ತೊಗರಿ ಖರೀದಿಗೆ ಮಿತಿ; ಬೆಳೆಗಾರರಿಗೆ ಸಮಸ್ಯೆ
ಖರೀದಿ ಕೇಂದ್ರದಲ್ಲಿ 10 ಕ್ವಿಂಟಲ್‌ಗೆ ನಿಗದಿ ಮುಕ್ತ ಮಾರುಕಟ್ಟೆಯಲ್ಲಿಲ್ಲ ಉತ್ತಮ ಬೆಲೆ
Team Udayavani, Jan 26, 2020, 12:08 PM IST
ರಾಯಚೂರು: ರೈತರ ಅನುಕೂಲಕ್ಕಾಗಿ ಆರಂಭಿಸಿದ ತೊಗರಿ ಖರೀದಿ ಕೇಂದ್ರಗಳು ಮಧ್ಯಮ ವರ್ಗದ ಕೃಷಿಕರಿಗೆ ಮಾತ್ರ ಅಷ್ಟೇನು ಲಾಭ ತರುತ್ತಿಲ್ಲ. ಒಂದು ಪಹಣಿಗೆ ಕೇವಲ 10 ಕ್ವಿಂಟಲ್ ಮಾತ್ರ ಖರೀದಿಸುವ ನಿಯಮದಿಂದ ಹೆಚ್ಚು ತೊಗರಿ ಬೆಳೆದವರು ಸಮಸ್ಯೆ ಎದುರಿಸುವಂತಾಗಿದೆ.
ಜಿಲ್ಲೆಯಲ್ಲಿ ಈ ಬಾರಿ 31 ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದಿಂದ 5800, ರಾಜ್ಯ ಸರ್ಕಾರದ 300 ಸಹಾಯಧನ ಸೇರಿಸಿ ಕ್ವಿಂಟಲ್‌ಗೆ 6100 ರೂ. ಬೆಲೆ ನಿಗದಿ ಮಾಡಲಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ 3 ಸಾವಿರ ರೂ.ದಿಂದ 5 ಸಾವಿರ ರೂ.ಗೆ
ಖರೀದಿಸಲಾಗುತ್ತಿದೆ. ಇದರಿಂದ ರೈತರು ಪ್ರತಿ ಕ್ವಿಂಟಲ್‌ಗೆ 1,100ರಿಂದ 2 ಸಾವಿರ ರೂ. ನಷ್ಟ ಎದುರಿಸುವಂತಾಗಿದೆ. ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ತೊಗರಿ ಬೆಳೆ ಪ್ರಧಾನವಾಗಿದೆ. ಅದರಲ್ಲೂ ಕಲಬುರಗಿ ತೊಗರಿ ಖಣಜವಾದರೆ,
ರಾಯಚೂರು, ಯಾದಗಿರಿಯಲ್ಲೂ ದೊಡ್ಡ ಪ್ರಮಾಣದಲ್ಲೇ ಬೆಳೆಯಲಾಗುತ್ತಿದೆ.
ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ, ಹಿಂಗಾರು ಕೈ ಹಿಡಿದಿದೆ. ಜಿಲ್ಲೆಯಲ್ಲಿ 47,521 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿಯಿದ್ದರೆ, 62,666 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅಂದರೆ ನಿರೀಕ್ಷೆಗಿಂತ ಶೇ.31ರಷ್ಟು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಉತ್ತಮ ಇಳುವರಿ: ಕಳೆದ ವರ್ಷ ಭೀಕರ ಬರದಿಂದ ರೈತರು ಸಂಪೂರ್ಣ ನಷ್ಟಕ್ಕೀಡಾಗಿದ್ದರು. ಎಕರೆಗೆ ಒಂದು ಕ್ವಿಂಟಲ್ ಕೂಡ ಇಳುವರಿ ಬಂದಿರಲಿಲ್ಲ. ಈ ಬಾರಿ ಮುಂಗಾರು ಮಳೆ ಕೊನೆಯಲ್ಲಿ ಕೈ ಹಿಡಿಯಿತು. ಹಿಂಗಾರು ಮಳೆ ಬೆಳೆಗೆ ಆಸರೆಯಾಯಿತು. ಇದರಿಂದ ಎಕರೆಗೆ
4-6 ಕ್ವಿಂಟಲ್‌ವರೆಗೂ ಇಳುವರಿ ಬಂದಿದೆ. ಇನ್ನೂ ನೀರು ಕಟ್ಟಿದ ರೈತರಿಗೆ 10-12 ಕ್ವಿಂಟಲ್ ಬೆಳೆ ದಕ್ಕಿದೆ. 4-5 ಎಕರೆ ಹೊಂದಿದ ಮಧ್ಯಮ ವರ್ಗದ ರೈತರೇ 25-30 ಕ್ವಿಂಟಲ್ ತೊಗರಿ ಬೆಳೆದಿದ್ದಾರೆ. ಸರ್ಕಾರ ಮಾತ್ರ ಕೇವಲ 10 ಕ್ವಿಂಟಲ್ ಖರೀದಿಸುತ್ತಿರುವುದು ಸಮಸ್ಯೆ ತಂದೊಡ್ಡಿದೆ.
