ಜನಪದ ಗೀತೆಗಳ ಬೀದಿ ನಾಟಕ ಪ್ರದರ್ಶನ
Team Udayavani, Jan 26, 2020, 4:10 PM IST
ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಕೆಂಚಾಯಿಕೊಪ್ಪ ತಾಂಡಾದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಜನಪದ ಗೀತೆಗಳು’ ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಸರಕಾರದ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕನ್ನಡತಿ ಕಲಾ ತಂಡದ ಲಲಿತಾ ಪಾಟೀಲ ನಾಟಕ ಪ್ರದರ್ಶನ, ದುರ್ಗಾದೇವಿ ಸಂಸ್ಕೃತ ಜನಪದ ಕಲಾ ತಂಡದ ರೇಣುಕಾ ಛಲವಾದಿ ತಂಡದವರು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಿಗುವ ಪ್ರಯೋಜನಗಳಾದ ಕೃಷಿ ಕ್ಷೇತ್ರಕ್ಕೆ ಸಂಬಂ ಧಿಸಿದ ಬಗ್ಗೆ ಸಹಾಯಧನ ಹಾಗೂ ನೆರೆ ಸಂತ್ರಸ್ಥರಿಗೆ ಸಿಗುವ ಸೌಲಭ್ಯ, ನೇಕಾರರು ಹಾಗೂ ಮೀನುಗಾರರ ಸಾಲಮನ್ನಾ, ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಪಿಡಿಒ ಶೃತಿ ಕೆ.ಎನ್. ಮಾತನಾಡಿ, ಸರಕಾರದ ಯೋಜನೆಗಳು ಯಾವ ರೀತಿಯಾಗಿ ಸಾರ್ವಜನಿಕರು ಬಳಸಿಕೊಳ್ಳಬೇಕು ಹಾಗೂ ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ನಿತ್ಯ ಉಪಯೋಗಕ್ಕೆ ಬಳಸುವ ನೀರು, ಸ್ವತ್ಛತೆ ರೈತರಿಗೆ ಸಿಗುವಂತಹ ಕೃಷಿ ಇಲಾಖೆಯ ಪ್ರಯೋಜನಗಳು ಬೆಳೆ ಹಾನಿ, ಮಳೆ ಬಂದು ಮನೆ ಹಾಳಾಗಿರುವುದರ ಬಗ್ಗೆ ಸಾರ್ವಜನಿಕರು ಯಾವ ರೀತಿಯಾಗಿ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಗೆ ತಲುಪಿಸಬೇಕು ಎಂದು ಕಲಾ ತಂಡಗಳು ಅತ್ಯಂತ ಸರಳವಾಗಿ ತಿಳಿಸಿಕೊಟಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗ್ರಾಪಂ ಅಧ್ಯಕ್ಷ ಬಸವಣ್ಣೆಪ್ಪ ಪಾಳೆದ, ಗ್ರಾಪಂ ಉಪಾಧ್ಯಕ್ಷೆ ರೇಣುಕಾಬಾಯಿ ಲಮಾಣಿ, ಶಿವಾನಂದ ದೇವಾಂಗದ, ಕುಮಾರ ಬಾಳೆಕೊಪ್ಪ, ಪರಮೇಶ ಚಪ್ಪರದಳ್ಳಿ, ರಾಮಪ್ಪ ಹರಿಜನ, ಪ್ರಕಾಶ ಹರಿಜನ, ರವಿ ಕಾಯ್ಕದ, ವಸಂತ ಪಾಳೆದ, ನಿಂಗನಗೌಡ ಬೆಳ್ಳೂರ, ರುದ್ರಗೌಡ ಬೆಳ್ಳೂರ, ಮುಖ್ಯ ಶಿಕ್ಷಕ ರವೀಂದ್ರ ಕೊಡಮಗ್ಗಿ, ಗ್ರಾಮಸ್ಥರಾದ ರವಿ ಲಮಾಣಿ, ಫಕೀರನಾಯಕ ಲಮಾಣಿ, ಫಕೀರಪ್ಪ ಲಮಾಣಿ, ಸೋಮಾನಾಯಕ್ ಲಮಾಣಿ, ಗದಗಿಬಾಯಿ ಲಮಾಣಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.