ಕಾನನದ ನಡುವೆ ಕವಳಗುಹೆಯ ಬಿನ್ನಾಣ


Team Udayavani, Jan 30, 2020, 5:51 AM IST

kavala-caves-1

ಒಂದು ಕಡೆ ಬಿದಿರಿನ ಮೆಳೆಗಳ ಓಲಾಟ, ಇನ್ನೊಂದೆಡೆ ಕಾಳಿ ನದಿಯ ಜುಳುಜುಳು ನಿನಾದ, ಅಲ್ಲೇ ಹತ್ತಿರದಲ್ಲಿ ಪಕ್ಷಿಗಳ ಕಲರವ, ಆ ಅರಣ್ಯದಲ್ಲಿ ಅಪರೂಪಕ್ಕೆ ಕಾಣ ಸಿಗುವ ವನ್ಯ ಜೀವಿಗಳು… ಇಂಥ ಪ್ರಾಕೃತಿಕ ಚಿತ್ರಣವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡ ದಾಂಡೇಲಿ ಪ್ರಕೃತಿ ಸೊಬಗನ್ನು ಸವಿಯಲೇಬೇಕು. ಸಾಹಸಮಯ ತಾಣ ವಾದ ದಾಂಡೇಲಿಯಲ್ಲಿರುವ ಸುಂದರ ಚಾರಣ ಸ್ಥಳವೇ ಕವಳ ಗುಹೆ.

ರೋಮಾಂಚನಕಾರಿ ಅನುಭವ ಬೆಟ್ಟ ಕಣಿವೆಗಳ ಅಂಚಿನಲ್ಲಿ ಕಡಿದಾದ ಮಾರ್ಗ ದಲ್ಲಿ ಮೂರು ಕಿ.ಮೀ.ಸಾಗಿದರೆ ದಟ್ಟವಾದ ಅರಣ್ಯ ಸಿಗುತ್ತದೆ. ಈ ಮಾರ್ಗವಾಗಿ ಚಾರಣ ಪ್ರಾರಂಭ ವಾಗಲಿದ್ದು, ಕವಳಗುಹೆ ತಲುಪಲು 2 ಮಾರ್ಗಗಳಿವೆ. ಬೆಟ್ಟದ (ಹಿಂಬದಿ) ಮೇಲಿನ ಮಾರ್ಗವಾಗಿ ತೆರಳಿದರೆ 3 ಕಿ.ಮೀ. ಕಾಲು ದಾರಿ ತುಳಿದು ಸಾಗಿದರೆ 540 ಮೆಟ್ಟಿಲುಗಳನ್ನು ಹತ್ತಬೇಕು. 2 ಮಾರ್ಗಗಳು ರೋಮಾಂಚನಕಾರಿ ಅನುಭವ ನೀಡಲಿದ್ದು, ಆಯಾಸವೆನ್ನಿಸಿ ದಾಗ ವಿರಮಿಸುವುದಕ್ಕೂ ಅವಕಾಶವಿದೆ.

ಶಿವಲಿಂಗ ದರ್ಶನ
ಹೀಗೆ ಕಾಲುದಾರಿಯಾಗಿ ಸಾಗಿದವ ರಿಗೆ ನಾಗಝರಿ ಹಳ್ಳ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ತಂಪಾದ ವಾತಾವರಣ ಜತೆಗೆ ಪ್ರಶಾಂತತೆಯ ಅನುಭವವನ್ನು ಬಾನೆತ್ತರಕ್ಕೆ ನಿಂತ ಗುಹೆಗಳು ನೀಡುತ್ತವೆ. ಹೀಗೆ ಕತ್ತಿಯಂತೆ ಜೋತುಬಿದ್ದ ಚೂಪಾದ ಶಿಲೆಗಳು ತಲೆಗೆ ಬಡಿಯದಂತೆ ಎಚ್ಚರಿಕೆ ಯಿಂದ 8 ಮೀಟರ್‌ ಒಳಗೆ ಸಾಗಿದರೆ ಬೃಹತ್‌ ಶಿವಲಿಂಗದ ದರ್ಶನವಾಗುತ್ತದೆ. ಗುಹೆಯೊಳಗೆ ಗೋವಿನ ಕೆಚ್ಚಲಿನಂತೆ ಜೋತು ಬಿದ್ದ ಶಿಲೆಯಿಂದ ಬಸಿಯುತ್ತಿದ್ದ ದ್ರವ್ಯ ಶಿವಲಿಂಗಕ್ಕೆ ಅಭಿಷೇಕ ಮಾಡಿದಂತೆ ಭಾಸವಾಗುವಂತಿದ್ದು, ಇದನ್ನು ಕಣ್ತುಂಬಿಸಿಕೊಂಡವರ ಮನದಲ್ಲಿ ಧನ್ಯತಾ ಅನುಭಾವ ಮೂಡುವುದು ಸುಳ್ಳಲ್ಲ.

ಅನುಮತಿ ಖಡ್ಡಾಯ
ಕವಳಗುಹೆ ಚಾರಣಕ್ಕೆ ಅಲ್ಲಿನ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಚಾರಣಆರಂಭಕ್ಕೆ ಮುನ್ನ 3 ಚೆಕ್‌ಪೋಸ್ಟ್‌ ಗಳಲ್ಲಿ ತಪಾಸಣೆ ನಡೆಯುತ್ತದೆ. ಅಲ್ಲಿನ ಮೇಲಧಿ ಕಾರಿಗಳಿಂದ ಅನುಮತಿ ಖಾತ್ರಿ ಆದ ಅನಂತರವೇ ಚಾರಣದ ಮುಂದಿನ ಮಾರ್ಗ ತೆರವುಗೊಳ್ಳುತ್ತದೆ.

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.