ಹದಿನೆಂಟು ವರ್ಷಗಳ ನರಕಯಾತನೆ ಆತನನ್ನು ‘ಗೋಲ್ಡನ್ ವಾಯ್ಸ್ ಮ್ಯಾನ್’ ಆಗಿಸಿದ್ದು ಹೇಗೆ ಗೊತ್ತಾ?

ಅಂದು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಇಂದು ಅಮೇರಿಕಾದ ಜನಪ್ರಿಯ ವಾಯ್ಸ್ ಓವರ್ ಕಲಾವಿದ

ಸುಹಾನ್ ಶೇಕ್, Jan 29, 2020, 6:25 PM IST

web-tdy-1

ಬದುಕು ಒಂದು ಕಾಣದ ಕೊಡುಗೆಗಳ ಡಬ್ಬಿ. ಡಬ್ಬಿಯ ಒಳಗೆ ಇರುವುದು, ಅನಿರೀಕ್ಷಿತ ಆನಂದ ಹಾಗೂ ಅನಿರೀಕ್ಷಿತ ಆಘಾತಗಳಷ್ಟೆ. ಸತ್ಯವನ್ನು ಅರಿಯುವ ಪ್ರಯತ್ನ ಮಾಡುತ್ತ ಆಯಸ್ಸನ್ನು ದೂಡುವುದೇ ಜೀವನ.!

ಸೆಪ್ಟೆಂಬರ್ 22 1957 ರಂದು ಅಮೇರಿಕಾದ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ ನಲ್ಲಿ ಹುಟ್ಟಿದ ಟೆಡ್ ವಿಲಿಯಮ್ಸ್ ಎನ್ನುವ ವ್ಯಕ್ತಿಯೂ ನಮ್ಮ ನಿಮ್ಮ ಹಾಗಿನ ಜೀವನ ಕುತೂಹಲದ ಪಯಣವನ್ನು ಆರಂಭಸುತ್ತಾನೆ. ಬೆಳೆಯುತ್ತಾ ಹೋದ ಹಾಗೆ ಆಯಾ ವಯಸ್ಸಿಗೆ ಸ್ನೇಹಿತರ ಪರಿಚಯ, ಭಾವನೆಗಳನ್ನು ಅರಿಯುವ ನೋಟ ಎಲ್ಲದರ ತಿಳಿವಳಿಕೆ ಬಂದು ಹದಿಹರೆಯದ ಹಂತವನ್ನು ದಾಟಿಕೊಂಡು ಕೆಲಸ ಹುಡುಕುವ ವಯಸ್ಸಿಗೆ ಬೆಳೆಯುತ್ತಾನೆ.

1980 ರ ಸಮಯದಲ್ಲಿ ಹೊಟ್ಟೆಪಾಡಿನ ಯಾತ್ರೆಯಲ್ಲಿ ಮೊದಲು ಡಿಜೆ ಆಗಿ ದುಡಿಯಲು ಆರಂಭಿಸುತ್ತಾನೆ. ಇದರ ಜೊತೆಗೆ ರೇಡಿಯೋದಲ್ಲಿ ಆರ್.ಜೆ. ಆಗಿ ತನ್ನ ಧ್ವನಿಯನ್ನು ಜನರಿಗೆ ಕೇಳಿಸುತ್ತಾನೆ. ಇದೇ ಕಾಯಕದ ದಾರಿಯಲ್ಲಿ ಸಾಗಿ ಕುಟುಂಬವನ್ನು ಸಾಕಬೇಕಾದ ವಿಲಿಯಮ್ಸ್ ಅದೊಂದು ಕೆಟ್ಟ ಘಳಿಗೆಯಲ್ಲಿ ತನಗೆ ಅಂಟಿಕೊಂಡ ದುರಭ್ಯಾಸದಿಂದ ತನ್ನ ಬದುಕನ್ನೇ ನರಕಕ್ಕೆ ದೂಡಿಕೊಳ್ಳುತ್ತಾನೆ.

