಾಗ. ಸಂಸಾರ ತ್ಯಾಗದಲ್ಲಿ ಸಂತೋಷ, ರಂಜನೆಯನ್ನು ತ್ಯಾಗ ಮಾಡುವುದು ಉಪಭೋಗ. ಪರಿವಾರವನ್ನು ತ್ಯಾಗ ಮಾಡುವುದು ಪರಿಭೋಗ. ಸಮಾಜಕ್ಕಾಗಿ ತ್ಯಾಗ ಮಾಡುವುದು ಉಪಯೋಗವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಮೂರುಜನ ಆಚಾರ್ಯರು ತ್ಯಾಗದ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದಾರೆ. ಆಚಾರ್ಯರ ಸಂದೇಶಗಳು ಎಲ್ಲರಿಗೆ ಮುಟ್ಟಿದಾಗ ನಮ್ಮ ದೇಶ ಶಾಂತಿ- ಸೌಹಾರ್ದತೆಯ ದೇಶವಾಗುತ್ತದೆ ಎಂದು ನುಡಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿದರು. ಮಹೇಂದ್ರ ಸಿಂಘಿ, ಪುಖರಾಜ ಸಂಘವಿ, ಮಹಾವೀರ ಕುಂದೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.