ಎರೆ ಮನೆ


Team Udayavani, Jan 27, 2020, 6:04 AM IST

yeremane

ಮಳೆಗಾಲದಲ್ಲಿ ಮಣ್ಣಿನಲ್ಲಿ ಹೊರಳಾಡುವ ಎರೆಹುಳಗಳನ್ನು ಹೊರಕ್ಕೆಳೆದು ಅಂಗೈಯಲ್ಲಿ ಹಾಕಿಕೊಂಡು ತಿರುಗಿಸುತ್ತಾ ಖುಷಿಪಡುತ್ತಿದ್ದ ನೆನಪು ಅನೇಕರಲ್ಲಿದೆ. ಅದೇ ಎರೆಹುಳು ಸಾಕಣೆ ಮತ್ತು ಎರೆಹುಳು ಗೊಬ್ಬರದ ಬ್ರ್ಯಾಂಡ್‌ ಸೃಷ್ಟಿಸಿ ಮಾರಾಟದ ಮೂಲಕ ಆದಾಯ ಗಳಿಕೆಯನ್ನು ಹೆಚ್ಚಿಸಿಕೊಂಡಿರುವ ರೈತ ಮಹಿಳೆಯೋರ್ವಳ ಯಶೋಗಾಥೆ ಇಲ್ಲಿದೆ.

ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಗಡಿ ಗ್ರಾಮ ಲಕ್ಷ್ಮೀಪುರ ಗೊಲ್ಲರ ಬಿಡಾರದ ರೈತ ಮಹಿಳೆ ನಾಗವೇಣಿ ಗೊಲ್ಲರ. ಶಾಲೆಯ ಮುಖವನ್ನೇ ನೋಡದ ಇವರು ಎರೆಹುಳು ಸಾಕಣೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಪತಿ ಬಾಬಣ್ಣರಿಗೆ ಎರೆಹುಳು ಸಾಕಣಿಕೆಯ ಬಗ್ಗೆ ಆಸಕ್ತಿ ಇದ್ದ ಕಾರಣ ಇವರೂ ಪತಿಯ ಜೊತೆ ಕೈಜೋಡಿಸಿದರು. ಬೇರೆಡೆಯಿಂದ 2 ಕೆ.ಜಿ. ಎರೆಹುಳುಗಳನ್ನು ತಂದು ಅವರೇ ಸಾಕಿದ್ದರು. ಈಗ ಅವರೇ ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಾರೆ.

ಹಲವೆಡೆ ಎಕ್ಸ್‌ಪೋರ್ಟ್‌: ಇಂದು, ಅವರು ತಯಾರಿಸುತ್ತಿರುವ ಎರೆಹುಳು ಗೊಬ್ಬರ, ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತಿದೆ. ಇವರು ತಯಾರಿಸುತ್ತಿರುವ ಎರೆಹುಳು ಗೊಬ್ಬರಕ್ಕೆ ಹೆಚ್ಚು ಬೇಡಿಕೆಯೂ ಇದೆ. ಕುಂದಾಪುರ, ಉಡುಪಿ, ಮಹಾರಾಷ್ಟ್ರ, ಶಿವಮೊಗ್ಗ, ಗಂಗಾವತಿ, ರಾಯಚೂರು, ದಾವಣಗೆರೆ , ಕಾರವಾರ, ಬೆಳಗಾವಿ, ಧಾರವಾಡ ಹೀಗೆ ನಾನಾ ಕಡೆಗಳಿಗೆ ನಾಗವೇಣಿಯವರು ತಯಾರಿಸಿದ ಎರೆ ಹುಳು ಗೊಬ್ಬರ ಸರಬರಾಜಾಗುತ್ತದೆ. ಖಾದಿ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸಹಾಯ ಧನ ಪಡೆದು ತಾವು ಕೈಯಿಂದ ಒಂದಷ್ಟು ಹಣ ಹೂಡಿ ಉದ್ಯಮ ಸ್ಥಾಪಿಸಿದ್ದಾರೆ ಈ ರೈತ ಮಹಿಳೆ. 39 ಅಡಿ ಉದ್ದ 27 ಅಡಿ ಅಗಲದ ಶೆಡ್‌ಅನ್ನು ನಿರ್ಮಿಸಿ ಅದರಲ್ಲಿ ಸುಮಾರು 10 ತೊಟ್ಟಿಗಳನ್ನು ನಿರ್ಮಿಸಿ ಗೊಬ್ಬರ ತಯಾರಿಸಲು ಪ್ರಾರಂಭಿಸಿದ್ದರು. ಬೇಡಿಕೆ ಹೆಚ್ಚಾದಾಗ ತಿಪ್ಪೆ ತೊಟ್ಟಿಯನ್ನು ನಿರ್ಮಿಸಿ ಅದರಲ್ಲಿಯೂ ಎರೆಹುಳುಗಳನ್ನು ಬಿಟ್ಟು ಗೊಬ್ಬರ ತಯಾರಿಕೆಯಲ್ಲಿ ತೊಡಗಿದರು.

