ರಿಯಲ್ ರಿಯಾಲ್ಟಿ!
Team Udayavani, Jan 28, 2020, 6:06 AM IST
ಯಾವುದೇ ಪದವಿ ಇದ್ದರೂ, ಒಂದು ಪಕ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಫೇಲಾಗಿದ್ದರೂ ಕೈ ಬೀಸಿ ಕರೆಯುವ ಕ್ಷೇತ್ರ ಅಂದರೆ ಅದು ರಿಯಲ್ ಎಸ್ಟೇಟ್. ಇಲ್ಲಿ ಎಲ್ಲ ರೀತಿಯ ಪದವೀಧರರಿಗೂ ಅವಕಾಶಗಳು ಉಂಟು. ಇತ್ತೀಚೆಗೆ ವೃತ್ತಿಪರತೆಯೂ ಕಾಣುತ್ತಿದೆ. ಹೀಗಾಗಿ, ಎಂಬಿಎ, ಕಾಮರ್ಸ್ ಪದವಿ ಪಡೆದವರ ಕಡೆ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕಂಪೆನಿಗಳು ಗಮನ ಹರಿಸುತ್ತಿವೆ.
ದೇಶದ ಚರ್ಯೆಯನ್ನೇ ಬದಲಿಸಬಲ್ಲ ಎರಡು ಪ್ರಮುಖ ಕ್ಷೇತ್ರಗಳು ಅಂದರೆ ರಿಯಲ್ ಎಸ್ಟೇಟ್ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಕ್ಷೇತ್ರಗಳು. ಉತ್ತಮ ಆದಾಯ ಪಡೆಯುವುದರ ಜೊತೆಗೆ, ನೂರಾರು ಜನರ ಕನಸುಗಳನ್ನು ಈಡೇರಿಸುವಲ್ಲಿ, ದೇಶದ ಅಭಿವೃದ್ಧಿಗೆ ಕೈ ಜೋಡಿಸುವುದರಲ್ಲಿ ಇವುಗಳ ಪಾತ್ರ ಹಿರಿದು. ಅನೇಕ ಡಿಗ್ರಿ, ಡಬ್ಬಲ್ ಡಿಗ್ರಿ ಪೂರೈಸಿದವರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಷ್ಟೊಂದು ಓದದವರೂ ಕೂಡ ಈ ಕ್ಷೇತ್ರ ನಂಬಿ ಬದುಕಬಹುದು. ಮೂಲ ಸೌಕರ್ಯ ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ನಿಮ್ಮ ಕೆರಿಯರ್ ಬೆಳೆಸಲು ಒಬ್ಬ ಸ್ವತಂತ್ರ ಉದ್ದಿಮೆದಾರನಿಗೆ ಬೇಕಾದ ಕೌಶಲಗಳು ನಿಮ್ಮಲ್ಲಿ ಇರಬೇಕು.
ಉತ್ತಮ ಸಂವಹನ ಕೌಶಲ್ಯ, ಸಾಮಾಜಿಕ ಸಂಬಂಧಗಳು, ಸಂಪರ್ಕಗಳು ಇರಬೇಕು. ನಿವೇಶನ, ಭೂಮಿಗಳ ಖರೀದಿ; ಫ್ಲಾಟ್, ಮನೆ, ವಿಲ್ಲಾಗಳನ್ನು ಕೊಂಡು, ಮತ್ತೆ ಅವುಗಳನ್ನು ಮಾರಾಟ ಮಾಡುವ ಕೌಶಲ ಇರಬೇಕು. ವಿಶ್ವಮಟ್ಟದಲ್ಲಿ ಆದ ಆರ್ಥಿಕ ಹಿಂಜರಿತದ ಪರಿಣಾಮ ಭಾರತದಲ್ಲೂ ತನ್ನ ನೆರಳು ಚಾಚಿದ್ದರಿಂದ ಈ ಉದ್ಯಮ ಕ್ಷೇತ್ರ 2009ರಲ್ಲಿ ತೀವ್ರ ಕುಸಿತ ಅನುಭವಿಸಿತು. ಆದರೆ, ಈಗ ಅದು ಮತ್ತೆ ಸಮತೋಲನ ಕಂಡುಕೊಂಡು ಒಂದು ಭರವಸೆಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಈ ಉದ್ಯಮದಲ್ಲಿ ಆದಾಯಗಳಿಸುವ ಮುಖ್ಯ ಮಾರ್ಗಗಳೆಂದರೆ ಫ್ಲಾಟ್, ವಾಣಿಜ್ಯ ಸಂಕೀರ್ಣ / ಮಳಿಗೆಗಳ ಮಾರಾಟ.
