ಫೆ.14ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ


Team Udayavani, Jan 30, 2020, 3:00 AM IST

feb-14

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2020, ಫೆ.14ರಿಂದ 19ರವರೆಗೆ ನಡೆಯಲಿದ್ದು, ಮಹಾತ್ಮಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಧಿಪಥ ಶೀರ್ಷಿಕೆಯಡಿ ನಾಟಕೋತ್ಸವ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.13ರಂದು ಜಾನಪದ ಕಾರ್ಯಕ್ರಮದೊಂದಿಗೆ ಪ್ರಚಾರ ಆರಂಭ ವಾಗಲಿದ್ದು, 14ರಿಂದ ಆರು ದಿನಗಳ ಕಾಲ ಐದು ವೇದಿಕೆಗಳಲ್ಲಿ ಭಾರತದ ಇತರೆ ಭಾಷೆಗಳ 11 ನಾಟಕಗಳು, ಕನ್ನಡದ ಹತ್ತು ನಾಟಕಗಳಲ್ಲದೆ, 2 ಯಕ್ಷಗಾನ ಪ್ರಸಂಗಗಳು, ಒಂದು ಬಯಲಾಟ ಹಾಗೂ ಒಂದು ತೊಗಲುಗೊಂಬೆಯಾಟಗಳು ಪ್ರದರ್ಶನಗೊಳ್ಳಲಿವೆ ಎಂದರು.

25 ನಾಟಕಗಳ ಪ್ರದರ್ಶನ: ರಂಗಾಯಣ ರೆಪರ್ಟರಿ ಪ್ರಸ್ತುತಪಡಿಸುವ ಗಾಂಧಿ ವರ್ಸಸ್‌ ಗಾಂಧಿ, ಮೈಸೂರಿನ ಹವ್ಯಾಸಿ ಕಲಾವಿದರು ಪ್ರಸ್ತುತಪಡಿಸುವ ಮಹಾತ್ಮ ಹಾಗೂ ಮುಂಬೈನ ವರ್ಕಿಂಗ್‌ ಟೈಟಲ್‌ ಪ್ರಸುತಪಡಿಸುವ ಮಹದೇವ ಭಾಯಿ ಸೇರಿದಂತೆ ಗಾಂಧಿ ಬಗೆಗಿನ ಮೂರು ನಾಟಕಗಳು ಸೇರಿ 25 ನಾಟಕಗಳ ಪ್ರದರ್ಶನವಿದೆ.

ಮುಖ್ಯಂತ್ರಿ ನಾಟಕ ಪ್ರದರ್ಶನ: ಕನ್ನಡದ ಆಧುನಿಕ ರಂಗಭೂಮಿಯಲ್ಲಿ ಈವರೆಗೆ 700ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿದೆ.

ಸುಭದ್ರ ಕಲ್ಯಾಣ ನಾಟಕ ಪ್ರದರ್ಶನ: ವೃತ್ತಿ ರಂಗಭೂಮಿಯನ್ನು ಗೌರವಿಸುವ ದೃಷ್ಟಿಯಿಂದ ಹಿರಿಯ ರಂಗ ಸಂಗೀತ ನಿರ್ದೇಶಕ ಪರಮಶಿವನ್‌ ಸಂಗೀತ ನೀಡಿರುವ ಮೈಸೂರಿನ ನಟನ ರಂಗಶಾಲೆಯವರಿಂದ ಸುಭದ್ರ ಕಲ್ಯಾಣ ನಾಟಕ ಪ್ರದರ್ಶನವಿದೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹಾಗೂ ಹಿರಿಯ ಸಂಗೀತಗಾರ ಪರಮಶಿವನ್‌ ಅವರನ್ನು ಇದೇ ಸಂದರ್ಭದಲ್ಲಿ ಗಾಂಧಿ ಪಥ ರಂಗ ಗೌರವನೀಡಿ ಸನ್ಮಾನಿಸಲಾಗುವುದು ಎಂದರು.