ನಿತ್ಯ ಕುಡಿತದ ಚಟ ; ಮಾದಕ ದ್ರವ್ಯದ ಮೋಹ : ವಿಲಿಯಮ್ಸ್ ತಾನೇ ಕಷ್ಟಪಟ್ಟು ರೂಪಿಸಿಕೊಂಡಿದ್ದ ಭವಿಷ್ಯವನ್ನು ತನ್ನ ಕೈಯಾರೆ ಹಾಳುಮಾಡಿಕೊಂಡು ಹೀನಾಯ ಸ್ಥಿತಿಗೆ ತಲುಪುತ್ತಾನೆ. ಅದು ಯಾವುದೋ ಸಮಯದಲ್ಲಿ ವಿಲಿಯಮ್ಸ್ ಗೆ ಕುಡಿತದ ರುಚಿ ನಾಲಗೆಗೆ ಹತ್ತುತ್ತದೆ ಇದರ ಜೊತೆಗೆ ಮಾದಕ ದ್ರವ್ಯದ ಸೇವನೆಯನ್ನು ಮಾಡಲು ಆರಂಭಿಸುತ್ತದೆ. ಮತ್ತಿದು ಅವನಿಗೆ ನಿತ್ಯದ ಅಭ್ಯಾಸವಾಗುತ್ತದೆ. ದಿನಗಳು ತಿಂಗಳಾಗುತ್ತವೆ, ತಿಂಗಳು ವರ್ಷಗಳಾಗುತ್ತವೆ, ವರ್ಷಗಳು ಉರುಳುತ್ತಾ ಹೋದ ಹಾಗೆ ವಿಲಿಯಮ್ಸ್ ನ ಚಟ ಹೆಚ್ಚುತ್ತಾ ಹೋಗುತ್ತದೆ.

ಇದೇ ವೇಳೆಯಲ್ಲಿ  ಕುಟುಂಬದಿಂದ ದೂರವಾಗಿ ವಿಲಿಯಮ್ಸ್ ದಿನ ಕಳೆಯಲು ಮನೆಯಿಲ್ಲದೆ, ಹೊಟ್ಟೆ ಬಟ್ಟೆಗೆ ಹಣವಿಲ್ಲದೆ ಆತಂತ್ರರಾಗಿ, ಹಣಗಳಿಸಲು ಕಳ್ಳತನದಂತಹ ಅಡ್ಡ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ. ಇನ್ನು ಅದಿಲ್ಲವಾದರೆ, ಭಿಕ್ಷಾಟನೆ ಮಾಡಿ ಪೆಟ್ರೋಲ್ ಬಂಕ್ ವೊಂದರ ಹಿಂಬದಿಯಲ್ಲಿರುವ ಖಾಲಿ ಜಾಗದಲ್ಲಿ ರಾತ್ರಿಯ ನಿದ್ದೆ, ಬೀದಿ ಬದಿಯಲ್ಲಿ ಅಲೆಯುತ್ತಾ ಹಗಲಿನ ವೇಳೆಯನ್ನು ಕಳೆಯುವ ದುಸ್ಥಿತಿ ಈ ಪ್ರತಿಭಾವಂತನ ಪಾಲಿಗೆ ಪ್ರಾಪ್ತವಾಗುತ್ತದೆ.

ಹೊಟ್ಟೆ ತುಂಬಿಸಲು ಭಿಕ್ಷೆ ಹಾಗೂ ಕಳ್ಳತನದ ಹಾದಿಯನ್ನು ಹಿಡಿದ ವಿಲಿಯಮ್ಸ್ ಹಲವು ಬಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಧರ್ಮದೇಟು ತಿನ್ನುತ್ತಾನೆ. ಮತ್ತೆ ಇದು ಪುನರಾವರ್ತನೆ ಆದಾಗ ಜೈಲಿನಲ್ಲಿ ತಿಂಗಳುಗಟ್ಟಲೆ ಶಿಕ್ಷೆಯನ್ನು ಅನುಭವಿಸುತ್ತಾನೆ. ಜೈಲಿನಿಂದ ಹೊರಗೆ ಬಂದು ವಿಲಿಯಮ್ಸ್ ಹಿಂದೆ ಭಿಕ್ಷೆ ಬೇಡುತ್ತಿದ್ದ ದಾರಿಯಲ್ಲಿ ಮತ್ತೆ ಭಿಕ್ಷೆ ಬೇಡುತ್ತಾನೆ. ಆದರೆ ಈ ಬಾರಿ ವಿಲಿಯಮ್ಸ್ ಒಂದು ಬರಹದ ಬೋರ್ಡ್ ಇಟ್ಟುಕೊಂಡು ಜನರಿಂದ  ಹೊಟ್ಟೆ ಬಟ್ಟೆಯ ಆಶ್ರಯಕ್ಕಾಗಿ ಭಿಕ್ಷೆ ಬೇಡುತ್ತಾರೆ.

