ಮತ್ತೆ ಬಂದಳು ಬೋಲ್ಡ್ ಬೆಡಗಿ ನೇಹಾ ಸಕ್ಸೇನಾ
ಗ್ಲಾಮರಸ್ ಅಲ್ಲ ಓಜಸ್‌ನಲ್ಲಿ ಕ್ಲಾಸಿ ಲುಕ್
Team Udayavani, Jan 30, 2020, 7:01 AM IST
ಕನ್ನಡದಲ್ಲಿ “ಬೈಪಾಸ್ ರೋಡ್’, “ಜಸ್ಟ್ ಲವ್’, “ಒನ್ ಟೈಮ್’, “ದಂಡು’, “ಗೇಮ್’ ಮೊದಲಾದ ಚಿತ್ರಗಳಲ್ಲಿ ತನ್ನ ಗ್ಲಾಮರಸ್ ಮತ್ತು ಬೋಲ್ಡ್ ಲುಕ್‌ನಲ್ಲಿ ನೋಡುಗರ ಮತ್ತು ಸಿನಿಮಂದಿಯ ಗಮನ ಸೆಳೆದಿದ್ದ ಮುಂಬೈ ಬೆಡಗಿ ನೇಹಾ ಸಕ್ಸೇನಾ ಈಗ ಮತ್ತೆ ಬಂದಿದ್ದಾರೆ. ಇತ್ತೀಚೆಗೆ ಕನ್ನಡಕ್ಕಿಂತ ಹೆಚ್ಚಾಗಿ ಮಲೆಯಾಳಂ ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗಿರುವ ನೇಹಾ ಸಕ್ಸೇನಾ, “ಓಜಸ್’ ಚಿತ್ರದ ಮೂಲಕ ಮತ್ತೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಶುರುವಾಗಿದ್ದ “ಓಜಸ್’ ಚಿತ್ರ ಕೆಲ ತಾಂತ್ರಿಕ ಕಾರಣಗಳಿಂದ ತೆರೆಗೆ ಬರಲು ತಡವಾಗಿತ್ತು. ಸದ್ಯ ತನ್ನ ಬಹು ತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರ ಫೆಬ್ರವರಿ ಮೊದಲ ವಾರ ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ, ಇಲ್ಲಿಯವರೆಗೆ ಬೋಲ್ಡ್ ಮತ್ತು ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚು ಗಮನ ಸೆಳೆದಿದ್ದ ನೇಹಾ ಸಕ್ಸೇನಾ ಈ ಚಿತ್ರದಲ್ಲಿ ಅದಕ್ಕೆ ವಿರುದ್ದವಾದ ಔಟ್ ಅಯಂಡ್ ಔಟ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಈ ಬಗ್ಗೆ ಮಾತನಾಡುವ ನೇಹಾ ಸಕ್ಸೇನಾ, “ಕನ್ನಡದಲ್ಲಿ ನನಗೆ ಇಲ್ಲಿಯವರೆಗೆ ಸಿಕ್ಕ ಸಿನಿಮಾಗಳು ಮತ್ತು ಅದರಲ್ಲಿ ನನ್ನ ಕ್ಯಾರೆಕ್ಟರ್ ಎಲ್ಲವೂ ಬೋಲ್ಡ್ ಆ್ಯಂಡ್ ಗ್ಲಾಮರಸ್ ಆಗಿದ್ದರಿಂದ, ಸಹಜವಾಗಿಯೇ ನಾನು ಬೋಲ್ಡ್ ಆ್ಯಂಡ್ ಗ್ಲಾಮರಸ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದೆ. ಆದರೆ ಮೊದಲ ಬಾರಿಗೆ “ಓಜಸ್’ ಸಿನಿಮಾದಲ್ಲಿ ಡಿ-ಗ್ಲಾಮರಸ್ ಆದ್ರೆ, ಕ್ಲಾಸಿ ಲುಕ್ ಇರುವಂಥ ಕ್ಯಾರೆಕ್ಟರ್ ಸಿಕ್ಕಿದೆ.
ನನಗೂ ಕೂಡ ಬದಲಾವಣೆ ಬೇಕಾಗಿದ್ದರಿಂದ ಅತ್ಯಂತ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ. ಅಂದಹಾಗೆ, ನೇಹಾ ಸಕ್ಸೇನಾ “ಓಜಸ್’ ಚಿತ್ರದಲ್ಲಿ ಬಡ ಕುಟುಂಬದಲ್ಲಿ ಅನೇಕ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ ಬೆಳೆದು ಕೊನೆಗೆ ಡಿ.ಸಿ ಆಗುವ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. “ಇದೊಂದು ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರ. ಬಡ ಕುಟುಂಬದ ಹುಡುಗಿಯೊಬ್ಬಳು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾಳೆ.
ಕೊನೆಗೆ ಎಲ್ಲವನ್ನೂ ಮೀರಿ ನಿಂತು ಇಡೀ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದು ನನ್ನ ಪಾತ್ರ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಗಂಭೀರ ಪಾತ್ರ ಮಾಡಿದ್ದೇನೆ. ನನ್ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇದೆ. ನೋಡುಗರಿಗೆ ಕೂಡ ನನ್ನ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ’ ಎನ್ನುವುದು ನೇಹಾ ಸಕ್ಸೇನಾ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.