ಬಹುರೂಪಿ ಜಾನಪದ ಉತ್ಸವ: ಫೆ.13ರಂದು ಬಹುರೂಪಿ ಜಾನಪದ ಉತ್ಸವ ಉದ್ಘಾಟನೆಯಾಗಲಿದ್ದು, ಇದರಲ್ಲಿ ರಾಜ್ಯದ ಕೊಡವ, ತುಳು, ಬ್ಯಾರಿ, ಅರೆ ಭಾಷೆ, ಜಾನಪದ ಮತ್ತು ಬಯಲಾಟ ಅಕಾಡೆಮಿಗಳು ಪ್ರಾಯೋಜಿಸುವ ಕಲಾ ಪ್ರಕಾರಗಳು ಈ ಬಾರಿಯ ಉತ್ಸವದ ವಿಶೇಷತೆಯಾಗಿದೆ ಎಂದು ಹೇಳಿದರು.

ಫೆ.15ರಿಂದ 19ರವರೆಗೆ ಮೈಸೂರಿನ ವಿವಿಧೆಡೆ ಮೈಸೂರಿನ ಗಾಂಧೀ ರಂಗಪಯಣ ಪ್ರಸ್ತುತಪಡಿಸುವ ಪಾಪು ಗಾಂಧಿ-ಗಾಂಧಿ ಬಾಪು ನಾಟಕ ಪ್ರದರ್ಶನಗೊಳ್ಳಲಿದೆ. ಫೆ.19ರಂದು ಕವಿಕಟ್ಟೆಯಲ್ಲಿ ಸಂಜೆ 4ಗಂಟೆಗೆ ಕವಿ ಕಂಡ ಗಾಂಧಿ ಎಂಬ ನಮ್ಮ ಹಿರಿಯ ಶ್ರೇಷ್ಠ ಕವಿಗಳು ಗಾಂಧಿ ಕುರಿತು ರಚಿಸಿದ ಕವನಗಳನ್ನು ರಂಗಾಯಣ ರೆಪರ್ಟರಿಯ ಹಿರಿಯ ಕಲಾವಿದರು ವಾಚಿಸಲಿದ್ದಾರೆ.

ಪುಸ್ತಕ ಮಳಿಗೆಗಳು: ಬಹುರೂಪಿ ನಾಟಕೋತ್ಸವದ ಆಹಾರ ಮಳಿಗೆ ವಿಚಾರದಲ್ಲಿ ವಿಶೇಷ ಗಮನಹರಿಸಿದ್ದು, ಎಂದಿನಂತೆ ಆಹಾರ ಮಳಿಗೆಗಳ ಅರ್ಜಿ ಕರೆಯದೆ ಕನ್ನಡ ನಾಡಿನ ಹತ್ತು ದೇಸಿಯ ಆಹಾರ ಮಳಿಗೆಗಳನ್ನು ನಿರ್ಮಿಸಲಿದ್ದು, ಮಲೆನಾಡು, ಕರಾವಳಿ, ಉತ್ತರಕನ್ನಡ, ಕೊಡವ, ಕಲ್ಯಾಣ ಕರ್ನಾಟಕದ ವಿಶೇಷ ಆಹಾರಗಳು ಇರಲಿವೆ. ಕರಕುಶಲ ಮಳಿಗೆಗಳು, ಬೆಂಗಳೂರು ಗಾಂಧಿ ಭವನದ ಗಾಂಧಿಪ್ರತಿಮೆ ಮತ್ತು ಸರಕುಗಳು, ಪುರಾತನ ನಾಣ್ಯ,ನೋಟು ಸಂಗ್ರಹಗಳ ಪ್ರದರ್ಶನ, ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಮಳಿಗೆಗಳು ಇರಲಿವೆ.

