ಕಣ್ಮನ ಸೆಳೆಯುತ್ತಿರುವ ಫಲ ಪುಷ್ಪಪ್ರದರ್ಶನ

Team Udayavani, Jan 27, 2020, 4:24 PM IST

kolar-tdy-1

ಕೋಲಾರ: ನಗರದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಕೈಷಿ ಇಲಾಖೆ ಹಮ್ಮಿಕೊಂಡಿದ್ದ ಫಲ-ಪುಷ್ಪ ಪ್ರದರ್ಶನ ನೋಡಿಗರ ಕಣ್ಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಈ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌ .ನಾಗೇಶ್‌ ಚಾಲನೆ ನೀಡಿದರು.

ಹೂ ಮತ್ತು ತರಕಾರಿಗಳಿಂದ ಅಲಂಕರಿಸಿದ ವಿವಿಧ ಸ್ತಬ್ಧಚಿತ್ರಗಳು, ಡಾ.ಎಂ.ಮರೀಗೌಡರ ಮರಳಿನ ಕೆತ್ತನೆ, ದೊಣ್ಣೆ ಮೆಣಸಿನಕಾಯಿ, ಮನೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖಾ ಮಳಿಗೆಗೆಳು, ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆ, ಆಧುನಿಕ ಪದ್ಧತಿಯಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆ, ಹಸಿರು ಮನೆಯಲ್ಲಿ ಇಂಗ್ಲಿಷ್‌ ಸೌತೆ ಕಾಯಿ, ಕೈತೋಟ ಮತ್ತು ತಾರಸಿ ತೋಟ, ಜೇನು ಸಾಕಣೆ ಪ್ರಾತ್ಯಕ್ಷಿಕೆ, ಹೈಡ್ರೋಪೋನಿಕ್ಸ್‌ ಮಾದರಿ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಲ್ಲಿ ಕೆತ್ತನೆ ಮಾಡಿದ್ದ ಕಲಾಕೃತಿಗಳು ವೀಕ್ಷಕರ ಗಮನ ಸೆಳೆದವು.

