ಅವ್ಯವಹಾರ: ತಡೋಳಾ ಗ್ರಾಪಂ ಕಚೇರಿ ಎದುರು ಧರಣಿ
Team Udayavani, Jan 28, 2020, 11:57 AM IST
ಆಳಂದ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಡೋಳಾ ಗ್ರಾಪಂ ಕಚೇರಿ ಎದುರು ಪ್ರಗತಿಪರರು ಹಾಗೂ ಆಯ್ದ ಸದಸ್ಯರು ಸೇರಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
14ನೇ ಹಣಕಾಸು ಅಡಿಯಲ್ಲಿ ಖಂಡಾಳ ಗ್ರಾಮ ವಿಕಾಸ ಅನುದಾನ 7.5 ಲಕ್ಷ ಹಣ ಎತ್ತಿ ಹಾಕಿದ್ದು, ಮರು ಪಾವತಿಸಲು ಕಳೆದ ಮೂರು ವರ್ಷದ ಹಿಂದೆ ಪ್ರತಿಭಟನೆ ಕೈಗೊಂಡಾಗ ಲೆಕ್ಕ ವಿಭಾಗದಿಂದ 6.76 ಲಕ್ಷ ರೂ. ಅವ್ಯವಹಾರ ಪತ್ತೆಯಾಗಿತ್ತು. ಆಗ ಸಂಬಂಧಿ ತ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಕೈಗೊಳ್ಳಲಾಯಿತು. ಎರಡು ವರ್ಷದ ಬಳಿಕ ಇದೇ ಅಧಿಕಾರಿಯನ್ನು ಮತ್ತೆ ತಡೋಳಾ ಗ್ರಾಪಂಗೆ ನಿಯೋಜಿಸಲಾಗಿದೆ. ಈ ನಿಯೋಜಿತ ಅಧಿಕಾರಿ 2 ತಿಂಗಳಲ್ಲೇ ಮತ್ತೆ 2 ಲಕ್ಷ ರೂಪಾಯಿ ಅವ್ಯವಹಾರ ಎಸಗಿದ್ದು, ಇಂಥ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಮೊಹ್ಮದ್ ಸಲೀಂ ಮನವಿ ಸ್ವೀಕರಿಸಿ, ಎರಡು ದಿನಗಳಲ್ಲಿ ಸಮಿತಿ ರಚಿಸಿ ಗ್ರಾಪಂ ಅವ್ಯವಹಾರ ಪರಿಶೀಲಿಸಲಾಗುವುದು. ಧರಣಿ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ಆದರೆ, ಧರಣಿನಿರತರು ಸಮಿತಿ ರಚಿಸಿ ಅವ್ಯವಹಾರ ಕುರಿತು ಪರಿಶೀಲನೆ ಆರಂಭಿಸುವ ತನಕ್ಕ ಧರಣಿ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದರು.
ಗ್ರಾಮದ ಹಿರಿಯ ಮುಖಂಡ ಮೌಲಾ ಮುಲ್ಲಾ, ಅಜೀತ ಆರ್. ಪಾಟೀಲ, ಮಹಾವೀರ ಕಾಂಬಳೆ, ಮಹಾದೇವ ಸಿಂದೆ, ಮೈಲಾರಿ ಜೋಗೆ, ಆಶಾ ಕ ಮುಲ್ಲಾ, ಗ್ರಾಪಂ ಸದಸ್ಯ ಉಮೇಶ ಘೋಡಕೆ, ಯಾದವ ಜಾಧವ, ಗ್ರಾಪಂ ಸದಸ್ಯ ಅಜೀತ ಪಟೇಲ ಹಾಗೂ ವಿಜಯಕುಮಾರ ಕಾಂಬಳೆ, ಭೀಮಸೇನ ಜಮಾದಾರ, ಜೈಭೀಮ ಗಾಯಕವಾಡ, ಪಾಂಡುರಂಗ ಸಿಂಧೆ ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.