ಕೌಂಟರ್‌ಗಳಲ್ಲಿ ಟಿಕೆಟ್‌ ಮಾರಾಟ: ಫೆ.4ರಿಂದಲೇ ನಾಟಕ ಪ್ರದರ್ಶನಗಳ ಮುಂಗಡ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಮಾಡಿದ್ದು, ಟಿಕೆಟ್‌ ದರ 100 ರೂ. ನಿಗದಿಪಡಿಸಿದೆ. ರಂಗಾಯಣದ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ ಪಡೆಯಬಹುದಾಗಿದೆ. ಜತೆಗೆ ಬಹುರೂಪಿ ನಾಟಕೋತ್ಸವದ ಸಂದರ್ಭದಲ್ಲಿ ನಾಟಕ ಪ್ರದರ್ಶನದ ಒಂದು ಗಂಟೆ ಮುಂಚಿತವಾಗಿ ಕೌಂಟರ್‌ಗಳಲ್ಲಿ ಟಿಕೆಟ್‌ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.

ಕೋಟಿ ರೂ.ಗಳಿಗೆ ಪ್ರಸ್ತಾವನೆ: ಈ ಬಾರಿಯ ಬಹುರೂಪಿ ನಾಟಕೋತ್ಸವಕ್ಕೆ 95 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದ್ದು, ಸರ್ಕಾರದಿಂದ 1 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಮೈಸೂರು ರಂಗಾಯಣದ ಅಭಿವೃದ್ಧಿಗಾಗಿ 9 ಕೋಟಿ ಅನುದಾನ ಕೇಳಿದ್ದೇವೆ. ಕಳೆದ ವರ್ಷದ ರಂಗ ಚಟುವಟಿಕೆಯ ಬಾಕಿ 2 ಕೋಟಿ ರೂ.ಗಳನ್ನು ಸರ್ಕಾರ ಕೊಡಬೇಕಿದೆ ಎಂದು ವಿವರಿಸಿದರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಗಾಂಧಿ ಪಥ ದ ಭಿತ್ತಿಚಿತ್ರವನ್ನು ಹಿರಿಯ ರಂಗಕರ್ಮಿ ಎಚ್‌.ಕೆ.ರಾಮನಾಥ್‌ ಬಿಡುಗಡೆ ಮಾಡಿದರು. ಬಹುರೂಪಿ ಪ್ರಧಾನ ಸಂಚಾಲಕ ಹುಲುಗಪ್ಪ ಕಟ್ಟಿàಮನಿ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ , ಹಿರಿಯ ಕಲಾವಿದರಾದ ಪ್ರಶಾಂತ್‌ ಹಿರೇಮಠ, ಗೀತಾ ಮೋಂಟಡ್ಕ, ರಾಮನಾಥ್‌ ಉಪಸ್ಥಿತರಿದ್ದರು.

25 ನಾಟಕಗಳ ವಿವರ
ಫೆ.13, ಸಂಜೆ 7.30
ಸ್ಥಳ: ಕಲಾಮಂದಿರ
ವೀರ ಅಭಿಮನ್ಯು ಪೌರಾಣಿಕ ಯಕ್ಷಗಾನ ಪ್ರಸಂಗ (ಕನ್ನಡ)

ಫೆ.14, ಸಂಜೆ 7.30
ಸ್ಥಳ: ಭೂಮಿಗೀತ, ರಂಗಾಯಣ
ಸದಾನ್‌ಬಗಿ ಇಶೈ (ಮಣಿಪುರಿ)
ರಾತ್ರಿ 8
ಸ್ಥಳ: ವನರಂಗ, ರಂಗಾಯಣ
ವೀರರಾಣಿ ಕಿತ್ತೂರು ಚೆನ್ನಮ್ಮ (ದೊಡ್ಡಾಟ)
ಸಂಜೆ 7.30
ಸ್ಥಳ: ಕಿರು ರಂಗಮಂದಿರ
ಬೆಂದಕಾಳು ಆನ್‌ ಟೋಸ್ಟ್‌ (ಕನ್ನಡ)