ಪಿಯುಸಿ ಸಾಕು: ಈ ಉದ್ಯಮದಲ್ಲಿ ತೊಡಗಲು ಸಾಂಪ್ರದಾಯಿಕ ಪದವಿಗಳ ಅಗತ್ಯವೇನಿಲ್ಲ. ಆದುದರಿಂದ, ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಹಲವರು ಇದರಲ್ಲಿ ತೊಡಗಿಕೊಳ್ಳುತ್ತಾರೆ. ಅಂಚೆ ತೆರಪಿನ ಶಿಕ್ಷಣದ ಮೂಲಕ ಪದವಿಯನ್ನು ಗಳಿಸುತ್ತಾರೆ. ಆದರೆ, ಈ ಉದ್ಯಮದ ತಾಂತ್ರಿಕ ವಿಭಾಗದಲ್ಲಿ ತೊಡಗಲು ಸಿವಿಲ್ ಇಂಜಿನಿಯರಿಂಗ್ ಅಥವಾ ಕನ್‌ಸ್ಟ್ರಕ್ಷನ್ ಇಂಜಿನಿಯರಿಂಗ್ ಪದವಿ ಪಡೆದಿದ್ದರೆ ಒಳಿತು.
ಎಷ್ಟೋ ಜನ, ಮನೆ ಕಟ್ಟುವ, ಕಟ್ಟಿಸುವ ವೃತ್ತಿಯನ್ನು ಒಂದು ಅಂದಾಜಿನ ಮೇಲೂ ಮಾಡುತ್ತಾರೆ. ಪದವಿಗಳಿಸಿದ್ದರೆ, ಎಲ್ಲವನ್ನೂ ಕರಾರುವಾಕ್ಕಾಗಿ ಪೂರೈಸಬಹುದು. ಸೇಲ್ಸ್‌ನಲ್ಲಿ ಎಂ.ಬಿ.ಎ. ಪದವಿ ಗಳಿಸಿದ್ದರೆ ಅಥವಾ ಬ್ಯುಸಿನೆಸ್ ಕಮ್ಯುನಿಕೇಷನ್ ಪದವಿ ಹೊಂದಿ ದ್ದರೆ ನೀವು ಸೇಲ್ಸ್ ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯುಟಿವ್, ಕನ್ಸ್‌ಸ್ಟ್ರಕ್ಷನ್ ಎಕ್ಸಿಕ್ಯುಟಿವ್ ಇತ್ಯಾದಿ ಹುದ್ದೆಗಳನ್ನು ನಿರ್ವಹಿಸ ಬಹುದು. ಎಂಬಿಎನಲ್ಲಿ ರಿಯಲ್ ಎಸ್ಟೇಟ್ ಅಂಡ್ ಅರ್ಬನ್ ಇನ್‌ಫ್ರಾಸ್ಟ್ರಕ್ಚರ್, ಎಂಬಿಎನಲ್ಲಿ ಕನ್‌ಸ್ಟ್ರಕ್ಷನ್ ಅನ್ನೋ ಪ್ರತ್ಯೇಕ ಪದವಿ ಕೂಡ ಇದೆ.