ಮಾರಾಟ ಮಳಿಗೆ: ಈ ಪ್ರದರ್ಶನದಲ್ಲಿ ತೋಟಗಾರಿಕೆ ಬೆಳೆಗಳ ಸಸ್ಯ ಸಂತೆ ಸಹ ಆಯೋಜನೆ ಮಾಡಲಾಗಿದ್ದು, ಮಾವು, ಸೀಬೆ, ನೇರಳೆ, ಗೋಡಂಬಿ, ದಾಳಿಂಬೆ, ಅಂಜೂರ, ವಾಟರ್‌ ಆ್ಯಪಲ್‌, ನುಗ್ಗೆ, ಕರಿಬೇವು, ಸೀತಾಫಲ, ಬೆಣ್ಣೆ ಹಣ್ಣು, ಬೆಟ್ಟದ ನೆಲ್ಲಿ, ನಿಂಬೆ, ಆರೆಂಜ್‌ ಹುಣಸೆ, ಚಕೋತ, ಹಲಸು ಹಾಗೂ ಅಲಂಕಾರಿಕ ಗಿಡಗಳು, ಕೈತೋಟಕ್ಕೆ ಬೀಜದ ಕಿಟ್‌, ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ದೊರೆಯುತ್ತಿದ್ದು, ವಿವಿಧ ಇಲಾಖೆಗಳಿಂದ ಮಾರಾಟ ಮಳಿಗೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಜಿಲ್ಲೆ ಮಟ್ಟದ 10 ಪ್ರಗತಿಪರ ರೈತರಿಗೆ 25,000 ರೂ. ನಗದು, ತಾಲೂಕು ಮಟ್ಟದಿಂದ ಆಯ್ಕೆಯಾದ ತಲಾ 5 ರೈತರಿಗೆ 10,000 ರೂ. ಪ್ರೋತ್ಸಾಹಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ಬಹುಮಾನ ಪಡೆದ ಸಾಧಕ ಅನ್ನದಾತರು: ಕೋಲಾರದ ಕೃಷ್ಣಾಪುರದ ಕೆ.ಎಂ.ರಾಜಣ್ಣ, ಹೊಳಲಿಯ ಡಿ.ಗೋವಿಂದಪ್ಪ, ಮಾಲೂರಿನ ಕುಪ್ಪೂರು ಗ್ರಾಮದ ಕೆ.ಎನ್‌. ಮುನಿಯಪ್ಪ, ಯಶವಂತಪುರದ ವೈ. ಆರ್‌.ಅಶೋಕ್‌, ಬಂಗಾರಪೇಟೆಯ ಹೊಸಕೋಟೆ ವಿ.ರಮೇಶ, ಕರಡಗೂರಿನ ಗೌರಮ್ಮ, ಮುಳಬಾಗಿಲು ತಾಲೂಕಿನ ಪೆರುಮಾಕನಹಳ್ಳಿ ಎನ್‌.ಧರ್ಮಲಿಂಗಂ, ಮೋತಕಪಲ್ಲಿಯ ಎಂ.ವಿ.ಸುಭಾಷ್‌ಕುಮಾರ್‌, ಶ್ರೀನಿವಾಸಪುರದ ಶೆಟ್ಟಿಹಳ್ಳಿ ವಿ.ಮುರಳಿ, ಆಲವಟ್ಟದ ಎ.ಆನಂದರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಮಟ್ಟದಲ್ಲಿ ಕೋಲಾರದ ಮೈಲಾಂಡಹಳ್ಳಿಯ ಎ.ಸಿ.ಎತ್ನಮ್ಮ, ಕಲ್ವ ಕೆ.ಎಸ್‌.ಮಂಜುನಾಥ್‌, ಯಡಹಳ್ಳಿಯ ವಿ.ರಘು, ಕಲ್ಲೂರು ಕೆ.ಎನ್‌.ಬಸವರಾಜ, ಶಿಳ್ಳಂಗೆರೆ ವಿ.ನಾರಾಯಣಸ್ವಾಮಿ, ಮುಳಬಾಗಿಲಿನ ಊರುಕುಂಟೆ ಮಿಟ್ಟೂರು ಕೆ.ಎಂ.ಸಾವಿತ್ರಮ್ಮ, ಮಂಡಿಕಲ್‌ನ ಎಂ.ವಿ.ನೇತಾಜಿ, ಯಚ್ಚನಹಳ್ಳಿ ವನಜಾಕ್ಷಮ್ಮ, ಮರಳಮೇಡು ಡಿ. ರಾಮಚಂದ್ರ, ಎಚ್‌ ಕೋಡಿಹಳ್ಳಿ ರಾಧಾಕೃಷ್ಣ, ಶ್ರೀನಿವಾಸಪುರದ ಗೆಂಟರನ್ನಗಾರಪಲ್ಲಿ ಆರ್‌.ರೆಡ್ಡಪ್ಪ, ಜೋಡಿಕೊತ್ತಪಲ್ಲಿ ಕೆ.ಎಸ್‌.ಮಂಜುನಾಥ್‌, ಪುಲಗುಟ್ಲಪಲ್ಲಿ ಸುಧಾಕರ, ದಿಂಬಾಲ ಕೆ.ಎನ್‌. ಶಿವಮ್ಮ, ಲಕ್ಷ್ಮಣಪುರ ಜಿ.ರಾಮಾಂಜಿರನ್ನು ಆಯ್ಕೆ ಮಾಡಲಾಗಿದೆ.

ಮಾಲೂರು ತಾಲೂಕಿನ ಎಂ.ಹೊಸಹಳ್ಳಿ ವೆಂಕಟೇಗೌಡ, ಪುರ ಆರ್‌. ನಾಗರಾಜ್‌, ರಾಜೇನಹಳ್ಳಿಯ ಎ.ಎನ್‌.ಅಬ್ಬಯ್ಯ, ನೆಲ್ಲಹಳ್ಳಿಯ ಆರ್‌. ವೆಂಕಟೇಶ್‌, ದ್ಯಾಪಸಂದ್ರದ ಡಿ.ಕೆ.ಮುನಿಶಾಮಿಗೌಡ, ಬಂಗಾರ ಪೇಟೆಯ ಕಾಮಾಂಡಹಳ್ಳಿ ಶಿವಣ್ಣ, ಕ್ಯಾಸಂಬಳ್ಳಿಯ ಸರಸ್ವತಮ್ಮ, ಅಕ್ಕಮ್ಮನದಿನ್ನೆ ವಿ.ರಾಮಕೃಷ್ಣಪ್ಪ, ಹೊಸಕೋಟೆಯ ಸಿ.ಕೃಷ್ಣಪ್ಪ, ಕಾರಮಾನಹಳ್ಳಿಯ ಪದ್ಮಾವತಿರನ್ನು ಸಚಿವರು ಸನ್ಮಾನಿಸಿದರು. ಸಂಸದ ಎಸ್‌ ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷ ಸಿ.ಎಸ್‌ ವೆಂಕಟೇಶ್‌, ಉಪಾಧ್ಯಕ್ಷರಾದ ಯಶೋದಾ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.