ಫೆ.15, ಸಂಜೆ 7.30
ಸ್ಥಳ: ಭೂಮಿಗೀತ
ಮಹದೇವ ಭಾಯಿ (ಇಂಗ್ಲೀಷ್‌/ಹಿಂದಿ)
ಸ್ಥಳ: ಕಿರು ರಂಗಮಂದಿರ
ಭಗವದಜ್ಜುಕೀಯಮ್‌ (ಹಿಂದಿ)
ಸ್ಥಳ: ಕಲಾಮಂದಿರ
ಮುಖ್ಯಮಂತ್ರಿ (ಕನ್ನಡ)
ರಾತ್ರಿ 8
ಸ್ಥಳ: ವನರಂಗ
ಝಲ್ಕರಿ (ಹಿಂದಿ)

ಫೆ.16, ಸಂಜೆ 7.30
ಸ್ಥಳ:ಭೂಮಿಗೀತ
ಸಂಗೀತ್‌ಬಾರೀ (ಮರಾಠಿ)
ಐಂದಗಿ ಔರ್‌ ಜೋಂಕ್‌ (ಹಿಂದಿ)
ಈಡಿಪಸ್‌ (ಬೆಂಗಾಲಿ
ರಾತ್ರಿ 8
ಮಂಟೇಸ್ವಾಮಿ ಕಥಾಪ್ರಸಂಗ (ಕನ್ನಡ)

ಫೆ.17, ಸಂಜೆ 6
ಸ್ಥಳ: ಕಿರು ರಂಗಮಂದಿರ
ದ ಬ್ಲಾಕ್‌ ಬೋರ್ಡ್‌ ಲ್ಯಾಂಡ್‌ (ಹಿಂದಿ/ಇಂಗ್ಲೀಷ್‌)
ಸಂಜೆ 6.30
ಸ್ಥಳ: ಭೂಮಿಗೀತ
ಗಾಂಧಿ ವರ್ಸಸ್‌ ಗಾಂಧಿ (ಕನ್ನಡ)
ಸಂಜೆ 7, ಸ್ಥಳ: ವನರಂಗ
ದೇವಯಾನಿ (ಕನ್ನಡ)
ಸಂಜೆ 7.30, ಸ್ಥಳ: ಕಲಾಮಂದಿರ
ಸುಭದ್ರ ಕಲ್ಯಾಣ (ಕನ್ನಡ)

ಫೆ.18, ಸಂಜೆ 6
ಸ್ಥಳ: ಕಿರು ರಂಗಮಂದಿರ
ಮಿಸ್‌ ಜೂಲಿ (ಕನ್ನಡ)
ಸಂಜೆ 6.30, ಸ್ಥಳ: ಭೂಮಿಗೀತ
ಪರಿತ್ರಾಣ್‌ (ಗುಜರಾತಿ)
ಸಂಜೆ 7, ಸ್ಥಳ: ವನರಂಗ
ಕೆಂಡೋನಿಯನ್ಸ್‌ (ಕನ್ನಡ)
ಸಂಜೆ 7.30, ಕಲಾಮಂದಿರ
ಶಾಕುಂತಲಂ (ಮಲಯಾಳಂ)

ಫೆ.19, ಸಂಜೆ 6
ಸ್ಥಳ: ಕಿರು ರಂಗಮಂದಿರ
ಸ್ವಭಾಬ್‌ಜತ (ಅಸ್ಸಾಮಿ)
ಸಂಜೆ 6.30, ಭೂಮಿಗೀತ
ಅಕ್ಷಯಾಂಬರ (ಕನ್ನಡ)
ಸಂಜೆ 7, ವನರಂಗ
ಕಾಮ್ಯಕಲಾ ಪ್ರತಿಮಾ (ಕನ್ನಡ)
ಸಂಜೆ 7.30, ಕಲಾಮಂದಿರ
ಮಹಾತ್ಮ (ಕನ್ನಡ)

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.