ಅದೃಷ್ಟ ಬದಲಾಯಿಸಿದ ಅಪರಿಚಿತ ಅಪತ್ಭಾಂಧವ : ವಿಲಿಯಮ್ಸ್ ಜೈಲಿನಿಂದ ಹೊರಗೆ ಬಂದು ಭಿಕ್ಷೆ ಬೇಡಲು ಆರಂಭಿಸಿದಾಗ ಅವರಲ್ಲಿ ಒಂದು ಬರಹದ ಬೋರ್ಡ್ ಇತ್ತು. ಆ ಬರಹದಲ್ಲಿ “ ನಾನೊಬ್ಬ ಮಾಜಿ ರೇಡಿಯೋ ಅನೌನ್ಸರ್, ನನ್ನ ಧ್ವನಿ ಅದ್ಭುತವಾಗಿದೆ, ದಯವಿಟ್ಟು ತಮ್ಮಿಂದಾಗುವ ಸಹಾಯವನ್ನು ನನಗೆ ಮಾಡಿ, ನಿಮ್ಮ ದಿನ ಶುಭವಾಗಲಿ” ಎಂದು ಹೇಳಿಕೊಂಡು ಆ ಬರಹವನ್ನು ಅತ್ತಿತ್ತ ಸಾಗುವ ಜನರಿಗೆ ತೋರಿಸಿ ಹಣವನ್ನು ಪಡೆಯುತ್ತಿದ್ದ.

ಇಷ್ಟು ಹೊತ್ತಿಗಾಗಲೇ ವಿಲಿಯಮ್ಸ್ ತನ್ನ ಮನೆಯವರಿಂದ, ಕುಟುಂಬದಿಂದ ಬೇರ್ಪಟ್ಟು ಸುಮಾರು ಹದಿನೆಂಟು ವರ್ಷಗಳೇ ಕಳೆದುಹೋಗಿರುತ್ತದೆ. ಹೀಗಿರುತ್ತಾ, ಅದೊಂದು ದಿನ ಪತ್ರಕರ್ತನೊಬ್ಬ ವಿಲಿಯಮ್ಸ್ ಬಳಿ ಬಂದು ಆತನನ್ನು ಮಾತಾನಾಡಿಸಿ, ಆತನಲ್ಲಿ ಅಡಗಿರುವ ರೇಡಿಯೋ ಅನೌನ್ಸರ್ ಧ್ವನಿಯನ್ನು ವೀಡಿಯೋ ಮಾಡಿಕೊಂಡು ಅದೇ ದಿನ ಯೂಟ್ಯೂಬ್ ನಲ್ಲಿ ಆಪ್ಲೋಡ್ ಮಾಡುತ್ತಾರೆ ಅಷ್ಟೇ….

ಇಂಥ ಅದ್ಭುತ ಕಲೆಯನ್ನು ಇಟ್ಟುಕೊಂಡು ರಸ್ತೆ ಬದಿ ಅಸಹಾಯಕನಾಗಿ, ಮನೆಯಿಲ್ಲದೆ ಫುಟ್ಪಾತ್ ನಲ್ಲಿ ರಾತ್ರಿ ಕಳೆಯುತ್ತಿದ್ದ ವಿಲಿಯಮ್ಸ್ ನ ವೀಡಿಯೋ ಆಪ್ಲೋಡ್ ಮಾಡಿದ ಒಂದೇ ರಾತ್ರಿಯಲ್ಲಿ ಜಗತ್ತಿನ್ಯಾದ್ಯಂತ ಲಕ್ಷಾಂತರ ಜನರಿಂದ ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆ. ಇಷ್ಟು ಮಾತ್ರವಲ್ಲ ವಿಲಿಯಮ್ಸ್ ಎನ್ನುವ ವ್ಯಕ್ತಿ 2011 ರಲ್ಲಿ ತನ್ನ ಜೀವನದ ಎರಡನೇ ಅವಕಾಶವನ್ನು ಪಡೆದುಕೊಳ್ಳುತ್ತಾನೆ. ಈ ಬಾರಿ ಅದೃಷ್ಟವಿಲಿಯಮ್ಸ್ ನನ್ನು ಹುಡುಕಿಕೊಂಡು ಬರುತ್ತದೆ.

ಸಾಲು ಸಾಲಿನ ಸಾಧನೆಯ ಹಾದಿಯಲ್ಲಿ.. : ವಿಲಿಯಮ್ಸ್ ವೀಡಿಯೋ ಆತನಿಗೆ ಪುನರ್ ಜನ್ಮವನ್ನು ನೀಡಿತ್ತು. ಮಧ್ಯ ಹಾಗೂ ಮಾದಕ ವ್ಯಸನಿಯ ಚಟದಿಂದ ಬದುಕನ್ನು ದುಸ್ಥಿತಿಗೆ ದೂಡಿದ ವಿಲಿಯಮ್ಸ್ ನನ್ನು ಈ ಬಾರಿ ಸಾಧಕನಾಗಿ ಮುಂದುವರೆಯುವ ಅವಕಾಶವನ್ನು ಬದುಕಿನ ಅದೃಷ್ಟ ಕಲ್ಪಿಸಿಕೊಡುತ್ತದೆ.

