![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 27, 2020, 5:02 AM IST
ಗುತ್ತಿಗಾರು: ಇಲ್ಲಿನ ಚತ್ರಪ್ಪಾಡಿ-ಕಮಿಲ ರಸ್ತೆ ತೀರಾ ಹದೆಗೆಟ್ಟಿದ್ದು, ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಚತ್ರಪ್ಪಾಡಿ ಗ್ರಾಮಸ್ಥರು ಬೋರ್ಡ್ ಅಳವಡಿಸಿ ಪ್ರತಿಭಟಿಸಿದ್ದಾರೆ.
ಗುತ್ತಿಗಾರಿನಿಂದ ಚತ್ರಪ್ಪಾಡಿ ಕಮಿಲ ಮಾರ್ಗವಾಗಿ ಹಾದುಹೋಗುವ ಈ ರಸ್ತೆ ಬಳ್ಪ, ಪಂಜ ಸಂಪರ್ಕಕ್ಕೆ ಈ ರಸ್ತೆ ಅಗತ್ಯವಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಪ್ರಯಾಣಿಕರು, ವಾಹನಗಳು ಸಂಚರಿಸುತ್ತವೆ. 7 ಕಿ.ಮೀ. ಉದ್ದವಿರುವ ಈ ಸಂಪರ್ಕ ರಸ್ತೆಯ ಕಮಿಲ ಬಳಿ 3 ಕಿ.ಮೀ.ನಷ್ಟು ಕಾಂಕ್ರೀಟ್ ಆಗಿ ಅಭಿವೃದ್ಧಿಯಾಗಿದೆ. ಆದರೆ ಗುತ್ತಿಗಾರು ಮುಖ್ಯ ರಸ್ತೆಯಿಂದ ದೇವಸ್ಯ ವರೆಗಿನ 2 ಕಿ.ಮೀ. ರಸ್ತೆ ತೀರಾ ಹದೆಗೆಟ್ಟಿದೆ. ಹಲವು ವರ್ಷಗಳಿಂದ ಈ ಭಾಗ ಡಾಮರು ಕಾಣದೆ ನಾದುರಸ್ತಿಯಲ್ಲಿದೆ. ಹಲವು ಬಾರಿ ಗ್ರಾಮಸಭೆಗಳಲ್ಲಿ, ಜನಪ್ರತಿನಿಧಿಗಳಲ್ಲಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದರೂ ಯಾವುದೇ ಅನುದಾನ ಮಂಜೂರಾಗಿಲ್ಲ. ಈ ರಸ್ತೆಯ ದುರವಸ್ಥೆಯಿಂದ ಬೇಸತ್ತ ಜನ ಫಲಕ ಅಳವಡಿಸಿದ್ದಾರೆ.
“ನಾವು ನಿಮಗೆ ಓಟು ನೀಡಿ ಪ್ರಮಾದ ಮಾಡಿದ್ದು, ಇನ್ನು ಈ ರೀತಿಯ ತಪ್ಪಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ದಯವಿಟ್ಟು ರಸ್ತೆ ದುರಸ್ತಿ ಮಾಡಿ, ದಮ್ಮಯ್ಯ’ ಎನ್ನುವ ಮನವಿ ಮಾಡಿರುವ ಫಲಕ ಅಳವಡಿಸಿ ಜನಪ್ರತಿನಿಧಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.