ಸಾವಿರಾರು ರೂ. ನಷ್ಟ: ಈಗ ಮಾರುಕಟ್ಟಗೆ ತೊಗರಿ ಬೆಳೆ ದಾಂಗುಡಿ ಇಡುತ್ತಿದೆ. ಇಲ್ಲಿನ ರಾಜೇಂದ್ರ ಗಂಜ್‌ಗೆ ನಿತ್ಯ 8-11 ಸಾವಿರ ಕ್ವಿಂಟಲ್‌ವರೆಗೂ ತೊಗರಿ ಆವಕವಾಗುತ್ತಿದೆ. ಗುರುವಾರ 8,485 ಕ್ವಿಂಟಲ್ ಬಂದಿದೆ. ಕಳೆದ ನಾಲ್ಕೆ çದು ದಿನಗಳಿಂದ ಬೆಲೆ ಮಾತ್ರ 3 ಸಾವಿರದಿಂದ 5,100 ಆಸುಪಾಸು ಇದೆ. ಅಂದರೆ ಖರೀದಿ ಕೇಂದ್ರಕ್ಕಿಂತ ಒಂದು ಸಾವಿರ ರೂ. ಕಡಿಮೆ ಇದೆ. ಅಲ್ಲದೇ, ಕಾಳು ತುಸು ಟೊಳ್ಳಾದರೂ ವರ್ತಕರು ದರ ಕಡಿಮೆ ಮಾಡುತ್ತಾರೆ.
20 ಕ್ವಿಂಟಲ್ ಖರೀದಿಗೆ ಒತ್ತಾಯ: ಈ ಭಾಗದಲ್ಲಿ ಬಡ ರೈತರಿಗೂ 2-3 ಎಕರೆ
ಜಮೀನಿದೆ. ಮಧ್ಯಮ ವರ್ಗದವರಿಗೆ 5-10 ಎಕರೆ ಜಮೀನಿರುವುದು ಸಾಮಾನ್ಯ. ಹೀಗಾಗಿ ಸರ್ಕಾರ ಕನಿಷ್ಟ 20 ಕ್ವಿಂಟಲ್ ತೊಗರಿ ಖರೀದಿಗೆ ಮುಂದಾಗಬೇಕು. ಇದರಿಂದ ರೈತರಿಗೆ
ಆಗುವ ಅನ್ಯಾಯ ತಪ್ಪಲಿದೆ. ಅಲ್ಲದೇ 10 ಕ್ವಿಂಟಲ್ ಖರೀದಿ ಕೇಂದ್ರದಲ್ಲಿ ಉಳಿದ ತೊಗರಿಯನ್ನು ಎಪಿಎಂಸಿಗೆ ತೆಗೆದುಕೊಂಡು ಹೋಗುವ ತಾಪತ್ರಯ ತಪ್ಪಲಿದೆ. ಸಾಕಷ್ಟು ರೈತರು ಈ ಜಂಜಾಟವೇ ಬೇಡ. ಹೇಗಿದ್ದರೂ ಸರ್ಕಾರದಿಂದ ಹಣ ಸಂದಾಯವಾಗುವುದು
ತಡವಾಗುವುದರಿಂದ ಮುಕ್ತ ಮಾರುಕಟ್ಟೆಯಲ್ಲೇ ಮಾರುವುದು ಸೂಕ್ತ ಎಂಬ ನಿಲುವಿಗೆ ಬರುತ್ತಿದ್ದಾರೆ.
ಈ ಬಾರಿ ತೊಗರಿ ಇಳುವರಿ ಚೆನ್ನಾಗಿ ಬಂದಿದೆ. ಸಣ್ಣ ಪುಟ್ಟ ರೈತರೇ 20-30 ಕ್ವಿಂಟಲ್ ಬೆಳೆದಿದ್ದಾರೆ. ಆದರೆ, ಖರೀದಿ ಕೇಂದ್ರದಲ್ಲಿ ಕೇವಲ 10 ಕ್ವಿಂಟಲ್ ಖರೀದಿಸಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲ. ಸರ್ಕಾರವೇ 20 ಪ್ರತಿ ರೈತನಿಂದ 20 ಕ್ವಿಂಟಲ್ ಖರೀದಿಸಬೇಕು. ಈ ಕುರಿತು ಈಗಾಗಲೇ ಉಸ್ತುವಾರಿ ಸಚಿವರಿಗೂ ಮನವಿ ನೀಡಲಾಗಿತ್ತು. ಆದರೆ, ಪ್ರಯೋಜನವಾಗಿಲ್ಲ.
ಲಕ್ಷ್ಮಣಗೌಡ ಕಡಗಂದೊಡ್ಡಿ,
ರೈತ ಸಂಘದ ಜಿಲ್ಲಾಧ್ಯಕ್ಷ
ಸಿದ್ಧಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.