2011 ರ ಜನವರಿ 6 ರಂದು ‘ಟುಡೆ’ ಎನ್ನುವ ಕಾರ್ಯಕ್ರಮಕ್ಕೆ ಹಿನ್ನಲೆ ಧ್ವನಿ ನೀಡುವ  ಅವಕಾಶ ಲಭಿಸುತ್ತದೆ. ಇದಾದ ಬಳಿಕ ಜನಪ್ರಿಯ ಕಾರ್ಯಕ್ರಮ ‘ಲೇಟ್ ನೈಟ್ ವಿಥ್ ಜಿಮ್ಮಿ ಫಾಕ್ಲೋನ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ತನ್ನ ವಾಯ್ಸ್ ಓವರ್ ಕೌಶಲ್ಯವನ್ನು ಮೆರೆಯುತ್ತಾರೆ.

ಎಂ.ಎಸ್.ಎನ್.ಬಿ.ಸಿ ವಾಹಿನಿಯಲ್ಲಿ ‘ಲೀನ್ ಫಾರ್ವಡ್’..  ಹೀಗೆ ನೂರಾರು ಕಾರ್ಯಕ್ರಮಗಳಿಗೆ ಮೊದಲ ಆಯ್ಕೆಯ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ವಿಲಿಯಮ್ಸ್ ಮಿಂಚುತ್ತಾರೆ. ಜಾಹೀರಾತಿನಿಂದ ಹಿಡಿದು, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾದವರೆಗೂ ವಿಲಿಯಮ್ಸ್ ನ ಧ್ವನಿ ಜನಮನದಲ್ಲಿ ಉಳಿಯುತ್ತದೆ. ಇದೇ ವೇಳೆಯಲ್ಲಿ ಹತ್ತಾರು ಅಂತಾರಾಷ್ಟ್ರೀಯ ಮಾಧ್ಯಮಗಳು ಹಾಗೂ ಪತ್ರಿಕೆಗಳು ವಿಲಿಯಮ್ಸ್ ಜೀವನದ ಸಂಕಷ್ಟ, ಸಾಧನೆಯ ಕುರಿತು ಸಂದರ್ಶನ ಮಾಡುತ್ತದೆ. ಇದೆಲ್ಲದರ ನಡುವೆ ವಿಲಿಯಮ್ಸ್ ಅವರು ಸರಿಸುಮಾರು 20 ವರ್ಷಗಳ ಬಳಿಕ ತನ್ನ ತಾಯಿಯನ್ನು ಭೇಟಿಯಾಗುತ್ತಾರೆ.

2015 ರಲ್ಲಿ ವಿಲಿಯಮ್ಸ್ ಜೀವನದಲ್ಲಿ ನಡೆದ ಒಂದು ಕೆಟ್ಟ ಘಳಿಗೆಯನ್ನು ಮರೆಯಲು ತನ್ನಂತೆ ನಗರದಲ್ಲಿ ಚಟಗಳಿಗೆ ಬಲಿಪಶುಗಳಾಗಿರುವ ಜನರಿಗೆ ಒಂದು ಆಶ್ರಯ ತಾಣ ನಿರ್ಮಿಸಿ ಅವರ ಜೀವನ ಪಾಲನೆಯನ್ನು ಮಾಡಬೇಕೆನ್ನುವ ನಿಟ್ಟಿನಲ್ಲಿ “ಟೆಡ್ ವಿಲಿಯಮ್ಸ್ ಪ್ರೊಜೆಟ್” ಎನ್ನುವ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸುತ್ತಾರೆ.

ವಿಲಿಯಮ್ಸ್ ರ ‘ಗೋಲ್ಡನ್ ವಾಯ್ಸ್ ಮ್ಯಾನ್’ ಕಾರ್ಯಕ್ರಮದ ಜನಪ್ರಿಯತೆಯಿಂದ ಇಂದು ಅಮೇರಿಕಾದಲ್ಲಿ ಅವರನ್ನು ಗೋಲ್ಡನ್ ವಾಯ್ಸ್ ಮ್ಯಾನ್ ಎಂದು ಕರೆಯುತ್ತಾರೆ. ವಿಲಿಯಮ್ಸ್ ತನ್ನ ಬದುಕಿನ ಕಥೆ-ವ್ಯಥೆಗಳನ್ನೆಲ್ಲಾ ‘A Golden Voice: How Faith, Hard Work, and Humility Brought Me from the Streets to Salvation’ ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಇದಕ್ಕೆ ಹೇಳುವುದು ಬದುಕು ಒಂದು ಕಾಣದ ಕೊಡುಗೆಗಳ ಡಬ್ಬಿ ಎಂದು.. ಖುಷಿಯೋ.. ಬೇಜಾರೋ.. ಉತ್ತರ ನೀಡುವುದು ಓಡುವ ಪರಿಸ್ಥಿತಿ ಎನ್ನುವ ಕಾಲ ಮಾತ್ರ..

ಸುಹಾನ್ ಶೇಕ್

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.