ವೀರಭದ್ರೇಶ್ವರ ಜಾತ್ರಾ ಮಹೋತ್ಸವ ವೈಭವ
ಅಗ್ನಿ ಕುಂಡಕ್ಕೆ ನೀರೆರೆದು-ನೈವೇದ್ಯ ಅರ್ಪಿಸಿದ ಮಹಿಳೆಯರು ಹುಮನಾಬಾದನಲ್ಲಿ ಹಬ್ಬದ ವಾತಾವರಣ
Team Udayavani, Jan 26, 2020, 11:53 AM IST
ಹುಮನಾಬಾದ: ಪಟ್ಟಣದ ಕುಲದೇವ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಪಟ್ಟಣ ಸುಂದರವಾಗಿ ಅಲಂಕಾರಗೊಂಡು ನೋಡುಗರ ಗಮನ ಸೆಳೆಯುತ್ತಿದೆ. ಹೈದ್ರಾಬಾದ ಕರ್ನಾಟಕ ಭಾಗದ ಪ್ರಮುಖ ಜಾತ್ರೆಯೆಂದು ಖ್ಯಾತಿ ಪಡೆದ ಹುಮನಾಬಾದ ಪಟ್ಟಣದ ವೀರಭದ್ರೇಶ್ವರ ಜಾತ್ರೆಯು ಜ. 14ರಿಂದ ಆರಂಭಗೊಂಡು ಜ.27ರ ವರೆಗೆ ಸತತವಾಗಿ ನಡೆಯುತ್ತದೆ. ಆ. 24ರಂದು ರಾತ್ರಿ ನಡೆದ ಕಾಶಿ ಮೆರವಣಿಗೆ ಭಕ್ತರಲ್ಲಿ ಭಕ್ತಿ-ಭಾವ ಮೂಸಿತು. ಕಾಶಿ ಮೆರವಣಿಗೆ ದೇವಸ್ಥಾನದಿಂದ ರವಿವಾರ
ಮಧ್ಯರಾತ್ರಿ ಹೊರಟು, ಪಟ್ಟಣದ ಪ್ರಮುಖ ಬೀದಿಗಳ ಮೂಲ ಸಂಚರಿಸಿ ಶನಿವಾರ ಬೆಳಗ್ಗೆ ಮರಳಿ ದೇವಸ್ಥಾನಕ್ಕೆ ತಲುಪಿತು.
ಶನಿವಾರ ಬೆಳಗಿನ ಜಾವದಿಂದ ಪಟ್ಟಣದ ಮಹಿಳೆಯರು ಅಗ್ನಿ ಕುಂಡಕ್ಕೆ ತೆರಳಿ ಅಗ್ನಿ ಕುಂಡಕ್ಕೆ ನೀರು ಎರೆದು, ನೈವೇದ್ಯ ಅರ್ಪಿಸಿದರು. ಮಧ್ಯಾಹ್ನದ ವರೆಗೆ ಸಾವಿರಾರು ಮಹಿಳೆಯರು ಅಗ್ನಿ ಕುಂಡದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ದೇವಸ್ಥಾನದಿಂದ ಹೊರಟ ರಥೋತ್ಸವದ ಕಳಸ ತೇರು ಮೈದಾನಕ್ಕೆ ತಲುಪಿ ರಥಕ್ಕೆ ಕಳಸ ಅಳವಡಿಸಲಾಯಿತು.
ವಾಹನ ನಿಲುಗಡೆ: ಜಾತ್ರೆಗೆ ಆಗಮಿಸುವ ಭಕ್ತಾದಿಗಳ ವಾಹನಗಳಿಗೆ ವಿಶೇಷ ವಾಹನ ನಿಲುಗಡೆ ಸ್ಥಳಗಳನ್ನು ನಿರ್ಮಿಸಲಾಗಿದೆ. ಬೀದರ್ ಹಾಗೂ ಕಲಬುರಗಿ ಕಡೆಯಿಂದ ಬರುವ ಭಕ್ತರು ಪಟ್ಟಣದ ಪ್ರವಾಸಿ ಮಂದಿರ ಹಾಗೂ ಮಿನಿ ವಿಧಾನ ಸೌಧ ಹತ್ತಿರ ವಾಹನ ನಿಲುಗಡೆ ತಾಣವಿದೆ. ಹೈದ್ರಾಬಾದ್ ಕಡೆಯಿಂದ ಬರುವ ಭಕ್ತರಿಗೆ ರಾಮ ಮತ್ತು ರಾಜ ಕಾಲೇಜಿನ ಪ್ರಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಹಾಗೂ ಕಲ್ಲೂರ ಕಡೆಯಿಂದ ಬರುವ ಭಕ್ತರಿಗೆ ಈದ್ಗಾ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ದಿನಗಳ ಕಾಲ ಯಾವುದೇ ವಾಹನಗಳು ಪಟ್ಟಣದಲ್ಲಿ ಸಂಚರಿಸುವಂತಿಲ್ಲ.
