ಹರಿಹರಕ್ಕೆ 1 ಕೋ.ರೂ. ದೂಡಾ ಅನುದಾನ
ದೂಡಾ ಸ್ಥಾಪನೆಯಾದ 26 ವರ್ಷದಲ್ಲಿ ಇಷ್ಟುದೊಡ್ಡ ಮೊತ್ತ ಎಂದೂ ಬಂದಿಲ್ಲ
Team Udayavani, Jan 29, 2020, 11:25 AM IST
ಹರಿಹರ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾದ ಅಂದಾಜು 3 ದಶಕಗಳಲ್ಲಿ ಹರಿಹರ ನಗರಕ್ಕೆ ಮೊದಲ ಸಲ 1 ಕೋ.ರೂ. ಅನುದಾನ ಮಂಜೂರಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಬೀರೂರು-ಸಮ್ಮಸಗಿ ರಸ್ತೆಗೆ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ನಗರದ ಜಯಶ್ರೀ ಚಿತ್ರಮಂದಿರದ ಎದುರಿನ ರಸ್ತೆ ವಿಭಜಕದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ದೂಡಾ ರಚನೆಯಾಗಿ ಸುಮಾರು 26 ವರ್ಷಗಳ ನಂತರ ಹರಿಹರದ ಅಭಿವದ್ಧಿಗೆ 1 ಕೋ.ರೂ. ನಷ್ಟು ಬೃಹತ್ ಮೊತ್ತ ಬಿಡುಗಡೆಯಾಗಿರುವುದು ಇದೆ ಮೊದಲು ಎಂದರು.
ರಾಜ್ಯ ಬಿಜೆಪಿ ಸರ್ಕಾರದ ಅವಧಿ ಇನ್ನೂ 3 ವರ್ಷಗಳಿದ್ದು, ಹರಿಹರದ ಪೌರಾಯುಕ್ತರು,
ಅಧ್ಯಕ್ಷರೊಂದಿಗೆ ಚರ್ಚಿಸಿ, ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿ, ಹಣ ಮಂಜೂರು ಮಾಡಿಸಿಕೊಳ್ಳಬೇಕು. ಶಾಸಕರಾದ ಎಸ್.ಎ. ರವೀಂದ್ರನಾಥ್, ಶ್ಯಾಮನೂರು ಶಿವಶಂಕರಪ್ಪ, ಎಸ್.ರಾಮಪ್ಪ ಒಟ್ಟಾಗಿ ಅವಳಿ ನಗರಗಳ ಅಭಿವೃದ್ಧಿಪಡಿಸಬೇಕು ಎಂದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ತಮ್ಮದೇ ಪಕ್ಷದ ಮಾದಪ್ಪ ಹಾಗೂ ಅಂದಿನ ಡಿಸಿ ರಮೇಶ್ ಅವರಿಗೆ ಹರಿಹರ ಹಳೆ ಪಿಬಿ ರಸ್ತೆ ಅಭಿವೃದ್ಧಿಯಾಗಿ ಹಲವು ವರ್ಷಗಳಾಗಿದ್ದು, ಬೀದಿ ದೀಪಗಳಿಲ್ಲ. ದಾವಣಗೆರೆಯಂತೆ ಹರಿಹರದಲ್ಲೂ ಬೀದಿ ದೀಪ ಅಳವಡಿಕೆಗೆ 1 ಕೋ.ರೂ. ಅನುದಾನ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಅನುದಾನ ಬಂದಿದೆ ಎಂದರು.
ನಗರಸಭೆಯ 45 ಲಕ್ಷ ರೂ. ಸೇರಿದಂತೆ ಒಟ್ಟು 1.45 ಕೋ.ರೂ. ವೆಚ್ಚದಲ್ಲಿ ಹಳೆ ಪಿಬಿ ರಸ್ತೆಯ ತುಂಗಭದ್ರಾ ಸೇತುವೆಯಿಂದ ದಾವಣಗೆರೆ ಮಾರ್ಗದ 2ನೇ ಗೇಟ್ ವರೆಗೆ ದಾವಣಗೆರೆ ಮಾದರಿಯಲ್ಲಿ ಬೀದಿ ದೀಪ ಅಳವಡಿಸಲಾಗುವುದು ಎಂದರು.
ನಗರ ವ್ಯಾಪ್ತಿಯ 8 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳು ಅಲ್ಲದೆ 13.5 ಕೋ.
ರೂ. ವೆಚ್ಚದ ಎಕ್ಕೆಗೊಂದಿ ರಸ್ತೆ, 17 ಕೋ. ವೆಚ್ಚದ ದೀಟೂರು-ಪಾಮೇನಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ. ಆದಷ್ಟು ಬೇಗ ಸಂಸದರು ಸಿಎಂ ಜೊತೆ ಚರ್ಚಿಸಿ ಮಂಜೂರಾದ ಕಾಮಗಾರಿಗಳ ಅನುದಾನ ದೊರಕಿಸಬೇಕೆಂದು ಸಂಸದರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಎಂ.ಸಿದ್ದೇಶ್ವರ, ರಾಮಪ್ಪನವರು ಬಿ.ಪಿ.ಹರೀಶ್ ಜತೆ ಬೆಂಗಳೂರಿಗೆ ತೆರಳಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಲಿ. ಅಗತ್ಯವಿದ್ದರೆ ತಾವು ಸಿಎಂ ಜೊತೆ ಮಾತನಾಡುವುದಾಗಿ ತಿಳಿಸಿದರು. ಅತಿವೃಷ್ಟಿ ಹಾನಿಗೆ ಸರ್ಕಾರ 8,500 ಸಾವಿರ ಕೋ.ರೂ. ಪರಿಹಾರ ನೀಡಬೇಕಾಗಿದ್ದರಿಂದ ಹಣದ ಕೊರತೆಯಾಗಿದೆ. ಬರುವ ಮಾರ್ಚ್ ನಂತರ ರಾಜ್ಯದಲ್ಲಿ ಅಭವೃದ್ಧಿ ಪರ್ವ ಆರಂಭವಾಗಲಿದೆ ಎಂದರು.
ಜಿ.ಪಂ.ಸದಸ್ಯ ವಾಗೀಶ್ ಸ್ವಾಮಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸದಸ್ಯರಾದ ರಾಜು ರೋಖಡೆ, ಮಾಜಿ ಶಾಸಕ ಬಿ.ಪಿ.ಹರೀಶ್, ನಗರಸಭೆ ಸದಸ್ಯರಾದ ಎಸ್.ಎಂ. ವಸಂತ್, ನೀತಾ ಮೆಹರ್ವಾಡೆ, ಕೆ.ಜಿ. ಸಿದ್ದೇಶ್, ಆಟೋ ಹನುಮಂತ, ದೂಡಾ ಆಯುಕ್ತ ಕುಮಾರಸ್ವಾಮಿ, ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ, ಮುಖಂಡರಾದ ಎಸ್.ಎಂ.ವೀರೇಶ್, ಡಿ.ಹೇಮಂತರಾಜ್, ಬೆಳ್ಳೂಡಿ ರಾಮಚಂದ್ರಪ್ಪ, ಕೆ.ಮರಿದೇವ್, ಅಜಿತ್ ಸಾವಂತ್, ಮಾರುತಿ ಶೆಟ್ಟಿ, ಸುರೇಶ್ ಚಂದಾಪುರ್, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.