ಪದವಿ ಮುಖ್ಯವಲ್ಲ: ದಕ್ಕೆ ಪದವಿಯಷ್ಟೇ ಮುಖ್ಯವಲ್ಲ. ಅನುಭವ ಕೂಡ ಬೇಕಾಗುತ್ತದೆ. ಶೋಭಾ, ಹೀರಾನಂದಾನಿಯಂಥ ದೊಡ್ಡ ದೊಡ್ಡ ಕಂಪೆನಿಗಳು ಎಂಬಿಎ ಪದವಿ ಪಡೆದವರನ್ನು ಎಕ್ಸಿಕ್ಯುಟೀವ್, ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಆಯ್ಕೆ ಮಾಡುವುದುಂಟು. ಕಟ್ಟಡ ಮತ್ತು ಕಾಮಗಾರಿಗಳ ಸ್ಥೂಲ ಪರಿಚಯ, ಕೆಲಸ ಮಾಡುವ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡಗಳ ಮಾರುಕಟ್ಟೆ ಮೌಲ್ಯ,
ವಿವಿಧ ಕನ್‌ಸ್ಟ್ರಕ್ಷನ್ ಕಂಪನಿಗಳ ಸ್ಟಾಕ್ ಮತ್ತು ಶೇರ್ ಮೌಲ್ಯ, ಮಾರ್ಕೆಟಿಂಗ್, ಸೆಲ್ಲಿಂಗ್, ಮೌಲ್ಯ, ನಿಷ್ಕಷೆಯ ಮೂಲಕ ಗ್ರಾಹಕರನ್ನು ಸೆಳೆಯುವ ತಂತ್ರಗಾರಿಕೆ ಇರಬೇಕು. ಗ್ರಾಹಕರ ಪಟ್ಟಿ, ಅವರ ಮನವೊಲಿಸುವ ಚಾಕಚಕ್ಯತೆ ಇದ್ದರೆ ಖಂಡಿತ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು. ಅಂಬುಜಾ ರಿಯಾಲಿಟಿ ಗ್ರೂಪ್, ಡಿಎಲ್‌ಫ್ ಬಿಲ್ಡಿಂಗ್, ಸನ್ ಸಿಟಿ ಪ್ರಾಜಕ್ಟ್, ಮ್ಯಾಜಿಕ್‌ಬ್ರಿಕ್ಸ್, ಮಿಥಲ್ ಬಿಲ್ಡರ್ಸ್, ಕೆ. ರಹೇಜ ಕನ್‌ಸ್ಟ್ರಕ್ಷನ್‌ನಂಥ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಬಹುದು.
ಸ್ವಂತ ಉದ್ದಿಮೆಯಾಗಿ ಸೂಕ್ತವೆ?: ಸವಾಲುಗಳನ್ನು ಎದುರಿಸುವ ಹುಮ್ಮಸ್ಸು, ಅಪಾರ ಜನಸಂಪರ್ಕ, ಶ್ರಮಪಡುವ ಮನಸ್ಸು, ತಂಡವನ್ನು ಮುನ್ನಡೆಸುವ ಧೈರ್ಯ ನಿಮಗಿದ್ದರೆ, ಇದು ನಿಮಗೆ ಹೇಳಿ ಮಾಡಿಸಿದ ಕ್ಷೇತ್ರ. ಮೊದಲಿಗೆ ಆಸ್ತಿ ಪತ್ರಗಳನ್ನು ಪರೀಕ್ಷಿಸುವ, ಚೌಕಾಸಿಮಾಡಿಕೊಳ್ಳುವ, ತಗಾದೆ ಇರುವ ಭೂಮಿಯನ್ನೂ ಕೊಂಡು ಬುದ್ಧಿವಂತಿಕೆಯಿಂದ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿ ಗಟ್ಟಿ ಮಾಡಿಕೊಳ್ಳುವ ಚಾಕಚಕ್ಯತೆ ಇರಬೇಕು.
ಆ ಬಳಿಕ ಈ ಆಸ್ತಿಗಳನ್ನು ಅಭಿವೃದ್ಧಿಪಡಿಸಿ ಅದನ್ನು ಗ್ರಾಹಕರಿಗೆ ಮಾರುವ ತಂತ್ರವೂ ತಿಳಿದಿರಬೇಕು. ಇದು ಆರಂಭದಲ್ಲಿ ಕಷ್ಟ ಎನಿಸಿದರೂ ಒಮ್ಮೆ ಕೈ ಕುದುರಿದರೆ ಲಕ್ಷ, ಕೋಟಿಗಳಲ್ಲಿ ಹಣ ಗಳಿಕೆ ಆಗುವುದು. ರಿಯಲ್ ಎಸ್ಟೇಟ್ ಉದ್ಯಮ ಬಯಸುವುದು ಸ್ಮಾರ್ಟ್ ಆಗಿರುವವರನ್ನು, ಒಳ್ಳೆಯ ಸಂವಹನ ಕೌಶಲ, ಪ್ರಾಜೆಕ್ಟ್ಗಳ ಪೂರ್ಣ ಮಾಹಿತಿ, ನಿಮ್ಮದೇ ಆದ ಕಾಂಟಾಕ್ಟ್ ಲಿಸ್ಟ್‌ಗಳಿಂದ ಸಂದರ್ಶಕರನ್ನು ನೀವು ಮೆಚ್ಚಿಸಬಹುದು. ಕೆಲಸ ಗಿಟ್ಟಿಸಬಹುದು. ದೇಶ ಕಟ್ಟುವುದರೊಂದಿಗೇ ದುಡ್ಡು ಮಾಡುವ ಉದ್ಯಮ ಇದು.
* ವಿ. ರಘು, ಪ್ರಾಂಶುಪಾಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.