“ಗ್ರಾಮೋತ್ಸವ ಪ್ರತಿ ಹಳ್ಳಿ ಹಳ್ಳಿಯಲ್ಲಿ ನಡೆಯಲಿ’
ಅಜೆಕಾರು: ಆದಿ ಗ್ರಾಮೋತ್ಸವ ಉದ್ಘಾಟನೆ
Team Udayavani, Jan 29, 2020, 11:00 PM IST
ಅಜೆಕಾರು: ಗ್ರಾಮಗಳಲ್ಲಿ ಗ್ರಾಮೀಣ ಶೈಲಿಯಲ್ಲಿ ಗ್ರಾಮೋತ್ಸವ ನಡೆಯಬೇಕು. ಗ್ರಾಮೋತ್ಸವದ ಮೂಲಕ ಪ್ರೀತಿ ವಿಶ್ವಾಸ ತುಂಬಿ ಬರಲಿ. ದ್ವೇಷಗಳು ಅಳಿಯಲಿ ಎಂದು ಉಚ್ಚ ನ್ಯಾಯಾಲಯದ ವಕೀಲ, ಹಿರಿಯ ಸಾಹಿತಿ ಡಾ| ರೇವಣ್ಣ ಬಳ್ಳಾರಿ ಹೇಳಿದರು.
ಅಜೆಕಾರಿನಲ್ಲಿ ನಡೆದ ಆದಿಗ್ರಾಮೋತ್ಸವವನ್ನು ಗ್ರಾಮೀಣ ಶೈಲಿಯ ದೀಪಾರಾಧನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಜತೆಗೆ ಮಾತೃ ಭಾಷೆ ತುಳುವಿನ ಬೆಳವಣಿಗೆಗೂ ಪ್ರೋತ್ಸಾಹ ನೀಡಬೇಕು. ತುಳುವಿನ ಹಿರಿಮೆ ಗರಿಮೆಯನ್ನು ನಾಡಿನ ಉದ್ದಗಲಕ್ಕೂ ಪಸರಿಸಬೇಕು ಎಂದು ಮುಖ್ಯ ಅತಿಥಿಗಳಾಗಿದ್ದ ಅಳೂಪ ರಾಜವಂಶಸ್ಥರಾದ ಡಾ| ಆಕಾಶ್‌ರಾಜ್ ಹೇಳಿದರು.
ಅಜೆಕಾರು ಪೇಟೆಯಿಂದ ಎರಡು ಕಿ.ಮೀ. ದೂರದವರೆಗೆ ನಡೆದ ಮೆರವಣಿಗೆಗೆ ವಕೀಲರಾದ ಹರೀಶ್ ಅಧಿಕಾರಿ ಚಾಲನೆ ನೀಡಿದರು.
ಈ ವರ್ಷದ ವಿಶೇಷ ಆಕರ್ಷಣೆಯಾಗಿದ್ದ ಗ್ರಾಮೀಣ ಕೋಗಿಲೆ ಸಂಗೀತ ಸ್ಪರ್ಧೆಗೆ ರಿಯಾಲಿಟಿ ಶೋ ಖ್ಯಾತಿಯ ಕ್ಷಿತಿ ಕೆ.ರೈ ಹಾಡುವ ಮೂಲಕ ಚಾಲನೆ ನೀಡಿದರು.
ಗ್ರಾಮೀಣ ಪ್ರದೇಶದ ಸುಂದರ ಪರಿಸರದಲ್ಲಿ ಆದಿಗ್ರಾಮೋತ್ಸವದ ಪರಿಕಲ್ಪನೆಯಡಿ ನಿರಂತರ ಎರಡು ದಶಕಗಳಿಂದ ಕಾರ್ಯಕ್ರಮ ನಡೆಸುತ್ತಿರುವುದು ಡಾ.ಶೇಖರ ಅಜೆಕಾರು ಅವರ ಸಾಹಸ ಎಂದು ಜಾನಪದ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಭಿಪ್ರಾಯ ಪಟ್ಟರು.
ಹಿರಿಯ ಉದ್ಯಮಿ ಸಮಾಜ ಸೇವಕ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅವರು ಆದಿಗ್ರಾಮೋತ್ಸವದ ಗ್ರಾಮ ಗೌರವ ಸ್ವೀಕರಿಸಿದರು.
ಸಂಘಟಕ ಡಾ| ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ತಾಲೂಕು ಪಂಚಾಯತ್ ಉಪಾಧ್ಯಕ್ಷ ಹರೀಶ ನಾಯಕ್, ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ಎಂ, ಉಪಾಧ್ಯಕ್ಷೆ ಜ್ಯೋತಿ ಪೂಜಾರಿ. ಎ.ಐ.ಸಿ.ಎಲ್ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ನಾಗರಾಜ ಗುರುಪುರ ಮುಂಬಯಿ, ವಿಶ್ವಕರ್ಮ ಸಮಾಜದ ಮುಖಂಡ ಅಪ್ಪು ಆಚಾರ್ಯ, ಸೌಮ್ಯಶ್ರೀ ಎಸ್. ಅಜೆಕಾರು, ಶಶಿಕಲಾ ಜಯಂತ್ ಕೋಟ್ಯಾನ್, ಗಿರಿಜಾ ಶಂಕರ ಆಚಾರ್ಯ, ಕೃಷ್ಣ ಶೆಟ್ಟಿ, ಕಿಶೋರ್ ಶೆಟ್ಟಿ, ಪಿ.ಕೆ. ಹಸನಬ್ಬ ಮೂಡುಬಿದಿರೆ, ನವೀನ್ ಟಿ.ಆರ್. ಮೂಡುಬಿದಿರೆ ಮತ್ತು ನಾದವೈಭವಂ ಪ್ರಧಾನ ಕಾರ್ಯದರ್ಶಿ ಅನಸೂಯ ಶಿವಕುಮಾರ್ ಉಪಸ್ಥಿತರಿದ್ದರು.
ಗ್ರಾಮೀಣ ಕೋಗಿಲೆ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ್ ನಾಯಕ್ ಪ್ರಥಮ, ಪ್ರಾರ್ಥನಾ ನಾಯಕ್ ದ್ವಿತೀಯ, ಪ್ರಾಪ್ತಿ ಜ್ಯುನಿಯರ್ ಪ್ರಥಮ ಸ್ಥಾನ ಪಡೆದರು. ತನಿಶಾ ಕಾರ್ಕಳ ಮತ್ತು ಅಭಿರಾಮಿ ಕಾರ್ಕಳ ರನ್ನರ್ ಬಹುಮಾನ ಪಡೆದರು.ಡಾ| ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಶ್ರಯ್ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.