ಈ ಹಿನ್ನೆಲೆಯಲ್ಲಿ ಭಕ್ತರು ಸುಮಾರು 1.5 ಕಿ.ಮೀ. ದೂರದ ವರೆಗೆ ನಡೆದುಕೊಂಡು
ಹೋಗಲೆಬೇಕಾದ ಅನಿವಾರ್ಯತೆ ಇದೆ. ಬಿಗಿ ಪೊಲಿಸ್ ಬಂದೋಬಸ್ತ್: ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಜಿಲ್ಲಾ ಪೊಲೀಸ್ ಅ ಧಿಕಾರಿಗಳು ಅನೇಕ ಮಾರ್ಗ ಸೂಚಿಗಳು ತಯಾರಿಸಿ, ಕಾರ್ಯ ಪ್ರವೃತ್ತರಾಗಿದ್ದಾರೆ. ದೇವಸ್ಥಾನ ಹತ್ತಿರ, ನಾಟಕ ಕಂಪನಿಗಳ ಹತ್ತಿರ, ಬಸವೇಶ್ವರ ವೃತ್ತ, ಸರದಾರ ಪಟೇಲ್ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಅಗ್ನಿ ಕುಂಡದ ಹತ್ತಿರ ಎತ್ತರದ ಟವರ್‌ಗಳನ್ನು ನಿರ್ಮಿಸಿ ವಿಡಿಯೋ ಕ್ಯಾಮರಾ ಅಳವಡಿಸಲಾಗಿದೆ. ಕಳ್ಳರ ಮೇಲೆ ಹೆಚ್ಚು ನಿಗಾ ವಹಿಸಲು ವಿಶೇಷ ಪೊಲೀಸರನ್ನು ನೇಮಿಸಲಾಗಿದೆ.
ಪುರಸಭೆಯಿಂದ ವಿಶೇಷ ವ್ಯವಸ್ಥೆ: ಜಾತ್ರೆಗೆ ಹರಿದು ಬರುವ ಲಕ್ಷಾಂತರ ಜನರಿಗೆ ಸ್ಥಳೀಯ
ಪುರಸಭೆ ವತಿಯಿಂದ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ದೇವಸ್ಥಾನದಿಂದ ತೇರು ಮೈದಾನದ ವರೆಗೆ ಕುಡಿಯುವ ನೀರಿನ ವ್ಯವಸ್ಥೆ. ತೇರು ಮೈದಾನ ಹಾಗೂ ಬಸವೇಶ್ವರ ವೃತ್ತದಲ್ಲಿ ಮೂಬೈಲ್ ಶೌಚಾಲಯಗಳ ಅಳವಡಿಸಲಾಗಿದೆ. ಜಾತ್ರೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚು ಸಿಂಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.
ದಾಸೋಹ ವ್ಯವಸ್ಥೆ: ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ವಿವಿಧೆಡೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನ ಹಿಂಭಾಗದಲ್ಲಿ, ಜೈನಗಲ್ಲಿ, ಬಾಲಾಜಿ ವೃತ್ತ, ಪ್ರವಾಸಿ ಮಂದಿರದ ಹತ್ತಿರ, ಬಸ್ ನಿಲ್ದಾಣ ಎದುರಿಗೆ, ಎನ್‌ಎಚ್-9 ಕಚೇರಿ ಹತ್ತಿರ, ಜೂನಿಯರ್ ಕಾಲೇಜು ಹತ್ತಿರ್, ಹಳೆ ಅಡತ್ ಬಜಾರ್, ಪಂಚಾಯತ ರಾಜ್ ಇಲಾಖೆ, ಎಪಿಎಂಸಿ ಪ್ರಾಂಗಣ, ಚಿದ್ರಿ ಕಾಂಪ್ಲೆಕ್ಸ್, ಅರಣ್ಯ ಇಲಾಖೆ, ತಾಲೂಕು ಪಂಚಾಯತ ಸೇರಿದಂತೆ ವಿವಿಧೆಡೆ ದಾಸೋಹ ಹಾಗೂ ಚಹಾ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ.
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.