ಸ್ವಂತ ಬ್ರ್ಯಾಂಡ್‌: ತಾವು ತಯಾರಿಸಿದ ಗೊಬ್ಬರವನ್ನು ತನ್ನ ಸ್ವಂತ ಹೊಲಕ್ಕೂ ಉಪಯೋಗಿಸುತ್ತಾರೆ. ಅಷ್ಟೇ ಅಲ್ಲ “ಸಂಜೀವಿನಿ ಎರೆ ಗೊಬ್ಬರ’ ಎಂಬ ಬ್ರ್ಯಾಂಡ್‌ ಪ್ರಾರಂಭಿಸಿದ್ದಾರೆ. ಅದರಡಿ 50 ಕೆ.ಜಿ ಚೀಲಕ್ಕೆ 450-500 ರೂ. ಮತ್ತು ಎರೆಹುಳುವನ್ನು ಒಂದು ಕೆ.ಜಿ.ಗೆ 300 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖರ್ಚೆಲ್ಲಾ ಕಳೆದು ವರ್ಷಕ್ಕೆ ಏನಿಲ್ಲವೆಂದರೂ 1ರಿಂದ 2 ಲಕ್ಷ ರೂ. ತನಕ ಲಾಭ ಗಳಿಸುತ್ತಾರೆ. ತನಗಿರುವ 5 ಎಕರೆ ಜಮೀನಿನಲ್ಲಿ ಭತ್ತ, ಅಡಕೆ, ಬಾಳೆ ಅಷ್ಟೇ ಅಲ್ಲದೇ ಹೈನುಗಾರಿಕೆಯಲ್ಲಿಯೂ ತೊಡಗಿದ್ದಾರೆ.

ಜರ್ಮನ್‌ ತಳಿಯ ಎರೆಹುಳು: ನಾಗವೇಣಿ ಗೊಲ್ಲರ, ಗೊಬ್ಬರದ ತೊಟ್ಟಿಗಳಿಗೆ ಹಸಿರೆಲೆಸೊಪ್ಪು, ಚದುರಂಗಸೊಪ್ಪು, ಗೊಬ್ಬರದಸೊಪ್ಪು ಬಿಳಿಹುಲ್ಲಿನಪುಡಿ ಸೇರಿದಂತೆ ಹಲವು ಬಗೆಯ ತ್ಯಾಜ್ಯ ವಸ್ತುಗಳನ್ನು ಹಾಕಿ ಕೊಳೆಯಲು ಬಿಟ್ಟು ನಂತರ ಎರೆಹುಳುಗಳನ್ನು ಬಿಡುತ್ತಾರೆ. ಶೇ. 50 ತೇವಾಂಶ ಇರುವಂತೆ ನೋಡಿಕೊಳ್ಳುತ್ತಾರೆ. ತೊಟ್ಟಿಗಳ ಮೇಲೆ ಬಿಸಿಲಿನ ಝಳ ಬೀಳದಂತೆ ಎಚ್ಚರವಹಿಸಿದ್ದಾರೆ. ತ್ಯಾಜ್ಯ ವಸ್ತುಗಳನ್ನೆಲ್ಲ ಹುಳುಗಳು ತಿಂದುಹಾಕಿ ಚಹಾ ಪುಡಿಯಂಥ ಎರೆಹುಳು ಗೊಬ್ಬರ ಸಿದ್ದವಾಗುತ್ತದೆ. ಯುಡ್ರಿಲೇಸ್‌ ಜರ್ಮನ್‌ ತಳಿ ಮತ್ತು ಐಸೇನೀಯಾ ಪೆಟಿಡಾ ಎರೆಹುಳುಗಳನ್ನು ಸಾಕುವುದರಿಂದ ಗೊಬ್ಬರ ಬೇಗ ಸಿದ್ಧವಾಗುತ್ತದೆ ಎನ್ನುವುದು ನಾಗವೇಣಿಯವರ ಅನುಭವದ ಮಾತು.

ಸಂಪರ್ಕ: 9972712106

ಚಿತ್ರ ಲೇಖನ: ಟಿ. ಶಿವಕುಮಾರ್‌

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.